ಮೇಷ ರಾಶಿ

ನಿಮ್ಮ ದೀರ್ಘ ಕಾಲದ ಸಮಸ್ಯೆಗಳಿಂದ ಹೊರ ಬರುವ ಶುಭಕರ ದಿನವಾಗಿದೆ. ಸಂಗಾತಿ ಜೊತೆಗಿನ ಮನಸ್ತಾಪ ದೂರವಾಗಿ ಪ್ರೀತಿಯನ್ನು ಆನಂದದಿಂದ ಅನುಭವಿಸುತ್ತೀರಿ.

ನಿಮ್ಮ ಉದ್ಯೋಗದಲ್ಲಿನ ನಿಪುಣತೆ ಬಹಳಷ್ಟು ಜನರಿಗೆ ವಿಸ್ಮಯ ಮತ್ತು ಆಶ್ಚರ್ಯಕ್ಕೆ ಕಾರಣವಾಗಬಹುದು. ಇಂದು ಅದ್ಭುತವಾದ ಯೋಜನೆಯನ್ನು ಸಾಧಿಸಲಿದ್ದೀರಿ.

ಪ್ರೇಮಿಗಳ ಪಾಲಿಗೆ ಆನಂದ ದಿನವಾಗಿರುತ್ತದೆ. ಮಕ್ಕಳೊಂದಿಗೆ ಒಡನಾಟ ಬೆಳೆಸಿಕೊಳ್ಳಿ. ಆಕಸ್ಮಿಕ ಬರುವ ಹಣದ ಹರಿವು ಅಥವಾ ಹೂಡಿಕೆಯ ಮೇಲೆ ವಿಚಾರ ಮಾಡುವುದು ಹಾಗೂ ಅದರ ಪೂರ್ವಾಪರ ತಿಳಿದು ಪಾಲ್ಗೊಳ್ಳುವುದು ಬಹುಮುಖ್ಯ.

ಅದೃಷ್ಟ ಸಂಖ್ಯೆ : 1

ವೃಷಭ ರಾಶಿ

ಚಿಂತೆಗಳಿಂದ ಆರೋಗ್ಯವು ಹಾಳಾಗುತ್ತದೆ. ನೀವು ಆಧ್ಯಾತ್ಮಿಕ ಅಥವಾ ಉತ್ತಮ ಕೆಲಸಗಳಿಂದ ಚಿಂತೆಗಳನ್ನು ಮರೆಯುವುದು ಬಲು ಅವಶ್ಯಕ. ಪ್ರೀತಿಯ ಉತ್ಸಾಹವೂ ನಿಮ್ಮ ಮತ್ತೆ ನಿಮ್ಮ ಸಂಗಾತಿಯ ನಡುವಿನ ಆನಂದದ ಭಾವಪರವಶತೆಯನ್ನು ಆಸ್ವಾದಿಸುತ್ತಿರಿ.

ಕಚೇರಿ ಕೆಲಸಗಳಲ್ಲಿ ಯಶಸ್ಸು ಸಾಧಿಸುತ್ತೀರಿ. ನಿಮ್ಮ ತಾರ್ಕಿಕ ಬುದ್ಧಿ ಮಟ್ಟವೂ ಉದ್ಯೋಗದ ಮಹತ್ವಾಕಾಂಕ್ಷೆ ಯೋಜನೆಗಳಿಗೆ ದಾರಿಯಾಗಿರುತ್ತದೆ. ಅಗತ್ಯವಿರುವ ಹಣಕಾಸಿನ ನೆರವು ಮಿತ್ರರಿಂದ ಸಿಗಲಿದೆ.

ಅದೃಷ್ಟ ಸಂಖ್ಯೆ : 9

ಮಿಥುನ ರಾಶಿ

ಉದ್ಯಮಿಗಳಿಗೆ ಅನಿರೀಕ್ಷಿತ ಲಾಭ ಮತ್ತು ಆದಾಯದ ಶುಭ ದಿನ. ಪ್ರಯಾಣ ಕ್ಷಣದಲ್ಲಿ ಜಾಗೃತೆ ವಹಿಸಿ. ಭರಪೂರ ಭೋಜನ ಸವಿಯುವ ಅವಕಾಶ. ಇಂದು ಉದ್ಯೋಗದಲ್ಲಿ ಮಹತ್ವದ ಬದಲಾವಣೆ ಕಾಣಬಹುದು.

ನಿಮ್ಮ ವ್ಯಕ್ತಿತ್ವದ ಹಾಗೂ ಕಾರ್ಯ ವೈಖರಿ ಉದ್ಯೋಗ ಸ್ಥಳದಲ್ಲಿ ಗಮನಿಸುತ್ತಾರೆ. ನಿಮ್ಮ ಪ್ರೀತಿಯು ಒಂದು ಸುಂದರ ತಿರುವನ್ನು ಪಡೆಯಲಿದೆ. ಪ್ರಣಯ ಸನ್ನಿವೇಶಗಳು ಚೈತನ್ಯದಿಂದ ಇರಿಸುತ್ತದೆ. ಗೃಹೋಪಯೋಗಿ ವಸ್ತುಗಳು ಅಥವಾ ಹೊಸ ಬಟ್ಟೆ ಖರೀದಿಸುವುದು ಸೂಕ್ತ ಸಮಯ.

ಅದೃಷ್ಟ ಸಂಖ್ಯೆ : 5

ಕರ್ಕಾಟಕ ರಾಶಿ

ಯಾವುದೇ ರೀತಿಯ ಸಂದರ್ಭಕ್ಕೆ ಒಗ್ಗಿಕೊಂಡು ಸಮಸ್ಯೆಯ ವಿರುದ್ಧ ಹೋರಾಡಿ. ಪಲಾಯನ ಮಾಡಿದರೆ ಲಾಭವಿಲ್ಲ. ನಿಮ್ಮ ಪ್ರಿಯವಾದ ಜನರೊಂದಿಗೆ ಮೃದುತ್ವ ಧೋರಣೆ ತಾಳಿ. ನಿಮ್ಮದೇ ನಡೆಯಬೇಕೆಂಬುದು ಏನೂ ಇಲ್ಲ.

ಇಂದು ಗೃಹ ಕಾರ್ಯದಲ್ಲಿ ಹೆಚ್ಚಿನ ಆಸಕ್ತಿ ಬರಲಿದೆ. ಸ್ನೇಹಿತರ ಜೊತೆ ಔತಣಕೂಟ ನಡೆಸುವ ಸಂದರ್ಭವಿದೆ. ನಿಯಮಿತ ಆರೋಗ್ಯಯುತ ಆಹಾರ ಸೇವನೆ ಮಾಡುವುದು ಒಳ್ಳೆಯದು. ಗಣ್ಯ ವ್ಯಕ್ತಿಗಳ ಸಮಾಗಮ ಹಾಗೂ ನೀವು ಅವರೊಂದಿಗೆ ಗುರುತಿಸಿಕೊಳ್ಳುವುದರಿಂದ ಲಾಭದ ನಿರೀಕ್ಷೆ.

RELATED ARTICLES  ಕುಮಟಾದಲ್ಲಿ ಸಂಪನ್ನವಾಯ್ತು ಪರಿವರ್ತನಾ ಯಾತ್ರೆ.

ಅದೃಷ್ಟ ಸಂಖ್ಯೆ : 2

ಸಿಂಹ ರಾಶಿ

ವ್ಯಕ್ತಿ ವ್ಯಕ್ತಿಗಳೊಡನೆ ವಾದಗಳಿಂದ ನಿಮಗೆ ತಾಳ್ಮೆ ಕೆಡಬಹುದು. ಬುದ್ಧಿವಂತಿಕೆಯಿಂದ ಕಾರ್ಯ ನಿರ್ವಹಣೆ ಸಮಸ್ಯೆಗಳನ್ನು ಶಮನ ಮಾಡುತ್ತದೆ. ಮಕ್ಕಳ ಬೇಡಿಕೆಗಳು ನಿಮಗೆ ಹೆಚ್ಚು ಚಿಂತೆ ನೀಡಲಿದೆ. ಬಂಧು ವರ್ಗದಿಂದ ಅಸಮಾಧಾನ.

ಸರ್ಕಾರಿ ಕೆಲಸಗಳಲ್ಲಿ ಯಶಸ್ವಿ. ಸ್ವಂತ ವ್ಯಾಪಾರಿಗಳಿಗೆ ಧನಲಾಭ ಯೋಗ. ಹಿರಿಯರಿಂದ ಸಹಕಾರ ಮತ್ತು ನಿಮ್ಮ ಯೋಜನೆಗಳಿಗೆ ಸಹಾಯ ದೊರೆಯಲಿದೆ. ನಿಮ್ಮ ಆಶ್ವಾಸನೆಯ ಮಾತುಗಳ ಮೇಲೆ ಸಾಧ್ಯವೇ ಎಂಬುದನ್ನು ಪರಾಮರ್ಶಿಸುವುದು ಒಳ್ಳೆಯದು. ನಿಮ್ಮ ದಾಖಲೆಗಳನ್ನು ಸುರಕ್ಷತೆಯಿಂದ ಕಾಪಾಡಿ. ಶುಭದಾಯಕ ಗ್ರಹಗಳ ಕೃಪೆಯಿಂದ ಶುಭ ಫಲಗಳನ್ನು ಕಾಣುವಿರಿ.

ಅದೃಷ್ಟ ಸಂಖ್ಯೆ : 5

ಕನ್ಯಾ ರಾಶಿ

ಮೋಸದ ಮಾತಿನಿಂದ ಮರುಳು ಮಾಡುವ ವ್ಯಕ್ತಿಗಳಿಂದ ಸಾಧ್ಯವಾದಷ್ಟು ದೂರವಿರಿ. ಧಾರ್ಮಿಕ ಕ್ಷೇತ್ರದ ಪ್ರವಾಸ ಯೋಗ. ನಿಮ್ಮ ವಿಶಿಷ್ಟ ವ್ಯಕ್ತಿತ್ವವು ಅಭಿಮಾನಿಗಳನ್ನು ಸೃಷ್ಟಿಸುತ್ತದೆ. ಮಕ್ಕಳ ಪ್ರಗತಿಯು ಚೈತನ್ಯ ಉಲ್ಲಾಸ ನೀಡುತ್ತದೆ.

ಹಳೆ ಅನುಪಯುಕ್ತ ವಸ್ತುಗಳು ಇಂದು ತೆಗೆದು ಸ್ವಚ್ಛಗೊಳಿಸುವಿರಿ. ನಿಮ್ಮ ಕೆಲಸದ ವಿಚಾರವು ಸಂಗಾತಿಯೊಡನೆ ಅಥವಾ ಹಿರಿಯರಿಂದ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಿ. ನಿಮ್ಮ ಕೆಲಸದ ಉತ್ಸಾಹವನ್ನು ಸಹೋದ್ಯೋಗಿಗಳ ತಾತ್ಸಾರದಿಂದ ಕಳೆದುಕೊಳ್ಳದಿರಿ. ಆಲಸ್ಯವನ್ನು ಸಾಧ್ಯವಾದಷ್ಟು ದೂರ ಮಾಡಿ.

ಅದೃಷ್ಟ ಸಂಖ್ಯೆ : 7

ತುಲಾ ರಾಶಿ

ನಿಮ್ಮ ಆಲೋಚನೆಯು ವ್ಯವಸ್ಥಿತ ಹಾಗೂ ಲಾಭಕರವಾಗಿರಲಿ. ವಿಶೇಷ ಗಣ್ಯ ವ್ಯಕ್ತಿಯ ಅಪರೂಪದ ಸಹಕಾರಿ ಪಡೆಯಲಿದ್ದೀರಿ. ನಿಮ್ಮ ಜಾಣತನದಿಂದ ಹಲವು ಲಾಭಕರ ವಹಿವಾಟು ನಡೆಸುತ್ತೀರಿ.

ಗಾಳಿ ಮಾತನ್ನು ನಂಬದಿರಿ. ವಿನಾಕಾರಣ ಸಂಗಾತಿಯೊಡನೆ ವಾದಕ್ಕಿಳಿಯುವುದು ಅಥವಾ ಕೋಪಿಸಿಕೊಳ್ಳುವುದು ಸಮಸ್ಯೆ ತಂದೊಡ್ಡಬಹುದು. ನಿಮ್ಮಲ್ಲಿ ಉದ್ಭವವಾಗುವ ವಿಚಿತ್ರ ಬಯಕೆಗಳನ್ನು ಆದಷ್ಟು ಅಲ್ಲಿಯೇ ಶಮನ ಮಾಡಿ.

ಅದೃಷ್ಟ ಸಂಖ್ಯೆ : 8

ವೃಶ್ಚಿಕ ರಾಶಿ

ಎಲ್ಲರನ್ನೂ ನಂಬುವಂತಹ ಸಾಹಸಕ್ಕೆ ಕೈ ಹಾಕಬೇಡಿ. ನಿಮ್ಮ ಅನುಭವವನ್ನು ಉಪಯೋಗಿಸಿಕೊಳ್ಳುವ ಅವಕಾಶವಿದೆ. ಪತ್ನಿಯ ಮನೆಯಿಂದ ಹರ್ಷದ ವಾತಾವರಣ. ಬಹು ಮುಖ್ಯವಾದ ಕೆಲಸಕ್ಕೆ ದೂರದ ಪ್ರಯಾಣ. ಸಾಮಾಜಿಕವಾಗಿ ಪ್ರಬಲಗೊಳ್ಳುವಿರಿ.

ನಿಮ್ಮ ಮನಸ್ಸಿನ ಕಾರ್ಯ ಆಗಲು ಇನ್ನು ಸಮಯ ಕಾಯಬೇಕಿದೆ. ಕುಟುಂಬದಲ್ಲಿನ ಒಗ್ಗಟ್ಟು ಸಮಾಜದ ದುಷ್ಟತೆಯನ್ನು ಎದುರಿಸಲು ಸಹಾಯವಾಗುತ್ತದೆ. ನಿಮ್ಮ ಹತ್ತಿರದ ಸಂಬಂಧಿಕರಿಂದ ಮುಜುಗರ ಉಂಟಾಗಬಹುದು. ಕೆಲಸದಲ್ಲಿನ ಸಂಶಯ ಮತ್ತು ಸಂದಿಗ್ಧತೆಯನ್ನು ಸವಾಲಾಗಿ ಸ್ವೀಕರಿಸಿ ಗೆಲ್ಲುವಿರಿ. ಶ್ರಮ ಯೋಜನೆಗಳು ನಿಖರತೆ ಇದ್ದರೂ ಕೆಲವು ವಿಘ್ನಗಳಿಂದ ಕೂಡಿದೆ.

RELATED ARTICLES  ಜೇವನದಲ್ಲಿ ಕೆಲವರಿಗಿಂದು ಶುಭವಾದರೆ ಕೆಲವರಿಗಿದೆ ಸಂಕಷ್ಟ! ನಿಮ್ಮ ರಾಶಿಗನುಗುಣವಾಗಿ ಹೇಗಿದೆ ಗೊತ್ತಾ ನಿಮ್ಮ ಈ ದಿನದ ಭವಿಷ್ಯ?

ಅದೃಷ್ಟ ಸಂಖ್ಯೆ : 3

ಧನಸ್ಸು ರಾಶಿ

‘ಧೈರ್ಯಂ ಸರ್ವತ್ರ ಸಾಧನಂ’ ನಿಮ್ಮ ಪ್ರಯತ್ನ ಎಲ್ಲವೂ ನಿಮ್ಮ ಧೈರ್ಯದ ಮೇಲೆ ಅವಲಂಬಿತವಾಗಿದೆ. ನಿಮ್ಮನ್ನು ಮೂರ್ಖರನ್ನಾಗಿಸುವ ಜನರು ನಿಮ್ಮ ಹತ್ತಿರದಲ್ಲೇ ಇದ್ದಾರೆ.

ಪತ್ರಗಳಿಗೆ ಸಹಿ ಮಾಡುವ ಮುನ್ನ ಯೋಚಿಸಿ. ಕೆಲವು ವಿಷಯಗಳ ಬಗ್ಗೆ ಕುಟುಂಬದೊಡನೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಿ. ವೃತ್ತಿಯಲ್ಲಿ ಬದಲಾವಣೆ ಸಾಧ್ಯತೆ.

ಅದೃಷ್ಟ ಸಂಖ್ಯೆ : 6

ಮಕರ ರಾಶಿ

ಅಮೂಲ್ಯ ವಸ್ತುಗಳ ಸಂರಕ್ಷಣೆಗೆ ಆದ್ಯತೆ ನೀಡಿ. ಕುಟುಂಬದ ಆರೋಗ್ಯದ ಕಡೆ ಹೆಚ್ಚು ಖರ್ಚು ಸಾಧ್ಯತೆ. ಹಿಂದಿನ ವೈಭವ ನೆನೆದು ಕೊರಗದಿರಿ ಮುಂದಿನ ಯೋಜನೆ ಬಗ್ಗೆ ಚಿಂತಿಸಿ. ಹಣಕಾಸಿನ ವಿಷಯದಲ್ಲಿ ಸಕಾರಾತ್ಮಕ ಫಲ. ಉಳಿತಾಯ ಯೋಜನೆ ಇದ್ದಲ್ಲಿ ಸಾಧಕ ಬಾದಕ ಚರ್ಚಿಸಿ.

ಅಪರಿಚಿತರೊಂದಿಗೆ ವ್ಯವಹಾರ ಸಲ್ಲದು. ನಂಬಿಕಸ್ಥ ಬಂಧುಗಳು ಅಥವಾ ಮಿತ್ರರು ನಿಮ್ಮ ವಿರುದ್ಧ ತಿರುಗಿ ಬೀಳುವವರು ಜಾಗೃತಿ ವಹಿಸಿ. ಉತ್ಸಾಹ ಬಹಳಷ್ಟಿದ್ದರೂ ಕ್ರಿಯಾಶೀಲತೆ ಕಡಿಮೆಯಾಗಿದೆ. ಯಾವುದೇ ಕಾರ್ಯಗಳಿಗೂ ಪೂರ್ವಭಾವಿ ತಯಾರಿ ಉಪಯುಕ್ತ.

ಅದೃಷ್ಟ ಸಂಖ್ಯೆ : 8

ಕುಂಭ ರಾಶಿ

ಆತ್ಮವಿಶ್ವಾಸ ಇದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಆದರೆ ಅತಿ ವಿಶ್ವಾಸವು ಅಪಾಯಕಾರಿಯಾಗಿರುತ್ತದೆ. ಸಣ್ಣ ಪ್ರಮಾಣದ ಕೆಲಸವು ಸಹ ಬಹಳ ಸಮಯ ಹಿಡಿಯುತ್ತಿದೆ ಕೆಲಸದ ಮೇಲೆ ಶ್ರದ್ಧೆ ಇರಲಿ.

ನಿಮ್ಮ ಜ್ಞಾನಾರ್ಜನೆ ಗೌರವಕ್ಕೆ ಪಾತ್ರವಾಗಲಿದೆ. ಅದು ಕೆಲವರಿಗೆ ಅಸೂಯೆ ಕೂಡ ತರಿಸಬಹುದು ನೀವು ನಡೆಯುವ ದಾರಿ ಸರಿಯಾಗಿ ಇದೆ. ವಿನಾಕಾರಣ ಗೊಂದಲ ಬೇಡ.

ಅದೃಷ್ಟ ಸಂಖ್ಯೆ : 6

ಮೀನ ರಾಶಿ

ಯೋಜಿತ ಕೆಲಸಗಳಿಂದ ಪೂರ್ಣ ಫಲ ಹಾಗೂ ಹೆಚ್ಚಿನ ಲಾಭಾಂಶ. ನಿಮ್ಮ ನಡೆ-ನುಡಿ ಮಾತಿನ ಜಾಣ್ಮೆಯಿಂದ ಪ್ರಶಂಸೆಗೆ ಪಾತ್ರರಾಗುವಿರಿ. ಸಾಲ ಪಡೆಯಲು ಅಥವಾ ನೀಡಲು ಮುಂದಾಗಬೇಡಿ. ನಿಮ್ಮ ಪರಾಕ್ರಮವು ಮನೆಯಲ್ಲಿ ತೋರ್ಪಡಿಸಬೇಡಿ. ಕೆಲವರಿಗೆ ಕಂಕಣ ಭಾಗ್ಯ ಒದಗಲಿದೆ.

ಭೂಮಿಗೆ ಸಂಬಂಧಿಸಿದ ವಿಷಯದಲ್ಲಿ ಲಾಭ. ಕಟ್ಟಡ ಕೆಲಸಗಾರರು, ತಾಂತ್ರಿಕರು ಕೆಲಸದಲ್ಲಿ ಎಚ್ಚರ ವಹಿಸಿ. ನೆರೆಹೊರೆಯವರ ಜೊತೆ ಸ್ನೇಹದಿಂದ ಇರುವುದು ಒಳಿತು. ಸಹೋದರರ ಮನೆಯಲ್ಲಿ ಸಂಭ್ರಮದ ವಾತಾವರಣಕ್ಕೆ ನೀವು ಸಹ ಪಾಲ್ಗೊಳ್ಳುವಿರಿ. ವಿಶಿಷ್ಟವಾದ ಅನುಭವವು ಸಂಗಾತಿಯಿಂದ ದೊರೆಯಲಿದೆ.

ಅದೃಷ್ಟ ಸಂಖ್ಯೆ : 4