ಮೇಷ ರಾಶಿ
ಇಂದು ನಿಮಗೆ ಸಂಭ್ರಮದ ವಾತಾವರಣ ನೀಡುತ್ತದೆ. ಅದ್ದೂರಿ ಸಮಾರಂಭಗಳಿಗೆ ಬೇಟಿ ನೀಡುವ ಅವಕಾಶ ದೊರೆಯಲಿದೆ. ಕೆಲವು ಗಣ್ಯ ವ್ಯಕ್ತಿಗಳೊಡನೆ ಚರ್ಚೆ ಹಾಗೂ ನಿಮ್ಮಲ್ಲಿನ ವಿಚಾರಗಳನ್ನು ಮಂಡನೆ ಮಾಡಲಿದ್ದೀರಿ.
ಆರ್ಥಿಕ ಚಟುವಟಿಕೆಗಳಲ್ಲಿ ಲಾಭಾಂಶವು ನಿಮ್ಮ ಜೀವನದ ಹೊಸ ವಿಚಾರಗಳಿಗೆ ಪ್ರೋತ್ಸಾಹ ನೀಡುತ್ತದೆ. ವ್ಯವಹಾರದಲ್ಲಿ ಎದುರಾಳಿಗಳನ್ನು ಸ್ಪರ್ಧಾತ್ಮಕವಾಗಿ ಸೋಲಿಸಿ ಜಯ ಸಂಪಾದನೆ ಮಾಡುತ್ತೀರಿ. ರಾಜಕೀಯ ರಂಗದಲ್ಲಿ ನಿಮ್ಮನ್ನು ಮತ್ತು ನಿಮ್ಮ ಶಕ್ತಿಯನ್ನು ಗುರುತಿಸುತ್ತಾರೆ.
ನಿಮ್ಮ ವಿವೇಚನೆಯಿಂದ ಉದ್ಯೋಗ ಸ್ಥಳದಲ್ಲಿ ಆಗುವ ನಷ್ಟ ಹಾಗೂ ಅನಾಹುತಗಳನ್ನು ತಪ್ಪಿಸುತ್ತೀರಿ. ಪ್ರಣಯದಲ್ಲಿ ಹೆಚ್ಚಿನ ಆಸಕ್ತಿಯು ನಿಮ್ಮನ್ನು ನವ ಯುವಕನಂತೆ ಚೈತನ್ಯ ತುಂಬುತ್ತದೆ. ಇಂದು ನೀವು ನಿಮ್ಮ ರೂಪ ಲಾವಣ್ಯದ ಬಗ್ಗೆ ವಿಶೇಷ ಕಾಳಜಿಯನ್ನು ಬಯಸುತ್ತೀರಿ.
ಅದೃಷ್ಟ ಸಂಖ್ಯೆ: 9
ವೃಷಭ ರಾಶಿ
ಬಹಳ ಜತನದಿಂದ ಕಾಪಾಡಿದ ವಸ್ತುವು ಇಂದು ಕಳೆದುಕೊಳ್ಳಲಿದ್ದಿರಿ ಜಾಗ್ರತೆ ವಹಿಸಿ. ಸಹೋದರ ಸಂಬಂಧಿಗಳಲ್ಲಿ ಕ್ಷುಲ್ಲಕ ವಿಚಾರದಲ್ಲಿ ಕಲಹ. ಸಾಲಗಳು ಮರು ಪಾವತಿಯಾಗದೇ ನಿಮ್ಮ ಚಿಂತೆ ಹೆಚ್ಚಾಗುತ್ತದೆ. ನಿಷ್ಠುರ ಮಾತುಗಳಿಂದ ಸ್ನೇಹವನ್ನು, ಪ್ರೇಮವನ್ನು ಕಳೆದುಕೊಳ್ಳುವ ಭೀತಿ ಎದುರಾಗುತ್ತದೆ. ನಿಮ್ಮ ಮನಸ್ಸಿನ ಏಕಾಗ್ರತೆ ಹೆಚ್ಚಿಸಲು ಸಮೀಪದ ದೇಗುಲಕ್ಕೆ ಭೇಟಿ ನೀಡಿ.
ಕುಟುಂಬದವರು ನಿಮ್ಮ ಸಮಸ್ಯೆಗಳಿಗೆ ಬೆಂಬಲವಾಗಿ ನಿಲ್ಲುವರು. ಮಧ್ಯವರ್ತಿ ಜನಗಳಿಂದ ನಿಮ್ಮ ಹಣಕಾಸಿನಲ್ಲಿ ಹಿನ್ನಡೆ ಕಾಣುತ್ತದೆ. ನಿರೀಕ್ಷಿತ ಮಟ್ಟದ ಧನಾಗಮನದ ಫಲ ಇಂದು ಸಕಾಲದಲ್ಲಿ ನೆರವೇರುವುದು ಕಷ್ಟದಾಯಕವಾಗಿದೆ. ಇಂದು ಹೊಸ ಉದ್ಯೋಗದ ಪ್ರಯತ್ನಕ್ಕೆ ಇಳಿಯುತ್ತೀರಿ.
ಅದೃಷ್ಟ ಸಂಖ್ಯೆ: 8
ಮಿಥುನ ರಾಶಿ
ಹಣಕಾಸಿನ ಸುಭದ್ರ ಹೂಡಿಕೆ ವೃತ್ತಿಯಲ್ಲಿ ನಿಮ್ಮನ್ನು ನಾಯಕ ಸ್ಥಾನದಲ್ಲಿ ಹಾಗೂ ಗೌರವಾನ್ವಿತ ಸ್ಥಾನದಲ್ಲಿ ಇರಿಸುತ್ತದೆ. ಇಂದು ನಿಮ್ಮ ಭಾಗ್ಯದಲ್ಲಿ ತಿರುವುಗಳಿಂದ ಸಾಗುತ್ತಿದೆ. ಬೆಳಗಿನ ವೇಳೆಯಲ್ಲಿ ತುಂಬಾ ಉತ್ಸುಕತೆ ಇದ್ದರೆ ಸಂಜೆಯ ಹೊತ್ತಿಗೆ ಜಡತ್ವ ಆವರಿಸಿಕೊಳ್ಳುತ್ತದೆ. ಸಂಗಾತಿಯೊಡನೆ ಇರುವ ನಿಮ್ಮ ಅಭಿಪ್ರಾಯದಿಂದ ಮನಸ್ಸಿಗೆ ಕಸಿವಿಸಿ.
ಚಿನ್ನದ ಮೇಲಿನ ವ್ಯಾಮೋಹವು ವಿಪರೀತವಾಗಿ ಸೆಳೆಯುತ್ತದೆ. ಕಾರಣಾಂತರಗಳಿಂದ ನಿಮ್ಮ ಕೆಲಸವು ಬೇರೆಯವರ ಪಾಲಾಗಲಿದೆ. ಯಾರ ಜೊತೆಯು ವಾಗ್ವಾದಕ್ಕೆ ಇಳಿಯದಿರಿ ನಿಮ್ಮ ವೃತ್ತಿ ಜೀವನದಲ್ಲಿ ನಿಮ್ಮ ಮಾತುಗಳು ಪರಿಣಾಮವಾಗಿ ಮಾರ್ಪಡುತ್ತದೆ. ಮಾತಿನಲ್ಲಿ ನಿಗಾ ವಹಿಸುವುದು ಒಳ್ಳೆಯದು.
ಅದೃಷ್ಟ ಸಂಖ್ಯೆ: 7
ಕರ್ಕಾಟಕ ರಾಶಿ
ನಿಮ್ಮ ಮೊಂಡುತನ ಸ್ವಭಾವ ನಿಮ್ಮ ಮೇಲಿನ ಗೌರವ ಕಡಿಮೆ ಮಾಡುತ್ತದೆ. ಮದುವೆಯಾಗದವರಿಗೆ ಇಂದು ಶುಭಯೋಗವಿದೆ. ಹಣಕಾಸಿನ ವಿಚಾರಗಳಲ್ಲಿ ನಷ್ಟ ಅನುಭವಿಸುವಂತೆ ಮಾಡಲು ಹುನ್ನಾರ ನಡೆದಿದೆ. ಸಮಾಧಾನ ಅವಶ್ಯಕ. ಸಂಶಯದ ವ್ಯವಹಾರಗಳಲ್ಲಿ ನೀವು ಆದಷ್ಟು ದೂರ ಇದ್ದುಬಿಡಿ. ಮಕ್ಕಳಿಗೆ ನಿಮ್ಮ ಸಮಯ ನೀಡುವುದು ಒಳಿತು.
ವ್ಯರ್ಥ ಯೋಜನೆಗಳಿಗೆ ನಿಮ್ಮನ್ನು ನೀವು ತೊಡಗಿಸಿಕೊಳ್ಳಬೇಡಿ. ಆದಾಯಕ್ಕಿಂತ ವೆಚ್ಚ ಹೆಚ್ಚಾಗುವ ಯೋಜನೆಗಳಿಂದ ನೀವು ದೂರವಿರಿ. ನಿಮ್ಮ ಮನಸ್ಸಿನಲ್ಲಿರುವ ಜಂಜಾಟಗಳು ನಿಮ್ಮನ್ನು ಜಡತ್ವದ ಕಡೆಗೆ ಕರೆದೊಯ್ಯುತ್ತದೆ. ಇದೇ ಕಾರಣಗಳಿಂದ ನಿಮ್ಮ ಕೆಲಸಗಳಲ್ಲಿ ಅಪಜಯ ಕಾಣುತ್ತಿದ್ದೀರಿ.
ಅದೃಷ್ಟ ಸಂಖ್ಯೆ: 3
ಸಿಂಹ ರಾಶಿ
ಇತರರೊಡನೆ ನಿಮ್ಮ ಸಂತೋಷ ಹಂಚಿಕೊಳ್ಳುವುದರಿಂದ ನಿಮ್ಮಲ್ಲಿ ಹೊಸ ಹುಮ್ಮಸ್ಸು ನೀಡುತ್ತದೆ. ಕುಟುಂಬದ ಒಗ್ಗಟ್ಟನ್ನು ನೀವೇ ಕಾಪಾಡಿಕೊಂಡು ಮುನ್ನಡೆಸುತ್ತಿರಿ.
ಉದ್ಯೋಗದಲ್ಲಿನ ನಿಮ್ಮೆಲ್ಲಾ ಕಠಿಣ ಶ್ರಮಗಳು ಮೇಲಾಧಿಕಾರಿಗಳು ಹಾಗೂ ಸಹೋದ್ಯೋಗಿಗಳ ಗಮನಕ್ಕೆ ಬರುತ್ತದೆ. ಇದರಿಂದ ನಿಮ್ಮ ಶ್ರಮವನ್ನು ಗುರುತಿಸುತ್ತಾರೆ. ನಿಮ್ಮ ಪ್ರೀತಿಯ ಸಂಗಾತಿಯ ಜೊತೆ ಕಾಲ ಕಳೆಯಲು ಬೇಗ ಕೆಲಸ ಮುಗಿಸುತ್ತೀರಿ. ನಿಮ್ಮ ಪ್ರೇಮಿಯ ಭಾಷಣವೂ ನಿಮ್ಮನ್ನು ಸ್ವಲ್ಪ ಮಟ್ಟಿಗೆ ಕಿರಿಕಿರಿ ಮಾಡಿದರು ಹಾಸ್ಯವಿರುತ್ತದೆ. ಅನುಕೂಲಕರ ಗ್ರಹಗಳ ದೃಷ್ಟಿಯಿಂದ ಸಾಧನೆಗೆ ಪ್ರೇರಣೆ ನೀಡುತ್ತದೆ.
ಅದೃಷ್ಟ ಸಂಖ್ಯೆ: 5
ಕನ್ಯಾ ರಾಶಿ
ನಿಮ್ಮ ದೇಹದ ಆರೋಗ್ಯ ನೀವು ತಿನ್ನುವ ಆಹಾರ ಪದ್ಧತಿಯ ಮೇಲೆ ನಿಂತಿದೆ ಎಂಬುದನ್ನು ಮರೆಯದಿರಿ. ಕೇವಲ ತೋರಿಕೆಗೆ ಲಾಭದಾಯಕವಾಗಿ ಕಾಣುವ ವಸ್ತುಗಳಾಗಲಿ, ಹೂಡಿಕೆಗಳಾಗಲಿ ಅದರ ಪೂರ್ವಾಪರ ಯೋಚಿಸಿ ಮುನ್ನಡೆಯಿರಿ. ವೃತ್ತಿಯಲ್ಲಿ ತಜ್ಞರ ಸಹಾಯ ಪಡೆಯುವ ಸಮಯ ಬಂದಿದೆ. ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛತೆಯಿಂದ ಕಾಪಾಡಿ. ಕೆಲವೊಂದು ಸ್ನೇಹವು ಪ್ರಣಯವಾಗಿ ಮಾರ್ಪಡಬಹುದು.
ನಿಮ್ಮ ಮುಂದಿನ ಯೋಜನೆ ಒಳ್ಳೆಯ ಸಮಯದಿಂದ ಕೂಡಿರುವುದರಿಂದ ಸಂತೋಷ ಪಡಿ. ಪ್ರಮುಖ ಸ್ನೇಹಿತ ವರ್ಗದಿಂದ ನಿಮಗೆ ಧನ ಸಹಾಯದ ನಿರೀಕ್ಷೆಯಿದೆ.
ಅದೃಷ್ಟ ಸಂಖ್ಯೆ: 7
ತುಲಾ ರಾಶಿ
ನಿಮ್ಮ ವೈವಾಹಿಕ ಜೀವನದಲ್ಲಿ ಇಂದು ಅದ್ಭುತ ಸುದ್ದಿ ಕೇಳುತ್ತೀರಿ. ಕೆಲವು ಬಹು ದಿನದ ಸಮಸ್ಯೆಗಳನ್ನು ಪರಿಹಾರ ಮಾಡಲು ಮುಂದಾಗಿ. ಸಕಾರಾತ್ಮಕ ಯೋಜನೆಗಳಿಂದ ನಿಮ್ಮೆಲ್ಲಾ ಕಾರ್ಯ ಸಾಧ್ಯತೆ. ಮಾತನಾಡುವುದು ಸುಲಭ, ಮಾಡುವುದು ಕಷ್ಟ. ನಿಮ್ಮ ಶಕ್ತಿ ಅನುಸಾರ ಚಟುವಟಿಕೆ ತೆಗೆದುಕೊಳ್ಳಿ ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಬಾಕಿ ಇರುವ ಹಣಕಾಸಿನ ಸಮಸ್ಯೆಗಳು ಇತ್ಯರ್ಥವಾಗುತ್ತದೆ.
ಎಲ್ಲರೊಡನೆ ಬೆರೆಯುವ ನಿಮ್ಮ ಗುಣ ಆಯಸ್ಕಾಂತ ರೂಪದಲ್ಲಿ ಸ್ನೇಹಿತರನ್ನು ಹತ್ತಿರವಿರಿಸುತ್ತದೆ. ಸಂಗಾತಿಯ ಜೊತೆ ಒತ್ತಡವನ್ನು ಕಳೆಯಲು ಪ್ರಯತ್ನಪಡಿ.
ಅದೃಷ್ಟ ಸಂಖ್ಯೆ : 3
ವೃಶ್ಚಿಕ ರಾಶಿ
ಒಂದು ಪ್ರಕಾಶಮಾನ ದಿನವಿದು. ಹೊಸ ಆಲೋಚನೆ ನಿಮ್ಮಲ್ಲಿ ಬೆಳವಣಿಗೆಯ ಕ್ರಾಂತಿಯ ಕಿಡಿ ಹೊತ್ತುತ್ತದೆ. ನಿಮ್ಮ ಕೆಲಸದ ಬದಲಾವಣೆಯ ಲಾಭದ ಪ್ರಯೋಜನ ಪಡೆಯಬಹುದು. ಕೆಲವೊಂದು ತಪ್ಪುಗಳು ಮಕ್ಕಳಿದ್ದಾಗ ಮಾಡುವುದು ಒಳಿತಲ್ಲ. ಬಿಡುವಿನ ಸಂದರ್ಭದಲ್ಲಿ ಮಕ್ಕಳ ಜ್ಞಾನವೃದ್ಧಿಗೆ ಸಹಾಯ ಮಾಡಿ.
ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅವಕಾಶದ ಸುರಿಮಳೆ ಕಾಣುತ್ತೇವೆ. ಮೊಮ್ಮಕ್ಕಳ ಆಗಮನ ಸಂತೋಷಕ್ಕೆ ಮೂಲವಾಗಿರುತ್ತದೆ. ನಿಮ್ಮ ಅನುಭವದಿಂದ ಉದ್ಯಮಿಗಳಿಗೆ ನೆರವು ನೀಡಲಿದ್ದೀರಿ.
ಸೃಜನಶೀಲ ಚಿತ್ರಗಳಿಂದ ಅಪಾರ ಜನಮನ್ನಣೆ ಗಳಿಸುವಿರಿ. ಕೃತಕ ಸ್ನೇಹಿತರಿಂದ ದೂರವಿರುವುದು ಉತ್ತಮ. ನಿಮ್ಮೆಲ್ಲಾ ಆಶ್ವಾಸನೆಗಳು ಈಡೇರಿಸಲು ಪಣತೊಡಿ.
ಅದೃಷ್ಟ ಸಂಖ್ಯೆ : 1
ಧನಸ್ಸು ರಾಶಿ
ರಚನಾತ್ಮಕ ಯೋಜನೆಗಳಿಂದ ನಿಮ್ಮ ಎಲ್ಲಾ ಸಮಸ್ಯೆಗಳ ಪರಿಹಾರ ಸಾಧ್ಯ. ಆಧುನಿಕ ವಿಚಾರಗಳ ಜೊತೆಗೆ ಸಂಪ್ರದಾಯಬದ್ಧ ಯೋಜನೆಗಳು ನಿಮ್ಮ ಸ್ಥಾನ ಗಟ್ಟಿಗೊಳಿಸುತ್ತದೆ. ಇತರರ ಸಂತೋಷಕ್ಕಾಗಿ ನೀವು ನಿಮ್ಮ ಚಿಂತೆ ಮತ್ತು ಒತ್ತಡ ಹೆಚ್ಚು ಮಾಡಿಕೊಳ್ಳುವುದು ಅವಶ್ಯಕತೆ ಇಲ್ಲ. ನಿಮ್ಮ ನಿರೀಕ್ಷೆ ಮೀರಿ ಆದಾಯ ಗಳಿಕೆಯು ನಿಮ್ಮಲ್ಲಿ ಸಂತೃಪ್ತಿಗೊಳಿಸುತ್ತದೆ.
ಅಧಿಕ ಹಣ ಗಳಿಕೆಗೆ ದೈಹಿಕ-ಮಾನಸಿಕ ಬಾಧೆ ತಂದುಕೊಳ್ಳುವುದು ಸರಿ ಕಾಣುವುದಿಲ್ಲ. ಕುಟುಂಬದ ಹಿರಿಯರಿಗೆ ಬೇಕು-ಬೇಡದ ಪಟ್ಟಿ ತಯಾರು ಮಾಡಿ. ವಸ್ತುಗಳ ಖರೀದಿಯಲ್ಲಿ ಜಾಗ್ರತೆ ವಹಿಸಿ. ಜನರ ಹೊಗಳಿಕೆಯು ನಿಮ್ಮನ್ನು ಕ್ಷಣಿಕ ಸಂತೋಷ ನೀಡಬಹುದು. ನಿಮ್ಮ ಭಾಗ್ಯ ಇಂದು ಉತ್ತಮ ರೀತಿಯಲ್ಲಿ ಇದೆ.
ಅದೃಷ್ಟ ಸಂಖ್ಯೆ: 5
ಮಕರ ರಾಶಿ
ಸಂತೋಷದ ಕೂಟಗಳಿಗೆ ಸ್ನೇಹಿತರ ಆಮಂತ್ರಣ. ನಿಮ್ಮ ಪ್ರೇಮದಲ್ಲಿನ ಮತ್ತೊಬ್ಬರ ಹಸ್ತಕ್ಷೇಪವು ನಿಮ್ಮ ಸಂಬಂಧ ಹಾಳುಗೆಡವಬಹುದು. ಸ್ನೇಹಿತರೊಡನೆ ಚುಟುಕು ಪ್ರವಾಸದ ಕ್ಷಣ ಪಡೆಯಲಿದ್ದೀರಿ. ನಿಮ್ಮ ಶಕ್ತಿ ಮೀರಿ ನಿಮ್ಮಲ್ಲಿನ ಅಡೆತಡೆಗಳನ್ನು ನಿವಾರಿಸಲು ಪ್ರಯತ್ನಪಡಿ.
ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಆದರೆ ನಿಮ್ಮ ವಿಳಂಬ ನೀತಿಯ ವಂಚಿತರನ್ನಾಗಿ ಮಾಡುತ್ತಿದೆ. ತುರ್ತು ಕೆಲಸದಿಂದಾಗಿ ನಿಮ್ಮ ಯೋಜನೆಗಳು ತಲೆಕೆಳಗಾಗಬಹುದು. ಕಠಿಣ ಪರಿಶ್ರಮದಿಂದ ಒಂದು ಒಳ್ಳೆಯ ಕನಸು ನನಸು ಮಾಡಲು ಹೊರಟಿದ್ದೀರಿ ಶುಭವಾಗಲಿ.
ಅದೃಷ್ಟ ಸಂಖ್ಯೆ: 8
ಕುಂಭ ರಾಶಿ
ಉದ್ಯೋಗದಲ್ಲಿನ ಅಸ್ಥಿರತೆಯ ಭವಿಷ್ಯದ ಭೀತಿಯನ್ನು ಸೃಷ್ಟಿಸಿದೆ. ಸ್ನೇಹಿತರ ಸಹವಾಸದಿಂದ ದೊಡ್ಡ ಪಾಠವನ್ನೇ ಕಲಿಯಲಿದ್ದೀರಿ. ವ್ಯಾಪಾರ-ವ್ಯವಹಾರದಲ್ಲಿ ನಿರಾಸಕ್ತಿ ಆವರಿಸಲಿದೆ. ಕೆಲವು ಚಿಕ್ಕ ತಪ್ಪುಗಳು ದೊಡ್ಡ ಮಟ್ಟದ ನಷ್ಟಕ್ಕೆ ದಾರಿಯಾಗುತ್ತದೆ.
ಆಧ್ಯಾತ್ಮದತ್ತ ಇಂದಿನ ಪ್ರಯಾಣ. ನಿಮ್ಮಲ್ಲಿನ ಕ್ಷಮಾ ಗುಣವೇ ದೊಡ್ಡ ಸ್ಥಾನದಲ್ಲಿ ಇರಿಸುತ್ತದೆ. ವಿವೇಚನಾರಹಿತ ಹಣದ ವೆಚ್ಚದಿಂದ ಸಾಲ ಬಾಧೆ ನಿಶ್ಚಿತ. ಸಂಗಾತಿಯ ಇಷ್ಟದ ವಸ್ತುಗಳನ್ನು ಪೂರೈಸಲು ವಿಫಲರಾಗುತ್ತೇವೆ. ಬಹು ನಿರೀಕ್ಷಿತ ಒಪ್ಪಂದ ಮುಂದೆ ಹೋಗುತ್ತದೆ.
ಅದೃಷ್ಟ ಸಂಖ್ಯೆ: 2
ಮೀನ ರಾಶಿ
ಇಂದು ಹೆಚ್ಚು ಕೃತಕತೆಯಲ್ಲಿ ಜೀವನ ಸಾಗಿಸುವಂತೆ ಇದೆ. ನಿಮ್ಮ ಸಂಭಾಷಣೆ ಕೇಳುಗರ ಮನ ಮುಟ್ಟಲು ವಿಫಲವಾಗುತ್ತದೆ. ಕೆಲವೊಂದು ಸಿದ್ಧಾಂತಗಳಿಗೆ ನಿಮ್ಮನ್ನು ನೀವು ಒಡ್ಡಿಕೊಳ್ಳುತ್ತೀರಿ. ಆರ್ಥಿಕ ಸಂಕಷ್ಟಗಳಿಗೆ ನಿಮ್ಮಿಂದ ವಿಶೇಷ ಪೂಜೆ ಪುನಸ್ಕಾರ ನಡೆಯಲಿದೆ.
ಮನೆಯಲ್ಲಿನ ಅಶಾಂತಿ ವಾತಾವರಣ ನಿಮ್ಮನ್ನು ಕಂಗೆಡಿಸುತ್ತದೆ. ಶ್ರಮಿಕ ವರ್ಗಕ್ಕೆ ಶ್ರಮಕ್ಕೆ ತಕ್ಕ ಫಲ ಸಿಗುವುದು ಮರೀಚಿಕೆಯಾಗುತ್ತಿದೆ. ವ್ಯವಹಾರದಲ್ಲಿ ಉದಾಸೀನತೆ. ನಿಮ್ಮ ಮೂಗಿನ ನೇರಕ್ಕೆ ಮಾತನಾಡುವುದು ಸರಿಯಲ್ಲ. ಹಾಸ್ಯಾಸ್ಪದ ವಿಚಾರಗಳಿಗೆ ಮನ ಸೋಲುತ್ತದೆ. ಸಂಗಾತಿಯ ಬೆಂಬಲದಿಂದ ಧನಾಗಮನ ನಿರೀಕ್ಷೆ.
ಅದೃಷ್ಟ ಸಂಖ್ಯೆ: 5