ಹೊನ್ನಾವರ: ಶರಾವತಿ ನದಿ ನೀರು ಬೆಂಗಳೂರಿಗೆ ಕೊಂಡ್ಯುಯುವ ಯೋಜನೆ ವಿರುದ್ಧ ಇಂದು ಹೊನ್ನಾವರ ಬಂದ್ ಗೆ ಕರೆ ನೀಡಲಾಗಿದ್ದು ವಿವಿಧ ಸಂಘಟನೆಗಳ ಆಶ್ರಯದಲ್ಲಿ ಹಮ್ಮಿಕೊಂಡ ಬಂದ್ ಗೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ.

ಬಹುತೇಕ ಅಂಗಡಿಗಳು ಬಂದ್ ಮಾಡಿ ಕರೆಗೆ ಬೆಂಬಲ ನೀಡಲಾಗಿದೆ. ಪಟ್ಟಣದಾದ್ಯಂತ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

RELATED ARTICLES  ರೋಟರಿಯಿಂದ ಸರ್ಕಾರಿ ಆಸ್ಪತ್ರೆಗೆ ಲಕ್ಷ ರು. ಔಷಧಿ ಪೂರೈಕೆ

ಆಟೋ ಟೆಂಪೋ ಸಂಘಟಕರೂ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿ ಗಮನ ಸೆಳೆದರು.

ಬ್ರಹತ್ ಪ್ರತಿಭಟನಾ ಮೆರವಣಿಗೆ ಶರಾವತಿ ವೃತ್ತದಿಂದ ಆರಂಭವಾಗಿ ಹೂವಿನಚೌಕದ ಮೂಲಕ ಬಜಾರ ರಸ್ತೆ, ಮಾಸ್ತಿಕಟ್ಟೆ ಮೂಲಕ ಸಾಗಲಿರುವ ಪ್ರತಿಭಟನಾ ಮೆರವಣಿಗೆ, ಗೇರುಸೊಪ್ಪಾ ವ್ರತ್ತದ ಮೂಲಕ ಪೋಲಿಸ್ ಠಾಣಿ ಮುಂಭಾಗದಲ್ಲಿ ಸಾಗಿ ತಹಶೀಲ್ದಾರ ಕಛೇರಿಗೆ ತೆರಳಿತು.

RELATED ARTICLES  ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ರಂಗಪೂಜೆ

ಹೊರಾಟದಲ್ಲಿ ಪಕ್ಷಾತೀತವಾಗಿ ನಾಯಕರು . ಗ್ರಾಮೀಣ ಭಾಗದ ಸಾರ್ವಜನಿಕರು ಭಾಗವಹಿಸಿದರು. ಹೋರಾಟಕ್ಕೆ ವಿವಿಧ ಸಂಘಟನೆಯ ಕಾರ್ಯಕರ್ತರು ಆಗಮಿಸಿದರು. ಬಹುತೇಕ ಬಂದ್ ಯಶಸ್ವಿ ಯಾಗಿದ್ದು. ಹೋರಾಟಗಾರರಿಂದ ಯೋಜನೆ ಕೈ ಬಿಡುವಂತೆ ತಹಶೀಲ್ದಾರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಕೆ ಮಾಡಲಾಗಿದೆ.