‘ಸಿಹಿ ಗೆಣಸು‘ ಒಂದು ಜಾತಿಯ ಗೆಡ್ದೆ. ಇದು ದಕ್ಷಿಣ ಅಮೇರಿಕಾ ಮೂಲದಿಂದ ಬಂದು ಪ್ರಪಂಚದಾದ್ಯಂತ ಬಳಕೆಯಲ್ಲಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶರ್ಕರಪಿಷ್ಠವನ್ನು ಹೊಂದಿರುತ್ತದೆ.

ಸಿಹಿ ಗೆಣಸು ಪುಷ್ಟಿದಾಯಕ ಆಹಾರ. ಗೆಣಸನ್ನು ಉಪ್ಪು ಹಾಕಿ ಬೇಯಿಸಿ ಹಾಗೇ ತಿನ್ನಬಹುದು, ಇಲ್ಲವೇ ಕೆಂಡದ ಮೇಲೆ ಸುಟ್ಟು ತಿಂದರೂ ಬಲು ರುಚಿಕರ. 

ದೇಹಕ್ಕೆ ಬೇಕಾದ ಬಿ6, ವಿಟಮಿನ್, ಕ್ಯಾಲ್ಸಿಯಂ, ಕಬ್ಬಿಣ, ಸೋಡಿಯಂ, ಝಿಂಕ್, ಮೆಗ್ನಿಶಿಯಂ ಮೊದಲಾದ ಅಂಶಗಳಿವೆ. ಅಲ್ಲದೇ ಇದರಲ್ಲಿ ಉತ್ತಮ ಪ್ರಮಾಣದ ನಾರಿನಂಶ, ವಿಟಮಿನ್ ಸಿ ಮತ್ತು ವಿಟಮಿನ್ ಎ ಸಹಾ ಇದ್ದು ಹಲವು ತೊಂದರೆಗಳಿಂದ ರಕ್ಷಣೆ ನೀಡುತ್ತದೆ. 

ಮಧುಮೇಹದ ನಿಯಂತ್ರಣಕ್ಕಾಗಿ ನೈಸರ್ಗಿಕ ಆಹಾರವಸ್ತುಗಳನ್ನು ಪರಿಗಣಿಸುವಾಗ ಸಿಹಿ ಗೆಣಸಿನಲ್ಲಿರುವ ಮಧುಮೇಹ ಸ೦ಬ೦ಧಿ ಪ್ರಯೋಜನಗಳ ಕುರಿತು ಹೆಚ್ಚು ಹೆಚ್ಚು ತಿಳಿದುಕೊ೦ಡಿರುವುದು ಒಳ್ಳೆಯದು. ಬಿಟಾ-ಕೆರೊಟಿನ್ ಹೆಚ್ಚಾಗಿರುವ ಈ ಸಿಹಿ ಗೆಣಸಿನಲ್ಲಿ ಆರೋಗ್ಯದ ದೃಷ್ಟಿಯಿಂದ ಮಧುಮೇಹಿ ರೋಗಿಗಳಿಗೆ ಅತ್ಯುತ್ತಮವಾಗಿದೆ. 

RELATED ARTICLES  ಈ ಮನೆ ಮದ್ದು ಉಪಯೋಗದಿಂದ ಸುಟ್ಟ ಗಾಯ ಮಂಗಮಾಯಾ!!

ಸಿಹಿ ಗೆಣಸಿನ ಸೇವನೆಯಿಂದ ಆಗುವ  ಉಪಯೋಗಗಳು :

1. ನಮ್ಮ ದೇಹದಲ್ಲಿ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.
2. ಶೀತ ಮತ್ತು ಜ್ವರದ ಸೊಂಕು ಹರಡುವುದನ್ನು ತಡೆಗಟ್ಟುತ್ತದೆ. 
3. ಇದರಲ್ಲಿರುವ ವಿಟಮಿನ್ ಸಿ ಜೀವಸತ್ವವು ಮೂಳೆ ಮತ್ತು ಹಲ್ಲಿನ ರಚನೆ, ಜೀರ್ಣಕ್ರಿಯೆ ಮತ್ತು ರಕ್ತ ಕಣ ರಚನೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ .
4. ಇದು ಗಾಯವನ್ನು ಗುಣಪಡಿಸುವಿಕೆಯ ವೇಗವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
5. ಚರ್ಮದ ಯೌವನದ ಸ್ಥಿತಿಸ್ಥಾಪಕತ್ವವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ.
6. ಇದು ನಮ್ಮ ದೇಹವನ್ನು ಕ್ಯಾನ್ಸರ್ ಸಂಬಂಧಿತ ಜೀವಾಣುಗಳ ವಿರುದ್ಧ ರಕ್ಷಣೆ ನೀಡುತ್ತದೆ. 
7. ಇದರಲ್ಲಿರುವ ಬಿಟಾ-ಕೆರೊಟಿನ್ ಅಂಶ ಮಧುಮೇಹವನ್ನು ನಿಯಂತ್ರಿಸುತ್ತದೆ. 
8. ಇದರ ಸೇವನೆಯಿಂದ ಮಲಬದ್ಧತೆ ನಿವಾರಣೆಯಾಗುತ್ತದೆ. 
9. ಸಿಹಿ ಗೆಣಸಿನಲ್ಲಿರುವ ಪೊಟ್ಯಾಶಿಯಂ ದೇಹದ ಮೇಲೆ ಸೋಡಿಯಂ ಪ್ರಭಾವವನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯದ ಕಾರ್ಯವೈಖರಿಯನ್ನು ಸುಗಮಗೊಳಿಸುತ್ತದೆ.
10. ಇದರಲ್ಲಿ ಫೊಲಿಕ್ ಆಸಿಡ್ ಅಧಿಕ ಪ್ರಮಾಣದಲ್ಲಿರುವುದರಿಂದ ಗರ್ಭಾವಧಿಯಲ್ಲಿ ಭ್ರೂಣದ ಕೋಶ ಮತ್ತು ಕೋಶಗಳ ಬೆಳವಣಿಗೆಗೆ ಸಹಕರಿಸುತ್ತದೆ.

RELATED ARTICLES  ಅನೇಕ ರೋಗಗಳಿಗೆ ಸರಳ ಪರಿಹಾರ ಬೆಳ್ಳುಳ್ಳಿಯಿಂದ ಸಿಗುವುದು!

ಹಾಗಾಗಿ ಸಿಹಿ ಗೆಣಸು, ಸಿಹಿ ಎಂದು ತಿನ್ನದೇ ಇರಬೇಡಿ. ಇದನ್ನು ಸೇವಿಸುವ ಮೂಲಕ ನಿಮ್ಮ ಆರೋಗ್ಯವನ್ನೂ ಉತ್ತಮವಾಗಿಸಿಕೊಳ್ಳಿ.