ಮೇಷ:- ನಿಮ್ಮ ಸಮಾಜದ ಎಲ್ಲಾ ಮಂದಿಯ ಸಂಘಟನೆಗೆ ಕಾರಣರಾಗಿ ಪ್ರಶಂಸೆ ಗಳಿಸುವಿರಿ. ನಿಮ್ಮಿಂದ ದೂರವಾಗಿದ್ದ ಸ್ನೇಹಿತರು ಪುನಃ ನಿಮ್ಮ ಸ್ನೇಹಹಸ್ತಕ್ಕಾಗಿ ಕೈಚಾಚುವರು. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವ ಸಂದರ್ಭ ಎದುರಾಗುವುದು.


ವೃಷಭ:- ಉತ್ತಮ ವಿಚಾರವಾಗಿ ನೀವು ಒಳ್ಳೆಯ ನೆರೆಹೊರೆಯವರನ್ನು ಗೆಳೆಯರನ್ನಾಗಿ ಪಡೆದುಕೊಳ್ಳುವಿರಿ. ನೀವಾಡುವ ಮಾತುಗಳಿಂದ ಅವರು ಪ್ರಭಾವಿತರಾಗಿ ನಿಮಗೆ ಸಹಾಯ, ಸಹಕಾರ ನೀಡುವರು. ಮೊಮ್ಮಕ್ಕಳ ಆಟಪಾಠಗಳಿಂದ ಸಂತೋಷ ಪಡೆಯುವಿರಿ.


ಮಿಥುನ:- ಒಳಮನಸ್ಸಿನ ಮಹತ್ವಾಕಾಂಕ್ಷೆಗಳಾದ ಅಧಿಕಾರ ಮತ್ತು ಜನಪ್ರಿಯತೆ ನಿಮ್ಮ ಆತುರದಿಂದ ಹಾಳಾಗುವವು. ಈ ಬಗ್ಗೆ ಯೋಚಿಸಿ ಹೆಜ್ಜೆಯನ್ನಿಡಿ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಒಳ್ಳೆಯದು.

ಕಟಕ:- ಅನೇಕ ದಿನಗಳಿಂದ ನಡೆಯುತ್ತಿರುವ ವ್ಯಾಜ್ಯಕ್ಕೆ ಹಲವು ಬಗೆಯ ನಾಟಕೀಯ ತಿರುವು ಸಿಗಬಹುದು. ಇದರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಅಡೆತಡೆಗಳು ಉಂಟಾಗುವುವು. ಕುಲದೇವರ ಪ್ರಾರ್ಥನೆಯಿಂದ ಒಳಿತಾಗುವುದು.

RELATED ARTICLES  ಐಶಾರಾಮಿ ಕಾರಿನಲ್ಲಿ ಬಂದು ಗೋ ಕದ್ದರು : ಈಗ ಪೊಲೀಸ್ ಬಲೆಗೆ ಬಿದ್ದರು..!

ಸಿಂಹ:- ಅನೇಕ ರೀತಿಯ ಬದಲಾವಣೆಗಳ ಕುರಿತು ನೀವು ಮರು ಚಿಂತನೆ ಮಾಡಬೇಕಾಗಿದೆ. ಮಕ್ಕಳು ಮಾಡುವ ತಪ್ಪಿಗೆ ನಿಮಗೆ ಬೇಸರವುಂಟಾಗುವುದು. ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ. ಒಳಿತಾಗುವುದು.

ಕನ್ಯಾ:- ಅಧ್ಯಾತ್ಮದ ಓದಿನಿಂದ ಹೊಸ ರೀತಿಯ ಚಿಂತನೆಗಳಿಗೆ ನಿಮ್ಮನ್ನು ಸಂವೇದಿಸಲು ಸೂಕ್ತವಾದ ದಿನವಾಗಿದೆ. ನಿಮ್ಮ ಮನಸ್ಸಿನ ತಾಕಲಾಟಕ್ಕೆ ಅಧ್ಯಾತ್ಮದ ಓದು ಪರಿಹಾರ ಸೂಚಿಸಬಲ್ಲದು. ಆದಷ್ಟು ಮೌನದಿಂದ ಇರುವುದು ಒಳ್ಳೆಯದು.

ತುಲಾ:- ನಿಮ್ಮದೇ ಆದ ವಿಶಿಷ್ಟ ತಲೆಮಾರುಗಳ ಪ್ರಸಿದ್ಧ ವಿಚಾರಗಳು ನಿಮ್ಮ ಧನಲಾಭ ವಿಚಾರದಲ್ಲಿ ಬೆಂಬಲಿಸಬಲ್ಲವು. ನಿಮ್ಮ ಆತ್ಮೀಯ ಗೆಳೆಯರು ಇಲ್ಲವೆ ಬಂಧುಗಳು ನಿಮಗೆ ಸಹಾಯ ಹಸ್ತ ನೀಡುವರು. ಹಣಕಾಸಿನ ಪರಿಸ್ಥಿತಿ ಸುಧಾರಿಸುವುದು.

ವೃಶ್ಚಿಕ:- ಬೇಕಾಗಿರದ ಸ್ಥಳಗಳಿಗೆ ವರ್ಗಾವಣೆ ಅವಕಾಶಗಳು ಕೂಡಿ ಬರಬಹುದು. ನೂತನ ಪರಿಸರ, ಜಾಗದಲ್ಲಿ ವ್ಯಾಪಾರ ವ್ಯವಹಾರ ಆರಂಭಿಸಬೇಕಾಗುವುದು. ಆರಂಭದಲ್ಲಿ ಸ್ವಲ್ಪ ಕಷ್ಟ ಎನಿಸಿದರೂ ಮುಂದೆ ಉತ್ತಮ ಪ್ರತಿಫಲ ಹೊಂದುವಿರಿ.

RELATED ARTICLES  ಮೀನುಗಾರಿಕೆಗೆ ತೆರಳಿದ್ದ ಬೋಟ್ ಸಮುದ್ರದಲ್ಲಿ ಮುಳುಗಡೆ

ಧನುಸ್ಸು:- ಏಕಾಂತಮಯ ಸ್ಥಳ ಬಯಸಿ ಹೋಗಲು ಪ್ರಯತ್ನಿಸುವಿರಿ. ಆದರೆ ಒಂಟಿತನವೂ ಬೇಸರವನ್ನುಂಟು ಮಾಡುವುದು. ನಿಮ್ಮ ಒಳಗಿನ ತುಮುಲಗಳನ್ನು ಸ್ನೇಹಿತರ ಬಳಿ ಇಲ್ಲವೆ ಬಂಧುಗಳ ಬಳಿ ಹೇಳಿಕೊಂಡು ಮನಸ್ಸು ಹಗುರ ಮಾಡಿಕೊಳ್ಳಿ.

ಮಕರ:- ನಿಮ್ಮ ದಾರಿಯನ್ನು ಶುಚಿಗೊಳಿಸುವ ಯೋಜನೆಗಳ ನೀಲನಕ್ಷೆಗೆ ತಯಾರಿ ನಡೆಸಲು ಕ್ರಿಯಾಶೀಲರಾಗುವಿರಿ. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ. ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ.

ಕುಂಭ:- ಯಥಾಯೋಗ್ಯವಾದುದನ್ನು ಮಾಡುವ ಕ್ರಿಯಾಶೀಲತೆ ನಿಮ್ಮಲ್ಲಿದೆ. ಸಕಾರಾತ್ಮಕವಾಗಿ ಮುಂದುವರೆಯಿರಿ. ಭಗವಂತನು ನಿಮ್ಮ ಮೇಲೆ ಕರುಣೆ ತೋರುವನು. ವಿವಾಹ ಸಂಬಂಧ ಮಾತುಕತೆಗಳು ಫಲಪ್ರದವಾಗುವುವು.

ಮೀನ:- ಹೆಚ್ಚಿನ ಉತ್ಸಾಹ, ಶಕ್ತಿ, ಸಾಮರ್ಥ್ಯ‌ ಪಡೆಯುವ ನಿಮ್ಮ ನಿರ್ಧಾರವಿಂದು ಕೈಗೂಡಲಿದೆ. ಸಕಾರಾತ್ಮಕವಾದ ಪ್ರಸಿದ್ಧಿಗೆ ದಾರಿ ಸುಗಮವಾಗಲಿದೆ. ವಿವಿಧ ಮೂಲಗಳಿಂದ ಹಣ ಬರುವುದು.