ಮೇಷ ರಾಶಿ

ನಿಮ್ಮ ಕೌಟುಂಬಿಕ ಸಮಸ್ಯೆಗಳನ್ನು ನಿವಾರಿಸಲು ಪ್ರಯತ್ನ ಪಡುವಿರಿ. ವೈವಾಹಿಕ ಜೀವನದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಫಲ ದೊರೆಯುತ್ತದೆ. ನಿಮ್ಮ ಮಾತಿನ ಧಾಟಿ, ವ್ಯಕ್ತಿತ್ವದ ಸುಧಾರಣೆ ಆಗಲಿದೆ.

ಮೋಜು-ಮಸ್ತಿಗಳಲ್ಲಿ ಕಾಲ ಕಳೆಯುತ್ತೀರಿ. ಅತಿಯಾದ ಮೋಜಿನ ಕೂಟಗಳಿಂದ ನಿಮ್ಮ ಆರೋಗ್ಯ ವ್ಯತ್ಯಾಸ ಕಾಣಬಹುದು. ಆಕಸ್ಮಿಕ ಧನ ಲಾಭಗಳನ್ನು ನಿರೀಕ್ಷೆ ಮಾಡಬಹುದು. ಅನಿರೀಕ್ಷಿತ ಮಿತ್ರರ ಭೇಟಿಯಿಂದ ಸಂತೋಷ. ಮಕ್ಕಳಿಗಾಗಿ ಕೆಲವು ವಿಶೇಷ ಯೋಜನೆಗಳನ್ನು ಮಾಡಲಿದ್ದೀರಿ.

ಅದೃಷ್ಟ ಸಂಖ್ಯೆ : 3

ವೃಷಭ ರಾಶಿ

ಆತುರದ ನಿರ್ಧಾರಗಳಿಂದ ನಿರಾಶರಾಗುವುದು ಖಚಿತ. ಕೆಲವು ಯೋಜನೆಗಳ ಅರಿವು ಪಡೆದು ವ್ಯವಹಾರದಲ್ಲಿ ಇಳಿಯುವುದು ಉತ್ತಮ. ಮಧ್ಯವರ್ತಿ ಕೆಲಸಗಾರರಿಗೆ ಶುಭಕರ ದಿನವಾಗಿದೆ. ನಿಮ್ಮ ಜೀವನದಲ್ಲಿ ನಿಮ್ಮ ಪ್ರೀತಿಪಾತ್ರರ ನಡವಳಿಕೆಯು ವಿಚಿತ್ರವಾಗಿ ಹಾಗೂ ಅನುಮಾನಸ್ಪದವಾಗಿ ಕಾಣುತ್ತದೆ.

ಸದಾ ನಿಮ್ಮಲ್ಲಿರುವ ನಗುವಿನಿಂದ ಬಯಸಿದ ಕೆಲಸವನ್ನು ಕ್ಷಣಾರ್ಧದಲ್ಲಿ ಮುಗಿಸುವಿರಿ. ಬೇಡದ ವಿಚಾರಗಳಿಗೆ ಮನಸ್ಸು ಸೋಲುತ್ತದೆ. ಪ್ರೀತಿ ಪಾತ್ರರ ನಡುವೆ ವೈಮನಸ್ಸು. ಕೆಲವೊಂದು ಕಟ್ಟುಪಾಡು ಮಾಡಿಕೊಂಡಿದ್ದೀರಿ ಅದರಿಂದ ಹೊರಬರಲು ಪ್ರಯತ್ನಪಡಿ.

ಅದೃಷ್ಟ ಸಂಖ್ಯೆ : 2

ಮಿಥುನ ರಾಶಿ

ಅವಕಾಶಗಳು ನಿಮ್ಮ ಮನೆ ಬಾಗಿಲಿಗೆ ಹುಡುಕಿಕೊಂಡು ಬರುತ್ತದೆ. ನಿಮ್ಮ ಕೆಲವು ಉದ್ಯೋಗ ಸ್ಥಳದಲ್ಲಿನ ಸಮಸ್ಯೆಗಳಿಗೆ ಸ್ನೇಹಿತರ ಸಹಾಯ ದೊರೆಯಲಿದೆ. ಇಂದಿನ ದಿನದಲ್ಲಿ ಪ್ರಣಯವು ಆಸಕ್ತಿದಾಯಕವಾಗಿರುತ್ತದೆ. ಋಣಾತ್ಮಕ ವಿಚಾರಗಳಿಂದ ಆದಷ್ಟು ದೂರವಿರುವುದು ಲೇಸು.

ನಿಮ್ಮಲ್ಲಿನ ಅಗಾಧ ವಿದ್ಯೆ ಮತ್ತು ಜ್ಞಾನದ ಸಂಪತ್ತಿನಿಂದ ನಿಮ್ಮ ಸುತ್ತಲಿನ ಜನರನ್ನು ಆಕರ್ಷಿಸುತ್ತಿರಿ. ನೀವು ಭಾವನಾತ್ಮಕವಾಗಿ ವರ್ತಿಸುವಿರಿ. ವ್ಯವಹಾರದಲ್ಲಿ ತೀವ್ರತರನಾದ ಪೈಪೋಟಿ ಅನುಭವಿಸಲಿದ್ದೀರಿ. ವಿಶೇಷ ಔತಣ ಕೂಟದ ಭಾಗ್ಯ ಒದಗಲಿದೆ.

ಅದೃಷ್ಟ ಸಂಖ್ಯೆ : 5

ಕರ್ಕಾಟಕ ರಾಶಿ

ನಿಮ್ಮ ಪ್ರೀತಿ ಪಾತ್ರರು ಸಂಗಾತಿಯು ಅವರ ಪ್ರೇಮದಿಂದ ನಿಮ್ಮನ್ನು ಸಂತುಷ್ಟಗೊಳಿಸಲಿದ್ದಾರೆ. ನಿಮ್ಮ ಮನಸ್ಸಿನ ನಿರ್ಧಾರದಿಂದ ಇಂದಿನ ಹಣಕಾಸಿನ ವಿಷಯವು ಅವಲಂಬಿಸಿರುತ್ತದೆ. ಹಣಕಾಸಿನಲ್ಲಿ ಬರುವುದು ಸೇರುವುದಿಲ್ಲ ಸಮತಲದಿಂದ ಕೂಡಿದೆ. ದೂರದ ಸಂಬಂಧಿಗಳಿಗೆ ಮಾರ್ಗದರ್ಶನ ನೀಡಲಿದ್ದೀರಿ.

ನಿಮ್ಮ ಪ್ರೇಮದ ಪರೀಕ್ಷೆಯಲ್ಲಿ ಜಯಶೀಲರಾಗುವಿರಿ. ಬಹುಕಾಲದಿಂದ ಕಳೆದು ಹೋದ ವಸ್ತು ನಿಮಗೆ ಆಕಸ್ಮಿಕವಾಗಿ ದೊರೆಯಬಹುದು. ನೀವು ಇಂದು ಭೋಜನ ಪ್ರಿಯರು. ರುಚಿಕರ ಖಾದ್ಯಗಳು ನಿಮ್ಮ ಆರೋಗ್ಯ ಕೆಡಿಸಬಹುದು ಎಚ್ಚರವಿರಲಿ. ನಿರಂತರ ದುಡಿಮೆಯು ನಿಮ್ಮನ್ನು ಆಯಾಸಗೊಳಿಸುತ್ತದೆ. ಲೇವಾದೇವಿ ವ್ಯವಹಾರದಿಂದ ದೂರ ಇರುವುದು ಒಳಿತು.

RELATED ARTICLES  ರಾಘವೇಶ್ವರ ಶ್ರೀ ಹಾಗೂ ಆದಿತ್ಯನಾಥ್ ಭೇಟಿ: "ಗೋಸ್ವರ್ಗ"ದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಯೋಗಿ

ಅದೃಷ್ಟ ಸಂಖ್ಯೆ : 7

ಸಿಂಹ ರಾಶಿ

ಮನೆ ಕೆಲಸದಲ್ಲಿ ಶ್ರದ್ಧೆ ರೂಢಿಸಿಕೊಳ್ಳಿ. ಸಂಗಾತಿ ಒತ್ತಡ ಕೆಲಸದಲ್ಲಿ ಪಾಲ್ಗೊಳ್ಳುವುದರಿಂದ ಉತ್ತಮ ವ್ಯಕ್ತಿತ್ವ ನಿರೂಪಣೆ ಮಾಡುವಿರಿ. ನಿಮ್ಮ ಮೊಂಡು ವಾದ ಅತಿರೇಕಕ್ಕೆ ಹೋಗುತ್ತದೆ ತಾಳ್ಮೆಯಿಂದ ವರ್ತಿಸಿ. ಸಮಯದಲ್ಲಾಗುವ ಘಟನೆಗಳಿಗೆ ನಿಮ್ಮ ಬುದ್ಧಿವಂತಿಕೆ ಸಹಕಾರಿಯಾಗಲಿದೆ. ದ್ವೇಷ-ವೈಷಮ್ಯಗಳಿಂದ ದೂರವಿರಿ.

ಸಣ್ಣ ಪ್ರಮಾಣದ ಹಣದ ಹೂಡಿಕೆ ನಿಮಗೆ ಇಂದು ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ನಿಮ್ಮ ಉನ್ನತ ಮಟ್ಟದ ವಿಚಾರಗಳು, ಐಷಾರಾಮಿ ಆಸೆಗಳು ಆತಂಕ ತರುತ್ತದೆ. ಮನೆಗೆ ತಡರಾತ್ರಿ ಬರುವುದನ್ನು ನಿಯಂತ್ರಿಸಿ. ಖರ್ಚುಗಳಿಗೆ ಕಡಿವಾಣ ಹಾಕಿ. ಉತ್ತಮರ ಸಂಗ ವಿಚಾರಗೋಷ್ಠಿಗಳಿಂದ ಹೊಸ ಆಲೋಚನೆ ಹಾಗೂ ಹೊಸ ಮಿತ್ರರ ಸಂಪಾದನೆ ನೀಡುತ್ತದೆ. ನಿಮ್ಮ ಸಂಗಾತಿಯ ಸ್ವಾರ್ಥವೂ ನಿಮ್ಮ ಪ್ರೀತಿಗಾಗಿಯೇ ಎಂಬುದನ್ನು ಮರೆಯದಿರಿ.

ಅದೃಷ್ಟ ಸಂಖ್ಯೆ : 1

ಕನ್ಯಾ ರಾಶಿ

ಆರ್ಥಿಕ ಮುಗ್ಗಟ್ಟಿನ ಕೊರತೆಯಿಂದ ನಿಮ್ಮ ಕೆಲವು ಯೋಜನೆಗಳು ದಾರಿ ತಪ್ಪುವ ಸಂಭವ. ಕುಟುಂಬದಲ್ಲಿ ಹೊಸ ಸದಸ್ಯರ ಆಗಮನದಿಂದ ಸಂತೋಷದ ಕ್ಷಣಗಳು ನಿಮ್ಮದಾಗಲಿವೆ. ಪ್ರಣಯ ಪ್ರಸಂಗಗಳ ವಿಜೃಂಭಣೆಯಿಂದ ಚೈತನ್ಯ ವೃದ್ದಿ ಆಗುತ್ತದೆ. ಆರೋಗ್ಯದ ಸುಧಾರಣೆಗಾಗಿ ಪ್ರಯತ್ನ ಪಡುವಿರಿ.

ನಿಮ್ಮ ಬಾಲ್ಯದ ಗೆಳೆಯನ ಆಗಮನದಿಂದ ಸಂತೋಷ ಕೂಟಗಳಲ್ಲಿ ಪಾಲ್ಗೊಳ್ಳುವ ನಿರೀಕ್ಷೆ. ಸಂಗಾತಿಯೊಡನೆ ಒಂದು ಸುಂದರ ಸಂಜೆ ಕಳೆಯಿರಿ. ಸೌಂದರ್ಯ ಆರಾಧಕರಾಗಿ ನಿಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಲಿದ್ದೀರಿ. ಇಂದ್ರಿಯಗಳನ್ನು ಮೀರಿದ ಪ್ರೀತಿಯ ಭಾವವು ನಿಮ್ಮನ್ನು ಚಿರಯುವಕನಂತೆ ಮಾಡುತ್ತದೆ.

ಅದೃಷ್ಟ ಸಂಖ್ಯೆ : 5

ತುಲಾ ರಾಶಿ

ವಿಶ್ರಾಂತಿಯಿಂದ ಆರೋಗ್ಯ ವೃದ್ಧಿಸಿಕೊಳ್ಳಿ. ದೀರ್ಘ ಕಾಲದ ಹೂಡಿಕೆಯಿಂದ ಲಾಭಾಂಶ. ನೀವು ಇಂದು ದೈಹಿಕ ಕಸರತ್ತು ಅಥವಾ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಯೋಜನೆ ಮಾಡುತ್ತೀರಿ. ಪ್ರವಾಸಿ ಸ್ಥಳಕ್ಕೆ ಭೇಟಿ ನೀಡುವುದರಿಂದ ಮನಸ್ಸಿಗೆ ಆಹ್ಲಾದ ನೀಡುವುದು.

ಅನಿರೀಕ್ಷಿತ ಪ್ರಯಾಣ ಒದಗಿ ಬರಲಿದೆ. ನಿಮ್ಮ ಅಪೇಕ್ಷೆಯಂತೆ ಜೀವನ ಸಾಗಿಸಲು ಬಹಳ ಕಠಿಣ ಪರಿಸ್ಥಿತಿಯಿಂದ ಕೂಡಿದೆ. ಮಕ್ಕಳ ಕೆಲವು ತಪ್ಪುಗಳು ನಿಮಗೆ ನೋವನ್ನು ತರಿಸುತ್ತದೆ. ಸಂಗಾತಿಯ ಮಾತುಗಳಿಂದ ಅದ್ಭುತವಾದದ್ದು ಜರುಗಲಿದೆ.

ಅದೃಷ್ಟ ಸಂಖ್ಯೆ : 7

ವೃಶ್ಚಿಕ ರಾಶಿ

ನಿಮ್ಮ ಒರಟು ಗುಣವೂ ಇಂದು ಶಾಂತಿಯಿಂದ ಕೂಡಿರುತ್ತದೆ. ಇಂದು ಸಮಯಕ್ಕೆ ಅನುಗುಣವಾಗಿ ಎಲ್ಲಾ ಕಾರ್ಯವೂ ಶುಭಕರವಾಗಿ ನಡೆಯಲಿದೆ. ನಿಮ್ಮದಲ್ಲದ ಸ್ವಭಾವವು ಇಂದು ಮನೆಯಲ್ಲಿ ವೈವಿಧ್ಯಮಯವಾದ ಕೆಲಸ ನಡೆಯಲಿದ್ದು, ಆತ್ಮೀಯರಲ್ಲಿ ಸಂತೋಷ ತರುತ್ತದೆ.

RELATED ARTICLES  ಧರ್ಮಸ್ಥಳ ಮಹಾಮಸ್ತಕಾಭಿಷೇಕ: ಪಂಚಮಹಾವೈಭವ ವೇದಿಕೆ ಚಪ್ಪರ ಕುಸಿದು ಅವಘಡ

ನಿಮ್ಮ ಹೂಡಿಕೆಯು ನಿಖರ ಮತ್ತು ನಿರ್ದಿಷ್ಟತೆಯಿಂದ ಕೂಡಿರಲಿ. ಇಂದು ನಿಮ್ಮಲ್ಲಿ ರಂಜನೆ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಚೈತನ್ಯದಿಂದ ಇರಿಸುತ್ತದೆ.

ಅದೃಷ್ಟ ಸಂಖ್ಯೆ : 9

ಧನಸ್ಸು ರಾಶಿ

ವ್ಯಾಯಾಮ ಹಾಗೂ ಮಾನಸಿಕ ಚಟುವಟಿಕೆಗಳಿಂದ ಆರೋಗ್ಯ ಕಾಪಾಡಿಕೊಳ್ಳಿ. ಹಣಕಾಸಿನ ವ್ಯವಹಾರ ಹಾಗೂ ಆಸ್ತಿಯ ಸಮಸ್ಯೆಗಳು ಇತ್ಯರ್ಥವಾಗಿ ಲಾಭ ತರುತ್ತವೆ. ಮಕ್ಕಳ ಸ್ವಭಾವ ಅವರ ವಿದ್ಯೆಯ ಮೇಲೆ ನಿಗಾ ವಹಿಸಿ.

ಸಂಗಾತಿಯ ಸೂಕ್ಷ್ಮ ನೋಟದ ಪ್ರಭಾವಕ್ಕೆ ಒಳಗಾಗಿ ಎಲ್ಲವೂ ಸುಂದರವಾಗಿ ಕಾಣುತ್ತೀರಿ. ನಿಮ್ಮ ವ್ಯಕ್ತಿತ್ವದ ಸುಧಾರಣೆ ಸಂಕಲ್ಪ ಮಾಡುವಿರಿ. ಆನಂದ ಎಂಬುದು ಹೊರಗಿನ ಮನರಂಜನೆಯಲ್ಲಿ ಇಲ್ಲ. ಕುಟುಂಬದ ಜೊತೆ ಸಂತೋಷದಿಂದ ಕಾಲ ಕಳೆಯುವುದು ನಿಜವಾದ ಆನಂದ.

ಅದೃಷ್ಟ ಸಂಖ್ಯೆ : 7

ಮಕರ ರಾಶಿ

ಸಾಂಪ್ರದಾಯಿಕ ಶೈಲಿಯ ಆಹಾರ ಪದ್ಧತಿಯು ಆರೋಗ್ಯವನ್ನು ಕಾಪಾಡುತ್ತದೆ. ಮಕ್ಕಳ ಮೇಲಿನ ನಿಮ್ಮ ಅತಿಯಾದ ಹೇರಿಕೆಯೂ ಆದಷ್ಟು ನಿಯಂತ್ರಣದಲ್ಲಿಡಿ. ಧನ ಲಾಭ ಯೋಗವು ಅನಿರೀಕ್ಷಿತವಾಗಿ ಇದೆ.

ಹೂಡಿಕೆಯ ಬಗ್ಗೆ ಜಾಗ್ರತೆ ವಹಿಸಿ. ಸ್ನೇಹಿತರು ಅವರ ಸಮಯಕ್ಕಾಗಿ ನಿಮ್ಮನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಮರೆಯದಿರಿ. ದಂಪತಿಗಳಿಗೆ ಶುಭ ಸುದ್ದಿ ಕೇಳಲಿದ್ದೀರಿ.

ಅದೃಷ್ಟ ಸಂಖ್ಯೆ : 6

ಕುಂಭ ರಾಶಿ

ಹೊಸ ಒಪ್ಪಂದದಿಂದ ಹೆಚ್ಚಿನ ಲಾಭಾಂಶವಿಲ್ಲ. ಬಾಕಿ ಇರುವ ಕೆಲಸವು ಇಂದು ಪೂರ್ಣಗೊಳ್ಳುತ್ತದೆ. ಕೆಲವೊಂದು ವಿಷಯಕ್ಕೆ ನಿಮ್ಮನ್ನು ಮಧ್ಯವರ್ತಿಗಳಾಗಿ ಆಹ್ವಾನಿಸುತ್ತಾರೆ. ನಿಮ್ಮ ವಿಶ್ವಾಸ ಮತ್ತು ಪ್ರಗತಿ ಮನೆಯಲ್ಲಿಯೇ ಇದೆ.

ಸಂಜೆ ವೇಳೆಗೆ ಒತ್ತಡದಿಂದ ವಿಶ್ರಾಮ ತೆಗೆದುಕೊಳ್ಳಲು ಬಯಸುತ್ತೀರಿ. ನೀವು ಇಂದು ವಿಶೇಷ ವ್ಯಕ್ತಿಗಳಾಗಿ ಗೌರವಕ್ಕೆ ಪಾತ್ರರಾಗುವಿರಿ. ನಿಮ್ಮ ಹತೋಟಿಯಲ್ಲಿರುವ ಕೆಲಸಗಾರರಿಗೆ ಹೊಸದಾದ ಜವಾಬ್ದಾರಿ ನೀಡಲಿದ್ದೀರಿ. ಕೆಲಸದಲ್ಲಿನ ಶ್ರದ್ಧೆಯು ನಿಮ್ಮನ್ನು ನಾಯಕ ಸ್ಥಾನದಲ್ಲಿ ಇರಿಸುತ್ತದೆ.

ಅದೃಷ್ಟ ಸಂಖ್ಯೆ : 4

ಮೀನ ರಾಶಿ

ಅನಾವಶ್ಯಕ ಚಿಂತೆಯಿಂದ ಮಾನಸಿಕ ಕಿರಿಕಿರಿ. ಹೊಸ ಆರ್ಥಿಕ ಒಪ್ಪಂದಗಳು ಫಲಿತಾಂಶ ನೀಡುತ್ತವೆ. ಸಮಸ್ಯೆಗಳಿಗೆ ಸರಿಯಾದ ಹಾಗೂ ಪ್ರಾಮಾಣಿಕ ನಿರ್ಧಾರ ತೆಗೆದುಕೊಳ್ಳಿ. ಕೆಲವು ಧಾರ್ಮಿಕ ಕ್ಷೇತ್ರಗಳ ಭೇಟಿ ನೀಡುವುದರಿಂದ ಧನಾತ್ಮಕ ಅಂಶವು ವೃದ್ಧಿಯಾಗುತ್ತದೆ.

ನಿಮ್ಮ ವ್ಯಕ್ತಿತ್ವಕ್ಕೆ ಅಪಪ್ರಚಾರ ಮಾಡುವ ಜನರಿಂದ ದೂರವಿರಿ. ಉದ್ಯೋಗದಲ್ಲಿ ನಿಮ್ಮ ಬೇಡಿಕೆ ಹೆಚ್ಚಿರುತ್ತದೆ. ಹಣಕಾಸಿನ ಯೋಜನೆ ಭರವಸೆ ಮೂಡಿಸುತ್ತದೆ. ಅನಾವಶ್ಯಕ ಮರೆವುತನವು ಮನೆಯಲ್ಲಿ ಶಾಂತಿ ಕೆಡಿಸುತ್ತದೆ.

ಅದೃಷ್ಟ ಸಂಖ್ಯೆ : 9