ತಾಲೂಕಿನ ದಂಡಾಧಿಕಾರಿಗಳು ಹಾಗು ಉಪ ಅರಣ್ಯ ಸಂರಕ್ಷಣಾಧಿಕಾರಿಯವರನ್ನು ಭೇಟಿ ಮಾಡಿ ಪರಿಸರಕ್ಕೆ ಮಾರಕವಾದ ಅಕೆಸಿಯ ಗಿಡಗಳನ್ನು ಯಾವುದೇ ಕಾರಣಕ್ಕೂ ಅರಣ್ಯ ಇಲಾಖೆಯವರು ಎಲ್ಲಿಯೂ ನೆಡಬಾರದೆಂದು ಮುರೂರ್ ಕಲಬ್ಬೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ಎಂ. ಜಿ. ಭಟ್ ಅಕೆಸಿಯ ಒಂದು ರಾಕ್ಷಸಿ ಗಿಡ ಅದು ಇರುವಲ್ಲಿ ಯಾವುದೇ ಅನ್ಯಜಾತಿಯ ಒಳ್ಳೆ ಗಿಡಗಳಿರಲಿ ಹುಲ್ಲು ಕೂಡ ಹುಟ್ಟುವುದಿಲ್ಲ. ಅಂತಹ ಸಸ್ಯವನ್ನು ಬೇರೆಲ್ಲ ದೇಶಗಳಲ್ಲಿ ಬ್ಯಾನ್ ಮಾಡಿದ್ದಾರೆ. ಅಲ್ಲದೆ ಅಂತರ್ಜಲ ಬತ್ತಲು ಅಕೆಸಿಯ ಕೂಡ ಕಾರಣ ಆದ್ದರಿಂದ ಈಕ್ಷಣದಿಂದ ಆ ಗಿಡವನ್ನು ನೆಡುವುದನ್ನು ಬಂದ್ ಮಾಡ್ಲೇಬೇಕೆಂದು ಆಗ್ರಹಿಸಿದರು.

RELATED ARTICLES  ಅನಗತ್ಯ ಓಡಾಟಕ್ಕೆ ಬ್ರೇಕ್ : ವಾಹನ ಜಪ್ತಿ ಮಾಡುವಂತೆ ಸೂಚನೆ.

ಈ ಸಂದರ್ಭದಲ್ಲಿ ಭುವನ್ ಭಾಗವತ್, ನಾಗರಾಜ್ ನಾಯ್ಕ್, ಉದಯ್ ಹರಿಕಾಂತ್, ಪ್ರದೀಪ್ ಕುಮಾರ್, ಜಗದೀಶ್ ಭಟ್, ಬಾಲಕೃಷ್ಣ ನಾಯ್ಕ್, ಧನಂಜಯ, ಎಸ್ ವಿ. ಹೆಗ್ಡೆ, ದಿನೇಶ್, ಶ್ರೀಧರ್, ಮುರುಳಿದ ರ್, ಹಾಗು ಮುರೂರ್ ಕಲ್ಲಬ್ಬೆಯ ಅನೇಕ ಗ್ರಾಮಸ್ಥರು ಹಾಜರಿದ್ದರು.

RELATED ARTICLES  ಬರ್ಬರ ಹತ್ಯೆಯ ಪ್ರಮುಖ ಆರೋಪಿ ಅರೆಸ್ಟ್..!