ಶ್ರೀನಿವಾಸ ನಾಯಕರ ಪ್ರಾಯೋಜಕತ್ವದಲ್ಲಿ ದಿ| ಅಭಿಜಿತ ನಾಯಕ ಸ್ಮರಣಾರ್ಥ ಅರ್ಥಪೂರ್ಣವಾಗಿ ಜರುಗಿದ ಸ್ಕೂಲಬ್ಯಾಗ್ ವಿತರಣಾ ಸಮಾರಂಭ :-

ದಿ| ಅಭಿಜಿತ್ ಶ್ರೀನಿವಾಸ ನಾಯಕ ಅವರ ಸ್ಮರಣಾರ್ಥ ಗಂಗಾವಳಿಯ ಗಂಗಾ ಮಾತಾ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಕೂಲ್ ಬ್ಯಾಗ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿದ ಶ್ರೀನಿವಾಸ ನಾಯಕ ನಾಡುಮಾಸ್ಕೇರಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ದಿ| ಅಭಿಜಿತ್ ಸ್ಮರಣಾರ್ಥ ಕಳೆದ ಎಂಟು ವರ್ಷಗಳಿಂದ ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಿಸುತ್ತಾ ತನ್ನ ಕೈಲಾದ ಸೇವೆ ಮಾಡುತ್ತಿದ್ದೇನೆ. ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದಿ ಮುನ್ನಡೆಯಬೇಕೆಂದು ಹಿತ ನುಡಿದರು. ಗ್ರಾಮ ಪಂಚಾಯತ ಸದಸ್ಯರಾದ ಮಂಜುನಾಥ ಜನ್ನುರವರು ಮಾತನಾಡಿ ಶ್ರೀನಿವಾಸ ನಾಯಕರವರು ಸ್ಕೂಲ್ ಬ್ಯಾಗ್ಗಳನ್ನು ವಿತರಿಸಿ   ವಿದ್ಯಾರ್ಥಿಗಳು ಅನುಕೂಲತೆ ಒದಗಿಸುವುದರೊಂದಿಗೆ ಅನೇಕ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ಶ್ಲಾಘಿಸಿದರು.

RELATED ARTICLES  ಕಾರು ಪಲ್ಟಿ : ಪುಟ್ಟ ಮಗು ಸೇರಿ ಆರು ಜನರಿಗೆ ಗಾಯ

ಕಳೆದ ಎಂಟು ವರ್ಷಗಳಿಂದ ವಿದ್ಯಾಥರ್ಿಗಳಿಗೆ ಅಗತ್ಯವಿರುವ ಸಾಮಗ್ರಿಗಳನ್ನು ವಿತರಿಸುತ್ತಾ ಬಂದಿರುವ ಶ್ರೀನಿವಾಸ ನಾಯಕ ಅವರನ್ನು ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟಿನಿಂದ ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟಿನ ಸಂಸ್ಥಾಪಕ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆಯವರು ಮಾತನಾಡಿ ಇದೊಂದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಹಿಂದುಳಿದ ಈ ಭಾಗದಲ್ಲಿ ಇನ್ನೂ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳು ನಡೆಯಬೇಕಿದ್ದು ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿವೆ ಎಂದು ಮಾಮರ್ಿಕವಾಗಿ ನುಡಿದು ವಿದ್ಯಾಥರ್ಿಗಳು ವೈಯಕ್ತಿಕ ಹಾಗೂ ಪರಿಸರದ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಬೇಕು ಎಂದು ಸ್ವಚ್ಛ ಭಾರತ ಅಭಿಯಾನದ ಕುರಿತು ಮಾಹಿತಿ ನೀಡಿದರು. ಮುಂದಿನ ದಿನಗಳಲ್ಲಿ ಶ್ರೀನಿವಾಸ ನಾಯಕರವರಿಂದ ಈ ಕಾರ್ಯಕ್ರಮ ದೊಡ್ಡ ಪ್ರಮಾಣದಲ್ಲಿ ನಡೆಯಲಿ. ಅದಕ್ಕೆ ನಾವು ಕೈ ಜೋಡಿಸುತ್ತೇವೆ ಎಂದರು.

RELATED ARTICLES  ನಿರಾಶ್ರಿತರಾದ ಜನರಿಗೆ ನೆರವಾದ ಯುಕೆ ಎಕ್ಸ್‌ಪ್ರೆಸ್‌ ಬಳಗ ಹಾಗೂ ಸಿಂಚನ ಟಿವಿ.

ಈ ಸಂದರ್ಭದಲ್ಲಿ ಆನಂದು ಕವರಿ, ನಾರಾಯಣ ನಾಯಕ ರಾಕುಮನೆ, ಗಣಪತಿ ಅಂಬಿಗ, ನಾಗೇಶ ಗುನಗ, ನಾಗರಾಜ ತಾಂಡೇಲ, ಗಣೇಶ ಗೌಡ, ರಾಮು ಗೌಡ, ಪಾಂಡುರಂಗ ನಾಯ್ಕ, ಅರುಣ ಕವರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಮುಖ್ಯಾಧ್ಯಾಪಕಿ ಪದ್ಮಾ ನಾಯಕ ವಂದಿಸಿದರು. ಎಸ್. ಎಸ್. ಹೆಗಡೆ ನಿರೂಪಿಸಿದರು.