ಭಟ್ಕಳ: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಭಾರತೀಯ ವೈದ್ಯಕೀಯ ಸಂಸ್ಥೆ,  ರೋಟರಿ ಕ್ಲಬ್ ಹೊನ್ನಾವರ, ಲಯನ್ಸ್ ಕ್ಲಬ್ ಹೊನ್ನಾವರ, ಜಿ.ಎಸ್.ಬಿ. ಯುವ ವಾಹಿನಿ ಮತ್ತು ಮಹಿಳಾ ವಾಹಿನಿ ಹೊನ್ನಾವರ,  ಟೆಂಪೂ ಚಾಲಕ ಮಾಲಕರ ಸಂಘ,  ಔಷದ ವ್ಯಾಪಾರಸ್ಥರ ಸಂಘ ಮತ್ತು ಆಟೋ ಮಾಲಕ ಸಂಘ ಹೊನ್ನಾವರ ಇವರ ಸಹಭಾಗಿತ್ವದಲ್ಲಿ ಹೊನ್ನಾವರದ ಮಾರ್‍ಥೋಮಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜು.14ರಂದು ರವಿವಾರ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು ಹೊನ್ನಾವರ, ಭಟ್ಕಳದ ಸುತ್ತಮುತ್ತಲಿನ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಣಿಪಾಲ್ ಆಸ್ಪತ್ರೆಯ ಮಾರ್ಕೆಟಿಂಗ್ ವಿಭಾಗದ ಉಪ ವ್ಯವಸ್ಥಾಪಕ ರವಿಕಿರಣ ಪೈ ತಿಳಿಸಿದ್ದಾರೆ.

RELATED ARTICLES  "ಸೆಲ್ಫಿ ವಿತ್ ಗಣೇಶ' ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

    ಶಿಬಿರದಲ್ಲಿ ಹೃದ್ರೋಗ ಚಿಕಿತ್ಸೆ,  ನರರೋಗ ಶಸ್ತ್ರ ಚಿಕಿತ್ಸೆ , ರೇಡಿಯೋಥೆರಪಿ ಮತ್ತು ಕ್ಯಾನ್ಸರ್ ಚಿಕಿತ್ಸೆ,  ಶ್ವಾಸಕೋಶ ಚಿಕಿತ್ಸೆ, ಕಿವಿ ಮೂಗು ಗಂಟಲು  ಚಿಕಿತ್ಸೆ, ಚರ್ಮ ರೋಗ,  ಮಕ್ಕಳ ಚಿಕಿತ್ಸ, ಸಾಮಾನ್ಯ ವೈದ್ಯಕಿಯ ತಪಾಸಣೆ ಸೇರಿದಂತೆ ವಿವಿಧ ವಿಭಾಗ ತಜ್ಞ ವೈದ್ಯರುಗಳು ಭಾಗವಹಿಸಲಿದ್ದಾರೆ.

RELATED ARTICLES  ಬ್ರಾಹ್ಮಣ ಸಮುದಾಯವನ್ನು ಹೀಯಾಳಿಸುವುದು ಒಂದು ಪ್ಯಾಷನ್ ಆಗಿದೆ ; ಡಾ. ಜಿ.ಎಲ್ ಹೆಗಡೆ

     ಭಟ್ಕಳದಲ್ಲಿ ಮಣಿಪಾಲ ಆರೋಗ್ಯ ಕಾರ್ಡ ಪಡೆಯಲು ಇಲ್ಲವೇ ನವೀಕರಿಸಲು ಸೈಂಟ್ ಮಿಲಾಗ್ರೀಸ್ ಸೌಹಾರ್ಧ (9538894590),ಮುರ್ಡೇಶ್ವರ (9538020303), ಶಿರಾಲಿ (8277099156), ಗೌರೀಶಂಕರ ಮೊಗೇರ (8722540496), ರಾಧಾಕೃಷ್ಣ ಭಟ್ಟ (9448221117), ಕವಿತಾ ಶೇಟ್ (8310910797) ಇವರನ್ನು ಸಂಪರ್ಕಿಸಬಹುದು ಎಂದೂ ತಿಳಿಸಿದರು.