ಕುಮಟಾ: ಬೈಕ್ ಹಾಗೂ ಸ್ವಿಪ್ಟ್ ಕಾರ್ ನಡುವೆ ಅಪಘಾತ ಸಂಭವಿಸಿ, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಬೆಟ್ಕುಳಿ ಬಳಿ ಇಂದು ಸಂಜೆ ಸಂಭವಿಸಿದೆ.
ಹೊನ್ನಾವರ ತಾಲೂಕಿನ ಕಮ್ಮಟೆ ನಿವಾಸಿ ಪವನ ನೀಲಕಂಠ ದೇಶಭಂಡಾರಿ ಗಾಯಗೊಂಡ ಬೈಕ್ ಸವಾರ. ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಕೆಲಸ ಮಾಡುತ್ತಿದ್ದ ಈತನು ರಜೆಯ ನಿಮಿತ್ತ ಮನೆಗೆ ಬಂದು ಪುನಃ ಕೈಗಾಕ್ಕೆ ತೆರಳುವಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಗಂಭಿರವಾಗಿ ಗಾಯಗೊಂಡ ಸವಾರನಿಗೆ ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರಿಗೆ ರವಾನಿಸಲಾಗಿದೆ. ಕಾಲು ಹಾಗೂ ಕೈಗೆ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ.