ರಾಷ್ಟ್ರಮಟ್ಟದ ಕರಾಟೆಯಲ್ಲಿ ಬೆಳ್ಳಿ ಬಾಚಿಕೊಂಡ ಕುಮಟಾ ಬಾಡ-ಗುಡೇಅಂಗಡಿಯ ಪವನ್ ಹರಿಕಾಂತ್ರ :

ಕುಮಟಾ : ತಾಲೂಕಿನ ಬಾಡದ ಜನತಾ ವಿದ್ಯಾಲಯ ಪ್ರೌಢಶಾಲೆಯ ವಿದ್ಯಾರ್ಥಿ ಕರಾಟೆ ಪಟು ಪವನ್ ನಾಗಪ್ಪ ಹರಿಕಾಂತ್ರ ಭಾಗವಹಿಸುವ ಮೂಲಕ ಹಲವು ಕಡೆಗಳಲ್ಲಿ ಪದಕವನ್ನು ತನ್ನದಾಗಿಸಿಕೊಂಡು ರಾಜ್ಯಮಟ್ಟದಲ್ಲಿ ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾನೆ.
ಈಚೆಗೆ ಕೋಪ್ಪಳದಲ್ಲಿ ನಡೆದ ರಾಷ್ಟ್ರಮಟ್ಟದ ಮುಕ್ತ ಕರಾಟೆ ಸ್ಪರ್ಧೆಯಲ್ಲಿ 12ರಿಂದ 15 ವರ್ಷದೊಳಗಿನವರ ವಿಭಾಗದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ದ್ವಿತೀಯ ಸ್ಥಾನ ಗಳಿಸಿದ್ದಾನೆ. ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾಗಿರುವ ಹತ್ತಾರು ಕರಾಟೆ ತರಬೇತಿ ಕೇಂದ್ರಗಳಿಂದ ಹಾಗೂ ಶಾಲೆಗಳಿಂದ ಆಗಮಿಸಿದ ಸಾವಿರಕ್ಕೂ ಹೆಚ್ಚು ಸ್ಪರ್ಧಾಳುಗಳಲ್ಲಿ 12ರಿಂದ 15ವರ್ಷದೊಳಗಿನವರ ವಿಭಾಗದಲ್ಲಿ ಗ್ರಾಮೀಣ ಪ್ರತಿಭೆಯಾಗಿ ಪ್ರೌಢಶಾಲಾ ಮಟ್ಟದಲ್ಲಿ ನೀಡಲ್ಪಡುವ ಪ್ರಾಥಮಿಕ ಹಂತದ ತರಭೇತಿಗಳಿಂದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಬಾಡ-ಗುಡೇಅಂಗಡಿಯ ಬಳಿಯಲ್ಲಿನ ಕರಾಟೆ ಪಟು ಅರವಿಂದ ನಾಯ್ಕ ನಿರ್ದೇಶನದಂತೆ ನಾನಾ ವಿಭಾಗಗಳ ಕರಾಟೆ ಪ್ರದರ್ಶನ ಮಾಡಿದ ನಂತರದಲ್ಲಿ ಅಂತಿಮ ತೀರ್ಪಿನ ಅನುಗುಣವಾಗಿ ಹೆಚ್ಚು ಅಂಕಗಳನ್ನು ತನ್ನದಾಗಿಸಿಕೊಂಡು ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ದ್ವಿತೀಯ ಸ್ಥಾನ ಗಳಿಸಿದ್ದಾನೆ.

RELATED ARTICLES  ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ಧನಾಗಿದ್ದವನನ್ನು ತಡೆದು ಬುದ್ದಿಹೇಳಿದ ಪೊಲೀಸರು

ಬಾಡ – ಗುಡೇಅಂಗಡಿ ಮಾದರಿ ರಸ್ತೆಯ ನಾಗಪ್ಪ ಹರಿಕಾಂತ್ರ ಹಾಗೂ ಶೋಭಾ ಹರಿಕಾಂತ್ರ ದಂಪತಿಗಳ ಪುತ್ರನಾಗಿರುವ ಈತ, ಸ್ವ ಆಸಕ್ತಿಯಿಂದ ಕರಾಟೆ ಅಭ್ಯಾಸ ಮಾಡಿ ಈ ಸಾಧನೆ ಮಾಡಿದ್ದಾನೆ. ಈತನ ರಾಷ್ಟ್ರ ಮಟ್ಟದ ಸಾಧನೆಯನ್ನು ಶಾಲಾ ಶಿಕ್ಷಕ ವೃಂದ, ಆಡಳಿತ ಮಂಡಳಿ, ಊರಿನ ನಾಗರಿಕರು ಹಾಗೂ ಪಾಲಕರು ಹರ್ಷವ್ಯಕ್ತಪಡಿಸಿದ್ದಾರೆ

RELATED ARTICLES  ಎಲ್ಲರೂ ಕಲೆಯನ್ನು ಉಳಿಸಿ ಬೆಳೆಸಲು ಪ್ರಯತ್ನಿಸಬೇಕು :ನಾಗರಾಜ ನಾಯಕ ತೊರ್ಕೆ