ಹೊನ್ನಾವರ : ಕನಾ೯ಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾದ ನರಸಿಂಹಮೂತಿ೯ ನಾಯ್ಕ ನೇತೃತ್ವದಲ್ಲಿ “ಶರಾವತಿ” ನದಿ ಉಳಿಸಿ ಎಂದು ಮಾನ್ಯ ತಾಲೂಕಾ ಧಂಡಾಧಿಕಾರಿಗಳಿಗೆ ಬಿಡದೆ ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೇ ಮನವಿಯನ್ನೂ ನೀಡುವ ಮೂಲಕ ಹೋರಾಟದ ಮೊದಲಮನವಿಯನ್ನು ಇಂದು ಸಲ್ಲಿಸಲಾಯಿತು.
ರಾಜ್ಯ ಸಂಘಟನಾ ಕಾಯ೯ದಶಿ೯ ಎಚ್ ಆರ್ ಗಣೇಶ. ಜಿಲ್ಲಾಗೌರವಧ್ಯಕ್ಷರಾದ ಡಾ! ಶ್ರೀಪಾದ ಶೆಟ್ಟಿ. ತಾಲೂಕಾಧ್ಯಕ್ಷರಾದ ಬಾಲಚಂದ್ರ ನಾಯ್ಕ. ಹಾಗೂ ಶಿವಾನಂದ ನಾಯ್ಕ.. ಹಷ೯ ನಾಯ್ಕ.. ರಾಘು ನಾಯ್ಕ. ಯೋಗೇಶ ಗೌಡ. ಗೋಡ್ ಜಿ ಪನಾ೯ಂಡಿಸ್ .. ಇನ್ನೂ ಅನೇಕ ಪದಾಧಿಕಾರಿಗಳು ಹಾಗೂ ಕಾಯ೯ಕತ೯ರೂ ಸೇರಿ ಮನವಿ ಸಲ್ಲಿಸಿದರು.
ಸರಕಾರಕ್ಕೆ ಕೊಟ್ಟ ಮನವಿಯನ್ನು ತಾಲೂಕಾ ದಂಡಾಧಿಕಾರಿಗಳಾದ ವಿ.ಆರ್ ಗೌಡ ಸ್ವೀಕರಿಸಿ ಮಾತಾಡಿದರು. ಸಂಘಟನೆಯ ಶ್ರೀಪಾದ ಶೆಟ್ಟರು ಮತ್ತು ಎಚ್.ಆರ್ ಗಣೇಶ ” ಜೀವನದಿ ಶರಾವತಿ” ನದಿ ನೀರನ್ನು ಯಾವುದೇ ಕಾರಣಕ್ಕೂ ಬೆಂಗಳೂರಿಗೆ ಬಿಡುವುದಿಲ್ಲ ರಕ್ತ ಹಾಗೂ ಪ್ರಾಣ ಕೊಟ್ಟೇವು ನೀರು ಕೊಡುವುದಿಲ್ಲ.. ಸರಕಾರ ಈ ಯೋದನೆ ಕೈ ಬಿಡದೇ ಹೋದರೆ ಪ್ರತಿಭಟನೆ ಎಲ್ಲಾ ಜಿಲ್ಲಾಕೇಂದ್ರದ ಜೊತೆ ವಿಧಾನ ಸೌಧದ ಎದುರು ಧರಣಿ ಮುಂದುವರೆಸುತ್ತೇವೆ ಎಂದು ಹೇಳಿದರು.
ವಿಡಿಯೋ