ಗೋವು ಈ ದೇಶದ ಬದುಕು, ಬೆಳಕು… ಗೋವಿಲ್ಲದೆ ಭಾರತೀಯರ ಬದುಕಿನಲ್ಲಿ. ಕೃಷಿ, ಆರ್ಥಿಕತೆ,  ಸಾಗಾಣಿಕೆ, ಪರಿಸರ, ಆರೋಗ್ಯ, ಆಹಾರ, ಸಂಸ್ಕೃತಿ, ಅಧ್ಯಾತ್ಮ ಹೀಗೆ ಜೀವನದ ಎಲ್ಲಾ ಕ್ಷೇತ್ರಗಳನ್ನು ಗೋವಿನ ಕೊಡುಗೆಯಿದೆ. ಭಾರತದ ಜನಜೀವನ ಗೋವಿಲ್ಲದೆ ಸಮೃದ್ಧವಾಗಿರದು, ಸುಖಮಯವಾಗಿರದು. ಆಧುನಿಕ ವಿಜ್ಞಾನವು ಕೂಡಾ ಗೋವು ಹಾಗೂ ಗೋಜನ್ಯ ಪದಾರ್ಥಗಳ ಮಹತ್ತ್ವವನ್ನು ತನ್ನ ಸಂಶೋಧನೆಗಳ ಮೂಲಕ ಮನಗಂಡಿದೆ. ಭಾರತದಲ್ಲಿ ಗೋತಳಿಗಳನ್ನು ಸಂರಕ್ಷಿಸಬೇಕು ಮತ್ತು ಗೋತಳಿ ಸಂವರ್ಧನೆ ಮಾಡಬೇಕು ಎಂದು ಉತ್ತರಕನ್ನಡ ಭಾರತೀಯ ಗೋ ಪರಿವಾರದ ಅಭಯಾಕ್ಷರ ಅಭಿಯಾನ ಪ್ರಾರಂಭೋತ್ಸವ ಹಾಗೂ ಹಾಲು ಹಬ್ಬ ಕಾರ್ಯಕ್ರಮ ಅ. 15 ರಂದು ನಡೆಯಲಿರುವ ಕುರಿತು ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಆವಾರದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ರಾಜ್ಯ ಭಾರತೀಯ ಗೋ ಪರಿವಾರದ ಕೋಶಾಧ್ಯಕ್ಷ ಮುರಳೀಧರ ಪ್ರಭು ಮಾತನಾಡಿ ಗೋವಿಗಳಿಗೆ ಅಭಯ ನೀಡಬೇಕು ಎಂದು ಪ್ರತ್ಯೇಕ ಮನವಿಯನ್ನ ಮುಖ್ಯಮಂತ್ರಿಗಳಿಗೆ ಮತ್ತು ಪ್ರಧಾನಮಂತ್ರಿಗಳಿಗೆ ನೀಡುತ್ತಿದ್ದೇವೆ. ಗೋ ಹತ್ಯೆ ನಿಷೇಧ ಮಾಡಿದ್ದರೆ ಅನೇಕ ಜನ ಕೆಲಸ ಕಳೆದುಕೊಳ್ಳುತ್ತಾರೆ ಎಂದು ಹೇಳುತ್ತಾರೆ. ಆದರೆ ಹಾಲು ಉತ್ಪಾದನೆ ಹೆಚ್ಚಾಗಿದ್ದರೆ ಕೈಗಾರಿಕೆಗಳು ಹೆಚ್ಚು ಸ್ಥಾಪನೆಯಾಗುತ್ತವೆ ಆಗ ಎಲ್ಲರಿಗೂ ಕೆಲಸ ದೊರೆಯುತ್ತದೆ ಎಂದರು.. ಗೋ ಪರಿವಾರದ ಜಿಲ್ಲಾಧ್ಯಕ್ಷ ಬಾಬು ದತ್ತಾರಾಮ ಬಾಂದೇಕರ್ ಮಾತನಾಡಿ, ಗೋ ಸಂತತಿ ನಮಗೆ ನೀಡಿದ ಅಮೂಲ್ಯ ರತ್ನ. ಪುರಾಣ ಕಾಲದಿಂದಲು ನಾವು ಗೋವನ್ನ ಪೂಜನೀಯವಾದಂತಹದ್ದು, ದೇವತೆಗಳ ಆವಾಸ ಸ್ಥಾನ ಎಂದು ಹೇಳಿ ನಡೆದುಕೊಂಡು ಬಂದಿದೆ, ಅದನ್ನ ನಾವು ಉಳಿಸಿ ಬೆಳೆಸಬೇಕಾಗಿದೆ ಎಂದರು..ಕುಮಟಾದ ಎಲ್ಲಾ ನಾಗರೀಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನ ಯಶಸ್ವಿಗೊಳಿಸಬೇಕೆಂದು ಗೋ ಪರಿವಾರದ ತಾಲೂಕಾಧ್ಯಕ್ಷ ಕಿಶನ್ ವಾಳ್ಕೆ ಹೇಳಿದರು..ಈ ಸಂದರ್ಭದಲ್ಲಿ ಗೋ ಪರಿವಾರದ ಜಿಲ್ಲಾ ಸಂಚಾಲಕ ಸುಬ್ರಾಯ ಭಟ್ಟ, ನಿತ್ಯಾನಂದ ನಾಯ್ಕ, ಪ್ರಶಾಂತ ಹೆಗಡೆ, ದತ್ತಾತ್ರಯ ನಾಯ್ಕ ಮುಂತಾದವರು ಉಪಸ್ಥಿತರಿದ್ದರು..

RELATED ARTICLES  ಭಾವಿಕೇರಿ ಬೆಳ್ಳಿಹಬ್ಬದ ಗಣೇಶೋತ್ಸವದಲ್ಲಿ ಪ್ರತಿಭಾ ಪುರಸ್ಕಾರ