ಭಟ್ಕಳ:ವಿದ್ಯಾಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಮಕ್ಕಳ ಸಂತೆಯನ್ನು ಹಮ್ಮಿಕೊಳ್ಳಲಾಗಿತ್ತು.ಉದ್ಘಾಟಿಸಿ ಮಾತನಾಡಿದ ಭಟ್ಕಳ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಡಾ. ಸುರೇಶ ನಾಯಕ ವಿದ್ಯಾರ್ಥಿ ದೆಸೆಯಲ್ಲಿಯೆ ಮಕ್ಕಳು ವಿದ್ಯಾಭ್ಯಾಸದೊಂದಿಗೆ ವ್ಯವಹಾರಿಕ ಜ್ಞಾನವನ್ನು ಪಡೆಯುವಂತಾಗಬೇಕು. ಇದರಿಂದ ಕಲಿಕೆಯ ಜೊತೆ ವ್ಯಕ್ತಿತ್ವದ ವಿಕಸನ ಸುಲಭವಾಗುತ್ತದೆ ಎಂದು ಹೇಳಿದರು.

RELATED ARTICLES  ಹೊನ್ನಾವರ : ಅಫಘಾತದಲ್ಲಿ ಪಟ್ಟಣ ಪಂಚಾಯತಿ ಸದಸ್ಯನಿಗೆ ಪೆಟ್ಟು.

  ಮಕ್ಕಳಲ್ಲಿ ವ್ಯಾವಹಾರಿಕ ಜ್ಞಾನ ಹಾಗೂ ಸಂವಹನ ಕೌಶಲವನ್ನು ಅಭಿವೃದ್ಧಿಗೊಳಿಸಲು ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದದ ಪ್ರಯತ್ನ ಶ್ಲಾಘನೀಯ ಎಂದರು. ವಿವಿಧ ತರಹದ ತರಕಾರಿ, ಸಸ್ಯಗಳು, ಹಣ್ಣುಗಳು, ದಿನೋಪಯೋಗಿ ವಸ್ತುಗಳನ್ನು ಮಕ್ಕಳು ಮಾರಾಟ ಮಾಡಿದರು.

RELATED ARTICLES  ಮನೆಯ ಕಂಪೌಂಡ್ ಒಳಗೆ ಹೆಬ್ಬಾವು : ಕಂಡು ಕಂಗಾಲಾದ ಮನೆಯವರು.

    ವಿದ್ಯಾರ್ಥಿಗಳು ಮಾರಾಟ ಮಾಡಿದ ವಿವಿದ ಗೃಹಪಯೋಗಿ ವಸ್ತುಗಳನ್ನು ಡಾ. ಸುರೇಶ ನಾಯ್ಕ ಖರೀಧಿಸಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ರೂಪಾ ರಮೇಶ ಖಾರ್ವಿ ಹಾಗೂ ಶಿಕ್ಷಕಕರು ಇದ್ದರು.