ಮೇಷ ರಾಶಿ

ಇಂದು ನೀವು ಬಂಡವಾಳದ ಕೊರತೆ ಅನುಭವಿಸಲಿದ್ದೀರಿ. ಮೋಜಿನ ಕೂಟಗಳಿಗೆ ನಿಮ್ಮಿಂದ ಹಣ ವೆಚ್ಚ ಆಗಲಿದೆ. ಐಶಾರಾಮಿ ವಸ್ತುಗಳ ಖರೀದಿಗೆ ಇದು ಸಕಾಲವಲ್ಲ.

ಉತ್ತಮ ಆರೋಗ್ಯ ಹೊಂದಿದ್ದು, ದಿನವಿಡಿ ಚಟುವಟಿಕೆಗಳಲ್ಲಿ ನಿರತರಾಗಿರುತ್ತಿರಿ. ಆಪ್ತ ವರ್ಗದವರು ನಿಮ್ಮ ಮಾತುಗಳಲ್ಲಿ ತಪ್ಪುಗಳನ್ನು ಹುಡುಕಲು ಪ್ರಯತ್ನಿಸುತ್ತಿರುತ್ತಾರೆ. ಸಂಗಾತಿಯೊಡನೆ ಸಮಾಧಾನದಿಂದ ವರ್ತಿಸುವುದು ಮನೆಯಲ್ಲಿ ಶುಭ ತರುತ್ತದೆ.

ಅದೃಷ್ಟ ಸಂಖ್ಯೆ : 9

ವೃಷಭ ರಾಶಿ

ವ್ಯಾಪಾರದಲ್ಲಿ ಆರ್ಥಿಕ ಮುಗ್ಗಟ್ಟಿನ ಸಮಸ್ಯೆ ಎದುರಾಗಲಿದೆ. ನಿಮ್ಮ ಕೆಲವೊಂದು ಅಗತ್ಯ ಕರ್ತವ್ಯಗಳು ಫಲಿತಾಂಶ ನೀಡುವುದಿಲ್ಲ. ಹಿತೈಷಿಗಳ ಸಹಕಾರ ಹಳೆಯ ಸಾಲ ಮರುಪಾವತಿ ಆಗುತ್ತದೆ.

ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ಕಾಣಬಹುದು. ಉದ್ಯೋಗದಲ್ಲಿ ಅವಕಾಶ ವಂಚಿತರಾಗುತ್ತಾರೆ. ಬೆಲೆಬಾಳುವ ವಸ್ತುಗಳ ಮೇಲೆ ನಿಗಾ ವಹಿಸಿ. ಇಂದು ಪ್ರವಾಸದ ಬಗ್ಗೆ ಯೋಜನೆ ಇದೆ. ಪ್ರೇಮಿಗಳಿಗೆ ಶುಭ ದಿನ.

ಅದೃಷ್ಟ ಸಂಖ್ಯೆ : 7

ಮಿಥುನ ರಾಶಿ

ಕೆಲವು ಅದ್ಭುತ ಆಲೋಚನೆಗಳು ಹೊಳೆಯುತ್ತದೆ. ಕ್ರಿಯಾತ್ಮಕ ಯೋಜನೆಗಳಿಗೆ ಚಾಲನೆ ನೀಡುತ್ತೀರಿ. ಭವಿಷ್ಯದ ದೃಷ್ಟಿಯನ್ನು ನೆನೆದು ಕೆಲವು ಹೂಡಿಕೆಗಳಲ್ಲಿ ಆಸಕ್ತಿ ಹೆಚ್ಚುತ್ತದೆ.

ಹೆಣ್ಣು ಮಕ್ಕಳಿಗೆ ಉಡುಗೊರೆಯ ಮಹಾಪೂರವೇ ಹರಿದು ಬರಲಿದೆ. ಚಿನ್ನಾಭರಣ ಖರೀದಿ ಯೋಗವಿದೆ. ಬಂಧುಗಳ ಆಗಮನದಿಂದ ಮನೆಯಲ್ಲಿ ಸಡಗರ. ವಿಶೇಷ ತಿನಿಸುಗಳ ಸ್ವಾದಿಷ್ಟ ಭೋಜನ. ನಿರುದ್ಯೋಗಿಗಳಿಗೆ ಅವಕಾಶ ಬರುತ್ತದೆ.

ಅದೃಷ್ಟ ಸಂಖ್ಯೆ : 3

ಕರ್ಕಾಟಕ ರಾಶಿ

ನೀರಿನ ಪ್ರದೇಶದಲ್ಲಿ ಮೋಜು ಮಸ್ತಿಯ ಕೂಟಗಳಿಗೆ ಪ್ರಯಾಣದ ವೇಳೆ ಸ್ವಲ್ಪ ಎಚ್ಚರಿಕೆ ವಹಿಸುವುದು ಸೂಕ್ತ. ನವೀನ ತಾಂತ್ರಿಕ ಸಂಬಂಧಪಟ್ಟ ವಸ್ತುಗಳ ಖರೀದಿ. ಇಂದು ನಿಮಗೆ ಸಿಗುವಂತಹ ಹಣಕಾಸು ಸಿಗಲಾರದು.

ನಿಮ್ಮಲ್ಲಿನ ಕಠೋರತೆಯಿಂದ ಒಬ್ಬ ಉತ್ತಮ ಗೆಳೆಯನನ್ನು ಕಳೆದುಕೊಳ್ಳಬೇಡಿ. ಆಹಾರದಲ್ಲಿ ಜಾಗ್ರತೆ ವಹಿಸಿ. ಪ್ರಯಾಣದಲ್ಲಿ ಎಚ್ಚರಿಕೆ ವಹಿಸಿ. ಸಮಯಕ್ಕಿಂತ ಮೊದಲೇ ಮನೆ ಸೇರುವುದು ಒಳ್ಳೆಯ ಬೆಳವಣಿಗೆ.

ಅದೃಷ್ಟ ಸಂಖ್ಯೆ : 2

ಸಿಂಹ ರಾಶಿ

ಇಂದು ಆಕಸ್ಮಿಕ ಧನ ಲಾಭ ಯೋಗವಿದೆ. ನಿಮ್ಮಲ್ಲಿನ ಉದ್ವೇಗವನ್ನು ಹತೋಟಿಯಲ್ಲಿಡಲು ಪ್ರಯತ್ನಪಡಿ. ಉದ್ಯೋಗದಲ್ಲಿ ಕೆಲವು ಮಹತ್ವದ ಬದಲಾವಣೆ ನಿಶ್ಚಿತ. ಮುಖ್ಯವಾದ ಕೆಲಸದ ಮೇಲೆ ದೂರದ ಪ್ರಯಾಣ. ಮಕ್ಕಳಿಗೆ ಅಧ್ಯಯನ ದೃಷ್ಟಿಯಿಂದ ಹೊಸ ಕೋರ್ಸ್ ಗಳಿಗೆ ಸೇರ್ಪಡೆ.

RELATED ARTICLES  ಬೊಗಳುವ ನಾಯಿಗಳಿಗೆ ನಾವು ತಲೆಕೆಡಿಸಿಕೊಳ್ಳಲ್ಲ, ನಾವು ಹಠವಾದಿಗಳು: ಅನಂತ್ ಕುಮಾರ್ ಹೆಗ್ಡೆ

ನಿಮ್ಮ ಸಾಮರ್ಥ್ಯದಿಂದ ವಾದದಲ್ಲಿ ಗೆಲುವು. ಇಂದು ನೀವು ಪ್ರೇಮಿಯನ್ನು ಭೇಟಿಯಾಗಲಿದ್ದಿರಿ. ವೈವಾಹಿಕ ಜೀವನದಲ್ಲಿ ಸಫಲತೆಯನ್ನು ಕಾಣುತ್ತೀರಿ. ಸಹೋದರರಿಂದ ಕೆಲವು ಆರೋಪಗಳು ನಿಮ್ಮ ಮೇಲೆ ಬೀಳಲಿದೆ.

ಅದೃಷ್ಟ ಸಂಖ್ಯೆ : 4

ಕನ್ಯಾ ರಾಶಿ

ಇಂದು ಜಡತ್ವದಿಂದಲೇ ಕಾಲ ಕಳೆಯುತ್ತೀರಿ. ಕುಟುಂಬದ ಜೊತೆ ಕಾಲ ಕಳೆಯುವುದು ಹೆಚ್ಚು ಸಂತೋಷದಾಯಕವಾಗಿರುತ್ತದೆ. ಚುಟುಕು ಪ್ರವಾಸವೂ ನಿಮ್ಮನ್ನು ಹುಮ್ಮಸ್ಸಿನಿಂದ ಇಡುತ್ತದೆ.

ಮಿತ್ರರ ಆಗಮನದಿಂದ ಆರ್ಥಿಕವಾಗಿ ಖರ್ಚು ಬಹಳ. ಕೆಲವೊಂದು ವಿಷಯ ಅಥವಾ ಸುದ್ದಿ ನಿಮ್ಮಲ್ಲಿ ಆತಂಕ ತರಿಸುತ್ತದೆ. ಯಾವುದೇ ವಿಷಯಗಳನ್ನು ಸೂಕ್ಷ್ಮವಾಗಿ ಪರಾಮರ್ಶಿಸುವುದು ಒಳ್ಳೆಯದು. ದಾಂಪತ್ಯದಲ್ಲಿ ಪ್ರೇಮ ಎಷ್ಟು ಮುಖ್ಯವೋ ನಂಬಿಕೆ ಅದಕ್ಕಿಂತ ಬಹಳ ಮುಖ್ಯ.

ಅದೃಷ್ಟ ಸಂಖ್ಯೆ : 1

ತುಲಾ ರಾಶಿ

ಉದ್ಯೋಗದಲ್ಲಿನ ಒತ್ತಡದಿಂದ ಹೊರಗಡೆ ಬರಲು ಪ್ರಯತ್ನ ಪಡಿ. ಕುಟುಂಬದವರೊಡನೆ ಕಾಲ ಕಳೆಯುವುದು ಆತ್ಮವಿಶ್ವಾಸಕ್ಕೆ ದಾರಿ ಮಾಡುತ್ತದೆ. ನಿಮ್ಮ ಮನೆ ದೇವರ ಆಶೀರ್ವಾದದಿಂದ ಕಷ್ಟದ ಕೆಲಸ ಆರಾಮದಾಯಕವಾಗಿ ನೆರವೇರುತ್ತದೆ.

ಆರೋಗ್ಯದಲ್ಲಿ ಖಂಡಿತ ಚೇತರಿಕೆ ಇದೆ. ನಿಮ್ಮಲ್ಲಿನ ಬಂಡವಾಳವನ್ನು ಕ್ರೂಢೀಕರಿಸಿ ನವ ಉದ್ಯಮಕ್ಕೆ ಧುಮುಕುವುದು ಒಳಿತು. ಸಾಧ್ಯವಾದಷ್ಟು ಸಾಲ ಪಡೆಯುವುದನ್ನು ಕಡಿಮೆ ಮಾಡಿ. ವ್ಯಾಪಾರ ಸ್ಥಳದಲ್ಲಿ ಶುಚಿತ್ವ ಮತ್ತು ಆಕರ್ಷಣೆಯನ್ನು ಕಾಪಾಡಿಕೊಳ್ಳಿ .

ಅದೃಷ್ಟ ಸಂಖ್ಯೆ : 6

ವೃಶ್ಚಿಕ ರಾಶಿ

ಆತ್ಮೀಯರಲ್ಲಿ ವಿರಸ ಹೆಚ್ಚಾದೀತು. ಧನಾಗಮನದ ಸಿಹಿ ಸುದ್ದಿ ನಿಮ್ಮನ್ನು ಉನ್ನತ ದರ್ಜೆಗೆ ಕೊಂಡೊಯ್ಯುವುದು. ನೀವು ನಿಮಗಾಗಿ ಕೆಲವು ಸಾಮಗ್ರಿಗಳನ್ನು ಕೊಂಡುಕೊಳ್ಳುತ್ತೀರಿ. ಕುಟುಂಬದ ಇಷ್ಟದಂತೆ ಸಂಬಂಧಿಕರ ಮನೆಗೆ ಭೇಟಿ ನೀಡಲಿದ್ದೀರಿ.

ಹಣ ಗಳಿಕೆ ಜೀವನವಲ್ಲ ಸಂತೋಷದಾಯಕವಾಗಿ ಕುಟುಂಬ ನಿರ್ವಹಣೆಯೂ ಜೀವನದ ಒಂದು ಭಾಗ. ಆಡಳಿತಾತ್ಮಕ ವಿಚಾರಗಳಿಗೂ ನಿಮ್ಮ ವಿಚಾರಗಳಿಗೆ ವ್ಯತ್ಯಾಸಗಳು ಕಾಣಿಸುತ್ತದೆ. ನಂಬಿರುವ ಕೆಲವು ಜನರಿಂದ ಮೋಸಕ್ಕೆ ಒಳಗಾಗುವ ವಾತಾವರಣ ಸೃಷ್ಟಿಸಬಹುದು.

ಅದೃಷ್ಟ ಸಂಖ್ಯೆ : 4

ಧನಸ್ಸು ರಾಶಿ

ಸಮಾಜಮುಖಿ ಚಿಂತನೆಗಳಿಂದ ಗೌರವ ಪ್ರಾಪ್ತಿ. ಕೆಲವು ಗಣ್ಯ ವ್ಯಕ್ತಿಗಳ ಭೇಟಿ. ಮನೆ ಮಾರಾಟ ಮಾಡಲು ಹವಣಿಸುತ್ತಿರುವವರಿಗೆ ಇಂದು ಶುಭ ಸುದ್ದಿ . ದೈಹಿಕವಾಗಿ ಹಾಗೂ ಮಾನಸಿಕ ಖಿನ್ನತೆಗಳು ಕಾಣಿಸುತ್ತದೆ.

RELATED ARTICLES  ಬಿಗ್ ಬಾಸ್ ಸ್ಪರ್ಧಿಯ ಬಂಧನ : ಬಿಗ್ ಬಾಸ್ ಮನೆಯಿಂದಲೇ ಅರೆಸ್ಟ್? ಏನಾಯ್ತು - ಏನಿದು ಘಟನೆ?

ನೀವು ಪರರಿಗಾಗಿ ಬದುಕುತ್ತಿದ್ದಿರಿ, ಆದರೆ ನಿಮಗಾಗಿ, ಕುಟುಂಬಕ್ಕಾಗಿ ಸಂತೋಷಗಳನ್ನು ಮೀಸಲಿಡಿ. ಅಪರೂಪ ವಸ್ತುಗಳ ಸಂಗ್ರಹಣೆ ಮಾಡುತ್ತೀರಿ. ಸಂಶೋಧನೆಗಳಿಗೆ ನಿಮ್ಮನ್ನು ನೀವು ತೊಡಗಿಸಿಕೊಳ್ಳುತ್ತಿರಿ. ಸಂಜೆ ವೇಳೆಗೆ ನಿಮ್ಮ ಕೆಲವೊಂದು ಇಷ್ಟಾರ್ಥಗಳು ಈಡೇರುವ ಸಮಯವಿದು.

ಅದೃಷ್ಟ ಸಂಖ್ಯೆ : 5

ಮಕರ ರಾಶಿ

ಪ್ರೇಮಿಗಳ ಬಹು ದಿನದ ಬಯಕೆ ಇಂದು ಮೂರ್ತ ಸ್ವರೂಪ ಪಡೆಯಲಿದೆ. ನಿಮ್ಮ ಕೆಲವು ಆಲೋಚನೆಗಳು ವಿಚಿತ್ರದಾಯಕವಾಗಿರುತ್ತದೆ. ಸರ್ಕಾರಿ ಕೆಲಸಗಳಲ್ಲಿ ಹಿನ್ನಡೆ. ಕೆಲವೊಂದು ಆಕರ್ಷಣೆಯ ಜಾಲದೊಳಗೆ ಸಿಲುಕಬಹುದು.

ಉತ್ತಮ ಲೇಖನದಿಂದ ಮನ್ನಣೆ ಗಳಿಸಿದ್ದೀರಿ. ವೃತ್ತಿ ಸ್ತರದಲ್ಲಿ ತಾಂತ್ರಿಕ ಅಡಚಣೆ ಕಾಣಬಹುದು. ಆರೋಗ್ಯದ ಸಮಸ್ಯೆಗಳಿಂದ ಕೆಲಸ ಕಾರ್ಯಗಳಲ್ಲಿ ಜಡತ್ವ. ಗುರು-ಹಿರಿಯರ ಆಶೀರ್ವಾದದಿಂದ ಸಮೃದ್ಧಿ ಕಾಣಲು ಸಾಧ್ಯ. ಕುಟುಂಬದ ಹಿರಿಯರ ಮೇಲೆ ಗೌರವದಿಂದ ನಡೆದುಕೊಳ್ಳುವುದು ಉತ್ತಮ.

ಅದೃಷ್ಟ ಸಂಖ್ಯೆ : 1

ಕುಂಭ ರಾಶಿ

ಹೇಳಿಕೆಯ ಮಾತಿಗೆ ಯಾವುದೇ ಕಾರಣಕ್ಕೂ ಬೆಲೆ ನೀಡದೆ ಇರುವುದು ಉತ್ತಮ ಇದು ಕುಟುಂಬದ ಸ್ವಾಸ್ತ್ಯ ಹಾಳುಗೆಡವುತ್ತದೆ. ಇಂದು ನಿಮ್ಮ ಸಹಾಯದ ಅಪೇಕ್ಷೆ ಮೇರೆಗೆ ಸ್ನೇಹಿತರ ಆಗಮನ. ಸಂಗಾತಿಯ ನಡುವೆ ಅನ್ಯೋನ್ಯತೆ ಬಹಳ ಅವಶ್ಯಕ.

ಮಹಿಳೆಯರ ಗೃಹ ಉದ್ಯಮಕ್ಕೆ ಲಾಭ ಮತ್ತು ಕೆಲವು ಯೋಜನೆಗಳು ಅಳವಡಿಸಿಕೊಳ್ಳುತ್ತೀರಿ. ಉದ್ಯಮಿಗಳಿಗೆ ಬೇಡಿಕೆ ಹೆಚ್ಚುತ್ತದೆ. ಆದರೆ ನುರಿತ ಕೆಲಸಗಾರರ ಕೊರತೆ ಕಾಣುತ್ತಿರಿ. ಬಂಧು-ಮಿತ್ರರ ಯೋಗಕ್ಷೇಮ ಕೇಳುವುದರಿಂದ ನಿಮ್ಮ ಬಗ್ಗೆ ಅಪಾರ ಗೌರವಾದರಗಳು ದೊರೆಯಲಿದೆ. ಸಾಲ ಕೊಡಬೇಕಾದ ಸಂದರ್ಭ ಬಂದರೆ ನಿಮ್ಮ ಅನುಕೂಲ ನೋಡಿಕೊಳ್ಳುವುದು ಉತ್ತಮ.

ಅದೃಷ್ಟ ಸಂಖ್ಯೆ : 7

ಮೀನ ರಾಶಿ

ಇಂದು ಆಧ್ಯಾತ್ಮದ ಜೊತೆಯಲ್ಲಿ ಕಾಲ ಕಳೆಯುತ್ತೀರಿ. ಸಾಹಿತ್ಯ-ಸಂಗೀತ-ಕಲೆ-ಪುಸ್ತಕ ಇವುಗಳು ನಿಮ್ಮನ್ನು ಪರಿಪೂರ್ಣ ವ್ಯಕ್ತಿಯನ್ನಾಗಿ ರೂಪಿಸುತ್ತದೆ. ಬಲು ಕಷ್ಟದ ಕೆಲಸ ಅನಾಯಾಸವಾಗಿ ನೆರವೇರುವುದು ನಿಶ್ಚಿತ. ನಿಮ್ಮ ಮೃದು ಮಾತು ಹಲವು ಅಭಿಮಾನಿಗಳನ್ನು ಸೃಷ್ಟಿಸುತ್ತದೆ.

ನಿಮ್ಮ ಬಹು ದಿನದ ಹರಕೆ ಪೂಜಾ ಕಾರ್ಯಕ್ರಮವನ್ನು ನೆರವೇರಿಸಲು ಉತ್ಸಾಹ ಬರುವುದು. ಹಣಕಾಸಿನ ವಿಷಯದಲ್ಲಿ ಲಾಭ ಗಳಿಕೆ ಇದ್ದರೂ ಎಚ್ಚರ ವಹಿಸುವುದು ಸೂಕ್ತ. ನಿಮ್ಮ ವ್ಯವಹಾರ ನೀವೇ ನೋಡುವುದು ಉತ್ತಮ ವ್ಯವಹಾರದಲ್ಲಿ ಮತ್ತೊಬ್ಬರ ಹಸ್ತಕ್ಷೇಪ ಬೇಡ.

ಅದೃಷ್ಟ ಸಂಖ್ಯೆ : 9