ಹೊನ್ನಾವರ- ಸಾಮಾಜಿಕ ಪರಿಶೋಧನೆ ನರೇಗಾ ಫಲಾನುಭವಿಗಳಲ್ಲಿ ಭರವಸೆ ಮೂಡಿಸಿದೆ. ಪ್ರತಿ ಆರು ತಿಂಗಳಿಗೊಮ್ಮೆ ಈ ಸಭೆ ಕಡ್ಡಾಯವಾಗಿ ನಡೆಯುತ್ತಿದ್ದು ಸಾಕಷ್ಟು ಚರ್ಚೆಯಾಗುವ ಕಾರಣ ಕೂಲಿಗಾಗಿ ಕಾಮಗಾರಿಗಾಗಿ ಕೇಳುವ ಪ್ರವೃತ್ತಿ ಮೂಡುತ್ತಿದೆ ಎಂದು ತಾಲೂಕು ಸೋಶಿಯಲ್ ಆಡಿಟರ್ ಉಮೇಶ ಮುಂಡಳ್ಳಿ ಹೇಳಿದರು.
ಅವರು ಇಂದು ತಾಲೂಕಿನ ಸಾಲ್ಕೋಡ ಪಂಚಾಯತ್ ನಲ್ಲಿ ನಡೆದ ೨೦೧೯/೨೦ ನೇ ಸಾಲಿನ ಮೊದಲ ಹಂತದ ಸಾಮಾಜಿಕ ಪರಿಶೋಧನೆ ಗ್ರಾಮಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಜೊತೆಗೆ ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳಾದ ಅಂಗವಿಕಲ, ವೃದ್ದಾಪ್ಯ,ವಿದವಾ ವೇತನ,ಮನಸ್ವಿನಿ ಫಲಾನುಭವಿಗಳನ್ನು ಭೇಟಿ ಮಾಡಿ ಸಾಮಾಜಿಕ ಪರಿಶೋಧನೆ ನಡೆಸಿದ ವರದಿಯನ್ನು ಸಹ ಅವರು ಗ್ರಾಮಸಬೆಯಲ್ಲಿ ಮಂಡಿಸಿದರು. ಸೂಮಾರು ೨೮೬ ಪಲಾನುಭವಿಗಳಿಂದ ಮಾಹಿತಿ ಸಂಗ್ರಹಿಸಲು ಇಲ್ಲಿನ ಗ್ರಾಮಲೆಕ್ಕಿಗರು ಅವರ ಸಿಬ್ಬಂದಿಗಳ ಸಹಕಾರವನ್ನು ಉಮೇಶ ಮುಂಡಳ್ಳಿ ಸಭೆಯಲ್ಲಿ ಪ್ರಸ್ಥಾಪಿಸಿದರು.
ಗ್ರಾಮಸಭೆಯ ಅಧ್ಯಕ್ಷತೆಯ ವಹಿಸಿದ ಹೊನ್ನಾವರ ವಲಯ ಅರಣ್ಯಾಧಿಕಾರಿಗಳಾದ ಶರತ್ ಶೆಟ್ಟಿ ಅವರು ಮಾತನಾಡಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿಯಮದಂತೆ ಕಾಮಗಾರಿ ಮಾಡಿದ್ದಲ್ಲಿ ಅನೇಕ ಕಾಮಗಾರಿಗಳನ್ಮು ಸ್ಥಳಿಯರೇ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಪಿಡಿಓ ವಿ.ಎ.ಪಟಗಾರ್ ಸ್ವಾಗತಿಸಿದರು ಹಿಂದಿನ ಸಭೆಯ ನಡಾವಳಿ ನಡಾವಳಿ , ಹಾಗೂ ಕಾಮಗಾರಿ ವಿವರ ಓದಿ ಹೇಳಿದರು. ಕಾರ್ಯದರ್ಶಿ ಅರುಣ ನಾಯ್ಕ ವಂದಿಸಿದರು.
ಗ್ರಾಮಲೆಕ್ಕಾಧಿಕಾರಿ ನಿಸರ್ಗಾ ಗೌಡ, ತಾಂತ್ರಿಕ ಸಹಾಯಕ ಗಣೇಶ ವೇದಿಕೆಯಲ್ಲಿದ್ದರು.ವಿ.ಆರ್.ಪಿ.ಗಳಾದ ರಾಜು, ಅಜೀತ ,ಕೃತಿಕಾ ನಾಯ್ಕ ಹಾಗೂ ಪಿಂಚಣಿ ಮತ್ತು ನರೇಗಾದ ಹೆಚ್ಚಿನ ಪಲಾನುಭವಿಗಳು ಹಾಜರಿದ್ದರು.