ಹೊನ್ನಾವರ: ನಿನ್ನೆಯಿಂದ ಸುರಿಯುತ್ತಿರುವ ಭಾರೀ ಮಳೆಗೆ ಹಲವೆಡೆ ಅವಾಂತರ ಉಂಟಾಗಿದೆ.

ಬೀಸಿದ ಗಾಳಿಗೆ ಹೊನ್ನಾವರದ ಜಲವಳ್ಳಿ, ಮಾವಿನಕುರ್ವಾ, ಹಾಗೂ ಹೊಸಾಡ, ಆರೊಳ್ಳಿ ಭಾಗದಲ್ಲಿ ಮನೆ, ಕೊಟ್ಟಿಗೆಗಳ ಮೇಲೆ ಮರಗಳು ಉರುಳಿ ಅಪಾರ ಹಾನಿ ಸಂಭವಿಸಿದೆ.

RELATED ARTICLES  ದೇಶೀಯ ಕ್ರೀಡೆ ಕಬಡ್ಡಿಯಿಂದ ಸದೃಢ ಕಾಯ, ಮನಸ್ಸುಗಳನ್ನು ಹೊಂದಲು ಸಾಧ್ಯ. ನಾಗರಾಜ ನಾಯಕ ತೊರ್ಕೆ.

ಜಲವಳ್ಳಿ ಗ್ರಾಮದ ತಿಪ್ಪಯ್ಯ ನಾರಾಯಣ ನಾಯ್ಕ ಅವರ ಮನೆಯ ಮೇಲಿನ ಶೀಟ್ ಹಾರಿಹೋಗಿದೆ. ಇಲ್ಲಿನ ರಾಮ ಗಣಪತಿ ಶೆಟ್ಟಿ ಅವರ ಮನೆಗೂ ಅಪಾರ ಹಾನಿ ಸಂಭವಿಸಿದೆ. ಮಾವಿನಕುರ್ವಾ ಹೋಬಳಿಯ ಹೊಸಾಡದಲ್ಲಿ ಶಾಂತಾರಾಮ ಶ್ರೀನಿವಾಸ ನಾಯಕ ಅವರ ಮನೆ ಮೇಲೆ ಮರಬಿದ್ದು ಹಾನಿಯಾಗಿದೆ.

RELATED ARTICLES  ಸಂಪನ್ನವಾಯ್ತು ಕಬಡ್ಡಿ ಪಂದ್ಯಾವಳಿ : ಶಾಸಕ ಮಂಕಾಳ ವೈದ್ಯರಿಗೆ ಸಂದಿತು ಸನ್ಮಾನ

ಆರೊಳ್ಳಿ ಮುಂಡಗೋಡದ ಗಂಗಾಧರ ಮುರ್ತು ಶೇಟ್ ಅವರ ಕೊಟ್ಟಿಗೆಗೆ ಅಪಾರ ಹಾನಿಯಾಗಿದ್ದು ಕೊಟ್ಟಿಗೆ ಮುರಿದು ಕೊಟ್ಟಿಗೆಯೊಳಗಿದ್ದ ಒಂದು ಆಕಳು ಅಸುನೀಗಿದೆ.