ಮೇಷ:- ಎಷ್ಟೇ ಹಣ ಇದ್ದರೂ ಸಾಲದು ಎಂಬ ಭಾವನೆ ಬರಬಹುದು. ಹಣ ನೀರಿನಂತೆ ಖರ್ಚಾಗುವುದು ಮತ್ತು ಆರೋಗ್ಯದ ಸಲುವಾಗಿ ಆಸ್ಪತ್ರೆ ಖರ್ಚು ಹೆಚ್ಚು ಬರುವ ಸಂಭವ ಇದೆ. ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ.
ವೃಷಭ:- ಸ್ವಂತ ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು. ಅವರ ಒಪ್ಪು ತಪ್ಪುಗಳನ್ನು ಕ್ಷ ಮಿಸುವ ಔದಾರ‍್ಯ ಇಟ್ಟುಕೊಂಡಲ್ಲಿ ಬಾಂಧವ್ಯ ಗಟ್ಟಿಗೊಳ್ಳುವುದು. ಸುಮ್ಮನೆ ದಂಡಿಸುವುದಕ್ಕಿಂತ ಅವರನ್ನು ನಗು ನಗುತ್ತಾ ತಿದ್ದುವುದೇ ಒಳ್ಳೆಯದು.
ಮಿಥುನ:- ಹಮ್ಮಿಕೊಂಡಿರುವ ಕೆಲಸ ಕಾರ್ಯಗಳಲ್ಲಿ ಅಡಚಣೆಗಳು ಬಾರದಂತೆ ಇರಲಿ ಎಂದು ವಿಘ್ನನಾಶಕ ಗಣಪತಿಯನ್ನು ಪ್ರಾರ್ಥಿಸಿ. ಇದರಿಂದ ಅನುಕೂಲವಾಗುವುದು. ಸಂಗಾತಿಯ ಸಂಗಡ ಮನಸ್ತಾಪ ಬೇಡ.
ಕಟಕ:- ವಿವಿಧ ಮೂಲಗಳಿಂದ ಹಣ ಬರುವುದು. ಮನೋಕಾಮನೆಗಳು ಪೂರ್ಣಗೊಳ್ಳುವುವು. ಆದರೆ ಆತುರ ಪ್ರವೃತ್ತಿಯಿಂದ ಕೆಲಸಗಳು ಅರ್ಧಕ್ಕೆ ನಿಲ್ಲುವ ಸಾಧ್ಯತೆ ಇದೆ. ಆದ್ದರಿಂದ ಕೂತು ಮಲಗಿಕೊಳ್ಳುವಂತೆ ಸಾವಧಾನದಿಂದ ಹೆಜ್ಜೆ ಇಡಿ. ಒಳಿತಾಗುವುದು.
ಸಿಂಹ:- ಯಾವ ಹುತ್ತದಲ್ಲಿ ಯಾವ ಹಾವೋ ಎಂಬಂತೆ ನಿಮ್ಮ ಸಮೀಪಕ್ಕೆ ಬರುವ ವ್ಯಕ್ತಿಗಳ ಗುಣಾವಗುಣಗಳನ್ನು ತಿಳಿಯಲು ಅಸಮರ್ಥರಾಗುವಿರಿ. ಹಾಗಾಗಿ ಯಾರನ್ನೂ ವಿರೋಧ ಮಾಡಿಕೊಳ್ಳದೆ ಚಾಣಾಕ್ಷ ತನದಿಂದ ಅವರೊಡನೆ ವ್ಯವಹರಿಸಿ. ಒಳ್ಳೆಯದಾಗುವುದು.
ಕನ್ಯಾ:- ಅವಕಾಶವಾದಿಗಳು ನಿಮ್ಮ ಸುತ್ತಲೇ ಗಿರಕಿ ಹೊಡೆಯಬಹುದು. ಆದರೆ ವ್ಯಾವಹಾರಿಕ ಜಾಣ್ಮೆಯನ್ನು ಪ್ರದರ್ಶಿಸದಿದ್ದರೆ ನಿಮಗೆ ದೊಡ್ಡ ಪ್ರಮಾಣದ ಹಾನಿ ಆಗುವುದು. ಹಾವು ಹೊಡೆದು ಹದ್ದಿಗೆ ಹಾಕುವಂತೆ ನಿಮ್ಮ ಶ್ರಮದ ಫಲ ಪರರ ಪಾಲಾಗುವುದು.
ತುಲಾ:- ಮುಂದುವರಿದ ಬಂಧುಗಳ ಒಳಜಗಳಗಳು ನಿಮ್ಮನ್ನು ಹೈರಾಣ ಮಾಡುವುದು. ಯಾರೊಬ್ಬರ ಪರವಾಗಿ ನಿಂತರೂ ಮತ್ತೊಬ್ಬರ ಕೆಂಗಣ್ಣಿಗೆ ಗುರಿಯಾಗುವ ಸಂದರ್ಭ ಎದುರಾಗುವುದು. ಹಾಗಾಗಿ ಬಹು ವಿವೇಚನೆಯಿಂದ ಪರಿಸ್ಥಿತಿ ನಿಭಾಯಿಸಿ.
ವೃಶ್ಚಿಕ:- ವೃಥಾ ಮನೋವ್ಯಾಕುಲ, ಅಂಜಿಕೆ, ಅಭದ್ರತೆಗಳು ಬೇಡ. ತಾಯಿ ದುರ್ಗಾದೇವಿಯನ್ನು ಪ್ರಾರ್ಥಿಸಿ, ಒಳಿತಾಗುವುದು. ಬಡವರಿಗೆ ಆಹಾರ ನೀಡಿ. ಅಗತ್ಯಕ್ಕೆ ತಕ್ಕಷ್ಟು ಹಣ ವಿನಿಯೋಗಿಸಿ.
ಧನುಸ್ಸು:- ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತಿರುವುವು. ಹಣಕಾಸಿನ ಮುಗ್ಗಟ್ಟು ನಿಮ್ಮ ಮನೋಧೈರ್ಯವನ್ನು ಕುಗ್ಗಿಸುವುದು. ಆದಷ್ಟು ಶಿವ ಪಂಚಾಕ್ಷ ರಿ ಮಂತ್ರ ಜಪಿಸಿರಿ. ಪ್ರಯಾಣದಲ್ಲಿ ಎಚ್ಚರಿಕೆ ಇರಲಿ.
ಮಕರ:- ಪ್ರತಿಯೊಬ್ಬರ ಮನೆಯ ದೋಸೆಯೂ ತೂತೇ. ಆದರೆ ನಿಮ್ಮ ಮನೆಯ ಕಾವಲಿಯೇ ತೂತಾಗಿರುವುದರಿಂದ ಅನ್ಯರ ವಿಚಾರಗಳ ಕುರಿತು ಟೀಕೆ ಮಾಡಲು ಹೋಗದಿರಿ. ಇದರಿಂದ ಅಪಹಾಸ್ಯಕ್ಕೆ ಗುರಿ ಆಗುವಿರಿ.
ಕುಂಭ:- ಹಣಕಾಸು ವಿಚಾರದಲ್ಲಿ ಆದಷ್ಟೂ ಎಚ್ಚರಿಕೆ ಇರಲಿ. ಶಾಲಾ-ಕಾಲೇಜುಗಳಿಂದ ಬರಬೇಕಾಗಿದ್ದ ಗೌರವ ಧನ ಸದ್ಯದಲ್ಲಿಯೇ ನಿಮ್ಮ ಕೈ ಸೇರುವುದು. ವಿವಾಹಕ್ಕೆ ಸಂಬಂಧಪಟ್ಟಂತೆ ಇನ್ನು ಕೆಲಕಾಲ ಕಾಯಬೇಕಾಗುವುದು.
ಮೀನ:- ನೀವು ಆದರಿಸುವ ಜನರಿಂದಲೇ ವಿಶ್ವಾಸದ್ರೋಹ ಆಗುವ ಸಂಭವವಿದೆ. ಬೆಳ್ಳಗಿರುವುದೆಲ್ಲಾ ಹಾಲಲ್ಲ ಎಂಬುದನ್ನು ತಿಳಿಯಿರಿ. ಗುರು ಹಿರಿಯರ ಮಾರ್ಗದರ್ಶನದಂತೆ ಮುನ್ನಡೆಯಿರಿ. ಇದರಿಂದ ನಿಮ್ಮ ಕಾರ್ಯಗಳು ಕೈಗೂಡುವುವು.