ಭಟ್ಕಳ : “ಆಯವ್ಯಯದ ಮುಂಗಡ ಯೋಜನೆಯು ಜೀವನ ಮತ್ತು ದೇಶದ ಪ್ರಗತಿ ಸಾಧಿಸಲು ಬಹಳ ಮುಖ್ಯ” ಎಂದು ಚಾರ್ಟೆಡ್ ಅಕೌಂಟಂಟ್ ಜ್ಞಾನೇಶ್ ಮಾನಕಾಮೆ ಹೇಳಿದರು. ನಗರದ ಗುರು ಸುಧೀಂದ್ರ ಪದವಿ ಕಾಲೇಜಿನಲ್ಲಿ ಆಯೋಜಿಸಲ್ಪಟ್ಟ ಮುಂಗಡ ಪತ್ರ 2019-20 ರ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಪ್ರಗತಿಶೀಲ ದೇಶಗಳು ಅಭಿವೃದ್ಧಿ ಸಾಧಿಸುವಲ್ಲಿ ಮುಂಗಡಪತ್ರ ಅದರದೇ ಆದ ಕೊಡುಗೆ ನೀಡುತ್ತಿದ್ದು ,ಮುಂಗಡಪತ್ರದಲ್ಲಿ ಘೋಷಿಸಲ್ಪಡುವ ಯೋಜನೆಗಳನ್ನು ಸರಕಾರ ತ್ವರಿತವಾಗಿ ಜಾರಿಗೆ ತರಬೇಕು” ಎಂದರು.

RELATED ARTICLES  ಕಾಲುಜಾರಿ ಸಮುದ್ರದಲ್ಲಿ ಬಿದ್ದು ವ್ಯಕ್ತಿ ಸಾವು.


ಭಟ್ಕಳ ಎಜುಕೇಷನ್ ಟ್ರಸ್ಟನ ಅಧ್ಯಕ್ಷ ಡಾ| ಸುರೇಶ್ ವಿ. ನಾಯಕ್, ಪದವಿ ಕಾಲೇಜಿನ ಪ್ರಾಂಶುಪಾಲ ಶ್ರೀ ನಾಗೇಶ್ ಭಟ್, ಬಿ.ಸಿ.ಎ ಪದವಿ ಕಾಲೇಜಿನ ಪ್ರಾಂಶುಪಾಲ ಹಾಗೂ ಶ್ರೀ ಶ್ರೀನಾಥ್ ಪೈ, ಬೋಧಕ ಬೋಧಕೇತರ ವೃಂದದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ತೆರಿಗೆ, ವಿಜ್ಞಾನ ಮತ್ತು ತಂತ್ರಜ್ಞಾನ, ಬ್ಯಾಂಕಿಂಗ್ ಮತ್ತು ಹಣಕಾಸು, ಮಹಿಳಾ ಹಾಗೂ ಮಕ್ಕಳ ಕಲ್ಯಾಣ, ಕೃಷಿ ಮತ್ತು ಕೈಗಾರಿಕೆ, ಗ್ರಾಮೀಣ ಮತ್ತು ನಗರಾಭಿವೃದ್ಧಿ ಮುಂತಾದ ವಿಷಯಗಳಿಗೆ ಸಂಬಂಧಪಟ್ಟ ವಿವರವನ್ನು ವಿನೂತನವಾಗಿ ಪ್ರಸ್ತುತಪಡಿಸಿದರು.

RELATED ARTICLES  ಹಿರಿಯ ಯಕ್ಷಗಾನ ಕಲಾವಿದ, ಖ್ಯಾತ ಮೂರ್ತಿ ತಯಾರಕ ಬಿ.ವಿ ಭಂಡಾರಿ ಇನ್ನಿಲ್ಲ.