ಶಿರಸಿ: ಕಸಾಯಿ ಖಾನೆಗೆ ಕೊಂಡೊಯ್ಯುತ್ತಿದ್ದ 13 ಕೋಣಗಳನ್ನು ತಾಲೂಕಿನ ಬನವಾಸಿ ಠಾಣೆ ಪೊಲೀಸರು ರಕ್ಷಿಸಿದ ಘಟನೆ ನಡೆದಿದೆ. ಸುಮಾರು ಆರು ಲಕ್ಷಕ್ಕೂ ಅಧಿಕ ಮೊತ್ತದ ಕೋಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎನ್ನಲಾಗಿದೆ.

ಹಿಂಸಾತ್ಮಕವಾಗಿ ವಧೆ ಮಾಡುವ ಉದ್ದೇಶದಿಂದ ಲಾರಿಯಲ್ಲಿ ಇವುಗಳನ್ನು ಸಾಗಿಸಲಾಗುತ್ತಿತ್ತು. ಪೋಲೀಸರು ಆರೋಪಿಗಳನ್ನು ಲಾರಿ ಸಮೇತ ವಶಕ್ಕೆ ಪಡೆದಿದ್ದಾರೆ.

RELATED ARTICLES  ಗ್ರಾಮ ಪಂಚಾಯತ ಚುನಾವಣೆ : ಕುಮಟಾ ,ಶಿರಸಿ, ಯಲ್ಲಾಪುರದ ಈವರೆಗಿನ ವಿಜೇತರ ಯಾದಿ ಇಲ್ಲಿದೆ.

ಹಾವೇರಿಯಿಂದ ಉತ್ತರ ಕನ್ನಡದ ಭಟ್ಕಳಕ್ಕೆ ಲಾರಿಯ ಮೂಲಕ ಅಕ್ರಮವಾಗಿ ಜಾನುವಾರು ಸಾಗಿಸುತ್ತಿರುವಾಗ ದಾಸನಕೊಪ್ಪ ಚೆಕ್ ಪೋಸ್ಟ್ ಬಳಿ ವಾಹನ ತಪಾಸಣೆ ನಡೆಸಿ ಕೋಣಗಳನ್ನು ರಕ್ಷಿಸಲಾಗಿದೆ.

RELATED ARTICLES  ಪುರಸಭಾ ವಾಹನ ಹಾಗೂ ಬೈಕ್ ನಡುವೆ ಅಪಘಾತ

ಆರೋಪಿಗಳಾದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವೆಂಕಟೇಶ, ಚಿಕ್ಕಬಳ್ಳಾಪುರದ ಅಹ್ಮದ್ ಅಜೀಮ್ ಸಾಬ್, ಆಂದ್ರಪ್ರದೇಶದ ಬಶೀರ ಫರ್ಕುದ್ಧೀನ ಸಾಬ್, ವಲಿ ಶೇಖ್ ಹಾಗೂ ಜಿಲ್ಲೆಯ ಸಿದ್ದಾಪುರದ ಸ್ವಾಮಿ ಮತ್ತು ಭಟ್ಕಳದ ನಾಸೀದ್ ಇವರುಗಳನ್ನು ವಶಕ್ಕೆ ಪಡೆಯಲಾಗಿದೆ.