ಕಾರವಾರ : ನೌಕರಿಗಾಗಿ ಜನ ಹಾತೋರೆಯುತ್ತಾರೆ ನಿಜ ಆದರೆ ನೌಕರಿ ಕೊಡಿಸೋದಾಗಿ ವಂಚಿಸಿ ಜೀವನ ಸಾಗಿಸುವವರ ದಂಡೇ ಇದೆ ಎಂಬುದನ್ನು ನಾವು ತಿಳಿದರಬೇಕು.ಹೌದು ಇದಕ್ಕೆ ಸಾಕ್ಷಿ ಕಾರವಾರದ ಈ ಘಟನೆ.
ನೌಕರಿ ಕೊಡಿಸುವುದಾಗಿ ನಂಬಿಸಿ ಹಣ ವಂಚಿಸಿದ ಆರೋಪದಲ್ಲಿ ಮಹಾರಾಷ್ಟ್ರದ ಕೊಲ್ಲಾಪುರದ ವ್ಯಕ್ತಿಯೊಬ್ಬನನ್ನು ನಗರ ಠಾಣೆಪೊಲೀಸರು ಬಂಧಿಸಿದ್ದಾರೆ.
RELATED ARTICLES ಯಕ್ಷಕಲಾ ಭಿತ್ತಿಚಿತ್ರ (Mural Painting) ಕಾರ್ಯಾಗಾರ ಕೇರಳದ ಭಿತ್ತಿಚಿತ್ರ ಯಕ್ಷಗಾನಕ್ಕೆ ಆಲಿಂಗನ
ಹೃಷಿಕೇಶ ದೀಪಕ ಜಾಧವ ಬಂಧಿತ ಆರೋಪಿ. ಈತನು ಮಹಾರಾಷ್ಟ್ರ ವಿದ್ಯುತ್ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿ ಕಾರವಾರದ ತನುಜ್ ಬಾಡ್ಕರ್ ಎಂಬುವವರಿಂದ ಸಾವಿರಾರು ರೂ. ಹಣ ಪಡೆದಿದ್ದ ಎನ್ನಲಾಗಿದೆ.
ಆದರೆ ಈತ ನೌಕರಿ ಕೊಡಿಸದೇ ವಂಚಿಸಿದ್ದಾನೆ ಎಂದು ತನುಜ್ ಅವರ ತಾಯಿ ಆಶಾ ಬಾಡ್ಕರ್ ನಗರ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಈ ಬಗ್ಗೆ ತನಿಖೆ ಕೈಗೆತ್ತಿಕೊಂಡಿದ್ದರು. ಇದೀಗ ಆರೋಪಿ ಅಂದರ್ ಆಗಿದ್ದಾನೆ.
ಹಣ ಕೊಡಿ ಜಾಬ್ ಕೊಡುತ್ತೇನೆ ಎನ್ನೋರ ಬಗ್ಗೆ ಎಚ್ಚರ ವಹಿಸಿ ಅಂದಿದ್ದಾರೆ ಪೋಲೀಸರು.