ಶಿರಸಿ ಕುಮಟಾ ರಾಜ್ಯ ಹೆದ್ದಾರಿಯ ರಾಗಿಹೊಸಳ್ಳಿ ಬಳಿ ಟ್ರಕ್ಕೊಂದು ಬೆಂಕಿಗೆ ಆಹುತಿಯಾಗಿದೆ. ರಸ್ತೆ ಮದ್ಯದಲ್ಲಿಯೇ ಬೆಂಕಿ ತಗುಲಿ ಟ್ರಕ್ ಬಹುಭಾಗ ಸುಟ್ಟು ಕರುಕಲಾಗಿದೆ.
ಇಂದು ಬೆಳಿಗ್ಗೆ ೭ ರಿಂದ ೮ ಘಂಟೆಯ ಒಳಗೆ ಈ ದುರ್ಘಟನೆ ನಡೆದಿರಬಹುದು ಎನ್ನಲಾಗಿದೆ.ಘಟನೆ ಜನ ವಾಸಗಳಿಂದ ದೂರವಿದ್ದ ಕಾರಣ ತಡವಾಗಿ ಘಟನೆ ಬೆಳಕಿಗೆ ಬಂದಿದೆ.
ಬೆಂಕಿ ತಗುಲಿದ ಕಾರಣ ತಿಳಿದು ಬಂದಿಲ್ಲ ಆದರೆ ಬೆಂಕಿಯಿಂದಾಗಿ ಕೆಲ ಕಾಲ ಓಡಾಡುವ ಪ್ರಯಾಣಿಕರು ಭಯಗೊಂಡರು ಎನ್ನಲಾಗಿದೆ.