ಕುಮಟಾ: ” ಕೊಳದಲ್ಲಿರುವ ಪಾಚಿ ಹೇಗೆ ಪ್ರತಿ ನಿತ್ಯ ದ್ವಿಗುಣಗೊಳ್ಳುತ್ತಾ ಕ್ರಮೇಣ ಇಡೀ ಕೊಳವನ್ನು ಆವರಿಸಿಕೊಳ್ಳುತ್ತದೆಯೋ ಹಾಗೇ ಜನಸಂಖ್ಯಾ ಸಮಸ್ಯೆ ಕೂಡಾ ವಿಶ್ವವನ್ನು ಆವರಿಸಿಕೊಳ್ಳುತ್ತಿದೆ” ಸಮಸ್ಯೆಗೆ ಕಾರಣರು ನಾವು ಹಾಗಾಗಿ ನಾವೇ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು .
ಜನಸಂಖ್ಯಾ ಸಮಸ್ಯೆಗೆ ಜನಜಾಗೃತಿ ಯೊಂದೇ ಪರಿಹಾರ ಎಂದು ರವೀಂದ್ರ ಭಟ್ಟ ಸೂರಿ ನುಡಿದರು. ಅವರು ಭಾರತೀಯ ಕುಟುಂಬ ಯೋಜನಾ ಸಂಘ ಕುಮಟಾ ಹಾಗೂ ಶ್ರೀ ಶಾಂತಿಕಾಂಬಾ ಪ್ರೌಢಶಾಲೆಯ ಸಹಯೋಗದಲ್ಲಿ ಹೆಗಡೆಯ ಪ್ರೌಢ ಶಾಲಾ ಸಭಾಭವನದಲ್ಲಿ ನಡೆದ ” ವಿಶ್ವ ಜನಸಂಖ್ಯಾ ದಿನಾಚರಣೆ” ಯನ್ನು ಉದ್ಘಾಟಿಸಿ ಮಾತನಾಡಿದರು.
ಪ್ರೌಢಶಾಲಾ ಮುಖ್ಯಾಧ್ಯಾಪಕರಾದ ಎಸ್.ಬಿ.ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಶಿಕ್ಷಕಿ ವೀಣಾ ಕೂರ್ಸೆ, ವಿದ್ಯಾರ್ಥಿ ಪ್ರತಿನಿಧಿ ಚರಣ ಪಟಗಾರ ಉಪಸ್ಥಿತರಿದ್ದರು. ಭಾರತೀಯ ಕುಟುಂಬ ಯೋಜನಾ ಸಂಘದ ಕಾರ್ಯಕ್ರಮಾಧಿಕಾರಿ ಮಂಜುಳಾ ಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕಿ ಸವಿತಾ ಶಾನಭಾಗ ನಿರೂಪಿಸಿದರು. ದೈಹಿಕ ಶಿಕ್ಷಕರಾದ ಎಮ್ ಎಸ್ ದೊಡ್ಮನಿ ಸಹಕರಿಸಿದರು. ಕಮಲಾ ಬಾಳಿಗಾ ಪ್ರಶಿಕ್ಷಣ ಮಹಾವಿದ್ಯಾಲಯದ ಹಾಗೂ ಶ್ರೀ ಶಾಂತಿಕಾಂಬಾ ಪ್ರೌಢಶಾಲೆಯ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಸಾಕ್ಷೀಕರಿಸಿದರು.