ಭಟ್ಕಳ: ಎಡಬಿಡದೆ ಸುರಿದ ಮಳೆ ತಾಲೂಕಿನಾದ್ಯಂತ ಹಲವು ಅವಾಂತರಗಳಿಗೆ ಕಾರಣವಾಗಿದೆ.
ಎರಡು ದಿನಗಳಿಂದ ಸುರಿಯುತ್ತಿರು ಮಳೆಗಾಳಿಗೆ ತಾಲೂಕಿನಾದ್ಯಂತ ಹೆಸ್ಕಾಂ ಇಲಾಖೆಯ 8 ವಿದ್ಯುತ್ ಕಂಬಗಳು ಧರೆಗುಳಿದೆ ಎನ್ನಲಾಗಿದೆ.
ಬೆಳಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳಕೆ ಕಟಗೇರಿ ಎಂಬಲ್ಲಿ 2 ವಿದ್ಯುತ್ ಕಂಬಗಳು, ಪಂಚಾಯತ್ ಕಚೇರಿ ಬಳಿ 1 ಕಂಬ, ಶಿರಾಲಿಯಲ್ಲಿ 3, ಬೈಲೂರು ಪಂಚಾಯತ್ ವ್ಯಾಪ್ತಿಯ ನೀರಗದ್ದೆ ಎಂಬಲ್ಲಿ 2 ವಿದ್ಯುತ್ ಕಂಬಗಳು ಧರೆಗುರುಳಿದೆ ಎನ್ನಲಾಗಿದೆ.