ಕಾರವಾರ: ಕರ್ನಾಟಕ ನೃತ್ಯಕಲಾ ಅಕಾಡಮಿ ವತಿಯಿಂದ ಪ್ರಸಕ್ತ ಸಾಲಿನ ಸಂಗೀತ ಮತ್ತು ನೃತ್ಯ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಕಾಡೆಮಿ ವತಿಯಿಂದ ಪ್ರತಿ ಜಿಲ್ಲೆಯಲ್ಲಿ ಗುರುಗಳ ಮುಖಾಂತರ ಅಕಾಡೆಮಿ ವ್ಯಾಪ್ತಿಗೆ ಒಳಪಡುವ ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಸುಗಮ ಸಂಗೀತ, ನೃತ್ಯ, ಕಥಾಕೀರ್ತನ, ಗಮಕ ಕಲಾಪ್ರಕಾರಗಳಲ್ಲಿ 5 ತಿಂಗಳ ವರೆಗೆ ತರಬೇತಿ ನೀಡಲಾಗುವುದು.

RELATED ARTICLES  SSLC Result : ನಂಬರ್ ಒನ್ ಸ್ಥಾನದಿಂದ ವಂಚಿತಗೊಂಡ ಕರಾವಳಿ ಜಿಲ್ಲೆ.

ಆಸಕ್ತ 14ರಿಂದ 26 ವರ್ಷ ವಯೋಮಾನದ ಒಳಗಿರುವ ಅಭ್ಯರ್ಥಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಅರ್ಜಿಗಳನ್ನು ಪಡೆದು ಜುಲೈ 20ರೊಳಗಾಗಿ ರಿಜಿಸ್ಟ್ರಾರ್‌ ಕರ್ನಾಟಕ ಸಂಗೀತ, ನೃತ್ಯಅಕಾಡೆಮಿ 2ನೇ ಮಹಡಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002 ಈ ವಿಳಾಸಕ್ಕೆ ಸಲ್ಲಿಸಬೇಕು ಎಂದು ಅಕಾಡೆಮಿಯ ರಜಿಸ್ಟ್ರಾರ್‌ ಅಶೋಕ ಎನ್‌. ಚಲವಾದಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ: ವಾಕ್ ಇನ್ ಇಂಟರ್ವ್ಯೂ