ಐಫೋನ್.. ಪ್ರಪಂಚದ ಸ್ಮಾರ್ಟ್ಫೋನ್ ಮಾರ್ಕೆಟ್ನಲ್ಲಿ ಸಿಕ್ಕಾಪಟ್ಟೆ ದರ್ಬಾರ್ ನಡೆಸ್ತಿದೆ. ಪ್ರತಿಷ್ಠಿತ ಆಯಪಲ್ ಕಂಪನಿಯ ಈ ಐಫೋನ್ಗಳಿಗೆ ವಿಪರೀತ ಬೇಡಿಕೆ ಮತ್ತು ಟ್ರೆಂಡಿಂಗ್ನಲ್ಲಿದೆ. ಆದರೆ ಐಫೋನ್ಗಳ ಓಟ ಭಾರತದಲ್ಲಿ ಅಷ್ಟಕಷ್ಟೇ. ಹೇಗಾದರೂ ಭಾರತದ ಮಾರ್ಕೆಟ್ನಲ್ಲೂ ಅಧಿಪತ್ಯ ಸ್ಥಾಪಿಸಬೇಕು ಅನ್ನೋ ಹೆಬ್ಬಯಕೆಯಲ್ಲಿರೋ ಆಯಪಲ್ ಸಂಸ್ಥೆ ಹೊಸ ಪ್ಲಾನ್ ರೂಪಿಸ್ತಿದೆ.
ಭಾರತೀಯರನ್ನ ಅಟ್ರ್ಯಾಕ್ ಮಾಡೋ ಉದ್ದೇಶದಿಂದ ಮೇಡ್ ಇನ್ ಇಂಡಿಯಾ ನಿರ್ಮಿತ ಐಫೋನ್ಗಳನ್ನ ಮುಂದಿನ ಆಗಸ್ಟ್ ತಿಂಗಳಿನಿಂದ ಮಾರುಕಟ್ಟೆಗೆ ತರಲು ನಿರ್ಧರಿಸಿದೆ ಅಂತಾ ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ಸದ್ಯಕ್ಕೆ ಮೇಡ್ ಇನ್ ಇಂಡಿಯಾದ iPhone XS ಮತ್ತು iPhone XR ಸ್ಮಾರ್ಟ್ಫೋನ್ಗಳನ್ನ ಮಾರಾಟ ಮಾಡಲಿದೆ.
ಈಗಾಗಲೇ ಈ ಸಂಸ್ಥೆಯು ಸ್ಥಳೀಯವಾಗಿ ತಯಾರಾಗುತ್ತಿರುವ iPhone SE, iPhone 6S ಮತ್ತು iPhone 7 ಅನ್ನ ದೇಶದಲ್ಲಿ ಮಾರಾಟ ಮಾಡುತ್ತಿದೆ. ಆದರೆ ಪ್ರಮುಖವಾಗಿ ಉನ್ನತ ಮಟ್ಟದ ಹೈಕ್ವಾಲಿಟಿ ಹೊಂದಿರೋ ಐಫೋನ್ ಎಕ್ಸ್ ಫ್ಯಾಮಿಲಿ ಐಫೋನ್‌ಗಳನ್ನು ಮಾರುಕಟ್ಟೆಗೆ ತರುತ್ತಿರೋದು ಇದೇ ಮೊದಲ ಬಾರಿಯಾಗಿದೆ.
ಇನ್ನು ಸ್ಮಾರ್ಟ್ಫೋನ್ ಮಾರ್ಕೆಟ್ ವಿಚಾರದಲ್ಲಿ ಭಾರತಕ್ಕೆ ಎರಡನೇ ಸ್ಥಾನ ಇದೆ. ಅಷ್ಟರ ಮಟ್ಟಿಗೆ ಭಾರತದಲ್ಲಿ ಸ್ಮಾರ್ಟ್ಫೋನ್ಗಳು ಮಾರಾಟ ಆಗುತ್ತಿವೆ. ಆದರೆ ಆಯಪಲ್ ಫೋನ್ ದೇಶದಲ್ಲಿ ಹೆಚ್ಚು ಬಳಕೆ ಆಗುತ್ತಿಲ್ಲ. ದೇಶದಲ್ಲಿ ಶೇಕಡಾ 1 ಪರ್ಸೆಂಟ್ನಷ್ಟು ಮಾತ್ರ ಮಾರ್ಕೆಟಿಂಗ್ ಹೊಂದಿದೆ. ಹೀಗಾಗಿ ಮೇಕಿಂಗ್ ಇಂಡಿಯಾ ಮೂಲಕ ತನ್ನ ಮಾರುಕಟ್ಟೆ ವಿಸ್ತರಣೆಗೆ ಮುಂದಾಗಿದೆ. ಈ ಮೂಲಕ ಚೀನಾಗೆ ಅಮೆರಿಕಾ ಸೆಡ್ಡು ಹೊಡೆಯಲು ಮುಂದಾಗಿದೆ.
ಒಂದು ಐ-ಫೋನ್ ಸಾಮಾನ್ಯ ಜನರ ಕೈಗೆಟುಕಲ್ಲ ಅನ್ನೋ ಮಾತು ಭಾರತದಲ್ಲಿದೆ. ಇದಕ್ಕೆ ಕಾರಣ ಆಯಪಲ್ ಫೋನ್ ತುಂಬಾ ದುಬಾರಿ. ಹೀಗಾಗಿ ಇದರ ಬೆಲೆಯನ್ನ ಕಡಿಮೆ ಮಾಡಲು ನಿರ್ಧರಿಸಿದೆ. ಗ್ಲೋಬಲ್ ಮಾರುಕಟ್ಟೆಗಿಂತ ಭಾರತದಲ್ಲಿ ಕಡಿಮೆ ಮೊತ್ತಕ್ಕೆ ಮಾರಲು ಚಿಂತಿಸಿದೆ.
ಆಗಸ್ಟ್ನಲ್ಲಿ ಮಾರುಕಟ್ಟೆಗೆ ಪರಿಚಯ ಆಗಲಿರುವ ನೂತನ iPhone XR ತುಂಬಾ ಉನ್ನತ ಮಟ್ಟದ ಫೋನ್ ಆಗಿದೆ. ಇದನ್ನ ತಯಾರಿಕೆಗೆ ತುಂಬಾ ಖರ್ಚು ಆಗುತ್ತದೆ ಅನ್ನೋದು ತಜ್ಞರ ಅಭಿಪ್ರಾಯ. ವಿಶೇಷ ಅಂದ್ರೆ ಆಯಪಲ್ ಸಂಸ್ಥೆ ಇದುವರೆಗೂ ತನ್ನ ವಸ್ತುವಿನ ಮಾರುಕಟ್ಟೆ ಮೌಲ್ಯ ಕುಸಿಯದಂತೆ ಕಾಪಾಡಿಕೊಂಡು ಬಂದಿದೆ. ಹೀಗಾಗಿ ಐಫೋನ್ಗಳ ಬೆಲೆಯನ್ನ ಅದು ಹೆಚ್ಚಾಗಿ ಕಡಿಮೆ ಮಾಡಿಲ್ಲ.
ಇನ್ನು 64 ಜಿಬಿ ಸ್ಟೋರೆಜ್ನ iPhone XR ಆರಂಭದ ಬೆಲೆ 76,900 ಆಗಿತ್ತು. ಈಗ ಭಾರತದಲ್ಲಿ ಅದರ ಬೆಲೆ 59,900 ಇದೆ. 256GB storage ನ ಲಾಂಚಿಂಗ್ ಮಾಡುವಾಗ ಇದ್ದ ಬೆಲೆ 91,900 ರೂಪಾಯಿ, ಈಗ ಭಾರತದಲ್ಲಿ ಅದರ ಮೌಲ್ಯ 74,900 ರೂಪಾಯಿ ಇದೆ.