ನವದೆಹಲಿ: ಗ್ರಾಹಕರಿಗೆ ರೆಪೋ ದರ ಕಡಿತಗೊಳಿಸುವ ಬಗ್ಗೆ ಆರ್ ಬಿ ಐ ಗವರ್ನರ್ ಶಕ್ತಿಕಾಂತ್ ದಾಸ್ ಬ್ಯಾಂಕುಗಳಿಗೆ ತಿಳಿಸಿದ್ದ,ಇದರ ಬೆನ್ನಲ್ಲೇ ಸಾರ್ವಜನಿಕ ವಲಯದ ದೇಶದ ಅತಿದೊಡ್ಡ ಬ್ಯಾಂಕ್ ಎಸ್ ಬಿ ಐ ಶೇ. 05 ರಷ್ಟುಇಳಿಕೆಮಾಡಿದ್ದು, ಆರ್ ಬಿ ಯ ರೆಪೊದರ ಕಡಿತ ಪ್ರಯೋಜನವನ್ನು ಬ್ಯಾಂಕ್ ಗ್ರಾಹಕರಿಗೆ ವರ್ಗಾಯಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಈ ಕಡಿತದ ಬಳಿಕ, ಗೃಹ ಸಾಲ, ಕಾರು ಸಾಲ, ವೈಯಕ್ತಿಕ ಸಾಲ ಸೇರಿದಂತೆ ಇತರ ಸಾಲಗಳ ಮೇಲಿನ ಬಡ್ಡಿದರವನ್ನು ಬ್ಯಾಂಕ್ ಕಡಿತಗೊಳಿಸಿದೆ. ಹೀಗಾಗಿ ಒಂದು ವರ್ಷದ ಸಾಲಗಳ ಮೇಲಿನ ಬಡ್ಡಿದರ ವಾರ್ಷಿಕ ಶೇ.8.45 ರಿಂದ ಶೇ.8.40ಕ್ಕೆ ಇಳಿದಿದೆ.
“ಎಲ್ಲಾ ಎಂಸಿಎಲ್ಆರ್ ಸಂಬಂಧಿತ ಸಾಲಗಳ ಬಡ್ಡಿದರವು ಜುಲೈ 10, 2019 ರಿಂದ ಐದು ಪಾಯಿಂಟ್ಗಳಷ್ಟು ಕಡಿತವಾಗಲಿದೆ” ಎಂದು ಎಸ್ಬಿಐ ಹೇಳಿಕೆಯಲ್ಲಿ ತಿಳಿಸಿದೆ. ಇದು 2019-20ರ ಆರ್ಥಿಕ ವರ್ಷದಲ್ಲಿ ಮೂರನೇ ದರ ಕಡಿತವಾಗಿದ್ದು, 2019 ರ ಏಪ್ರಿಲ್ 10 ರ ನಂತರ ಗೃಹ ಸಾಲವು ಶೇ. 0.20ರಷ್ಟು ಅಗ್ಗವಾಗಿದೆ ಎನ್ನಲಾಗಿದೆ.
ಇಲ್ಲಿಯವರೆಗೆ ರೆಪೋ ದರದಲ್ಲಿ 75 ಅಂಕಗಳನ್ನು ಕಡಿತಗೊಳಿಸಲಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ ಎಂದು ವರದಿಯಾಗಿದೆ.