ಹೊನ್ನಾವರ : ಶರಾವತಿ ನದಿ ನೀರನ್ನುಬೆಂಗಳೂರಿಗೆ ಒಯ್ಯುವ ಸರಕಾರದ ಯೋಜನೆಯನ್ನು ಕೈ ಬಿಡುವಂತೆ ಆಗ್ರಹಿಸಿ ಜು.10ರಂದು ಮೊದಲ ಹಂತದ ಹೋರಾಟ ನಡೆಸಲು ಶರಾವತಿ ನದಿ ಉಳಿಸಿ ಹೋರಾಟ ಸಮಿತಿ ನಿರ್ಧರಿಸಿದೆ. ಹೊನ್ನಾವರದಲ್ಲಿ ಸ್ವಯಂಘೋಷಿತ ಬಂದ್‌ ಆಚರಿಸಿ ಶಾಂತಿಯುತ ಮೆರವಣಿಗೆ ನಡೆಸಿ ತಹಸೀಲ್ದಾರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಲು ನಿರ್ಧರಿಸಲಾಗಿದೆ.

ಪಟ್ಟಣದ ರೋಟರಿ ಕ್ಲಬ್‌ ಸಭಾಭವನದಲ್ಲಿ ಜೀವನದಿ ಶರಾವತಿ ಉಳಿಸಿ ಹೋರಾಟ ಸಮಿತಿ ವತಿಯಿಂದ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿತ್ತು.

RELATED ARTICLES  ದೇಶಭಂಡಾರಿ ಸಮಾಜವು ಸಂಘಟಿತವಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಡಬೇಕು: ಕಾಸರಗೋಡು ಚಿನ್ನಾ.

ಜು.10ರಂದು ಪಟ್ಟಣ ವ್ಯಾಪ್ತಿಯಲ್ಲಿ ಸ್ವಯಂ ಪ್ರೇರಿತವಾಗಿ ಬಂದ್‌ ಆಚರಿಸಲು ನಿರ್ಧರಿಸಲಾಗಿದ್ದು, ಯಾವುದೇ ಒತ್ತಾಯವಿಲ್ಲ. ಜೀವನದಿ ಶರಾವತಿ ಉಳಿವಿಗಾಗಿ ಎಲ್ಲರ ಸಹಕಾರ ಅಗತ್ಯ, ಆ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಈ ಹೋರಾಟದಲ್ಲಿ ಕೈ ಜೋಡಿಸುತ್ತಾರೆ ಎನ್ನುವ ಭರವಸೆ ಇದೆ. ಶಾಂತಿಯುತವಾಗಿ ಮೆರವಣಿಗೆ ನಡೆಸಿ ತಹಸೀಲ್ದಾರರ ಮೂಲಕ ಮನವಿ ಸಲ್ಲಿಸಲಾಗುವುದು , ಶರಾವತಿ ನದಿ ನೀರನ್ನು ಬೆಂಗಳೂರಿಗೆ ಒಯ್ಯುವ ಸರಕಾರದ ನಿರ್ಧಾರ ತಪ್ಪಾಗಿದೆ. ಇದರಿಂದ ಇಡೀ ಶಿವಮೊಗ್ಗ ಹಾಗೂ ಹೊನ್ನಾವರಕ್ಕೆ ಮಾರಕವಾಗಲಿದೆ. ಇಲ್ಲಿಯ ಅರಣ್ಯ ಸಂಪತ್ತಿನ ಮೇಲೆ ಪರಿಣಾಮ ಬೀರುತ್ತದೆ. ಪ್ರಮುಖ ಯಾತ್ರಾ ಸ್ಥಳವಾದ ಇಡಗುಂಜಿ, ಮುರ್ಡೇಶ್ವರಕ್ಕೆ ಇದೇ ನದಿ ನೀರು ಕೊಂಡೊಯ್ಯುವುದರಿಂದ ಆ ಭಾಗದ ಪ್ರವಾಸಿಗರಿಗೆ ಸಮಸ್ಯೆ ಆಗುತ್ತದೆ. ತೋಟಗದ್ದೆಗೆ ಉಪ್ಪು ನೀರು ನುಗ್ಗುವುದರಿಂದ ಬೆಳೆ ಸಂಪೂರ್ಣ ನೆಲ ಕಚ್ಚಲಿದೆ ಇದೆಲ್ಲವನ್ನು ಗಮನಿಸಿ ಸರಕಾರ ನಿರ್ಣಯವನ್ನು ವಾಪಸ್ಸು ಪಡೆಯಲು ವಿವಿಧ ರೀತಿಯ ಹೋರಾಟಕ್ಕೆ ಮುಂದಾಗಿದ್ದೇವೆ ಎಂದು ಸಮಿತಿ ತಿಳಿಸಿದೆ.

RELATED ARTICLES  ಉತ್ತರ ಕನ್ನಡ ಜಿಲ್ಲಾಕಿಸಾನ್‌ ಕಾಂಗ್ರೆಸ್‌ ಅಧ್ಯಕ್ಷರಾಗಿ ಕಾಂಗ್ರೇಸ್ ಮುಖಂಡ ಶಿವಾನಂದ ಹೆಗಡೆ ಕಡತೋಕಾ ಆಯ್ಕೆ.