ಮೇಷ ರಾಶಿ
ಉದ್ಯೋಗ ಸ್ಥಳದಲ್ಲಿನ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಯೋಚಿಸಿ ಪರಿಹಾರ ಕಂಡುಕೊಳ್ಳುವುದು ಒಳ್ಳೆಯದು. ನಿಮ್ಮ ಕೆಲಸದಲ್ಲಿ ಪ್ರತಿಭಾನ್ವಿತರು ಹಾಗೂ ನಿಪುಣರು ಎಂದು ಖ್ಯಾತಿ ಗಳಿಸುತ್ತೀರಿ.
ಪ್ರೀತಿ ಪಾತ್ರರಲ್ಲಿ ನಿಮ್ಮ ಕೆಲಸದ ಒತ್ತಡದಿಂದ ಅವರ ಯೋಗಕ್ಷೇಮ ಕಡೆಗೆ ಗಮನ ನೀಡುತ್ತಿಲ್ಲ ಸ್ವಲ್ಪ ಕಾಳಜಿ ವಹಿಸುವುದು ಉತ್ತಮ. ಆಕಸ್ಮಿಕವಾದ ಪ್ರಯಾಣ ಒತ್ತಡದಿಂದ ಕೂಡಿರುತ್ತದೆ.
ಇಂದು ಆರ್ಥಿಕ ಲಾಭ ನಿರೀಕ್ಷಿಸಬಹುದು. ಕೆಲವು ನಿಂದನಾತ್ಮಕ ವಿಚಾರಗಳಿಂದ ದೂರವಿರುವುದು ಒಳ್ಳೆಯದು.
ಅದೃಷ್ಟ ಸಂಖ್ಯೆ : 2
ವೃಷಭ ರಾಶಿ
ಯಾವುದೇ ವಿಷಯವನ್ನು ಸೂಕ್ಷ್ಮವಾಗಿ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಉದ್ಯೋಗದ ಸ್ಥಳದಲ್ಲಿನ ಸಹೋದ್ಯೋಗಿಗಳು ದ್ವಿಸ್ವಭಾವ ಗುಣಗಳನ್ನು ತೋರುತ್ತಾರೆ ಎಚ್ಚರ.
ಮಕ್ಕಳಿಂದ ಯಶಸ್ಸು, ಕೀರ್ತಿ ಮತ್ತು ಮನಸ್ಸಿನ ನಿರಾಳತೆ ಪಡೆಯುತ್ತೀರಿ. ಸಮಾಧಾನದ ಮಾತುಗಳಿಂದ ಜಗತ್ತನ್ನೇ ಗೆಲ್ಲಬಹುದು. ಮನಸ್ಸಿಗೆ ಬೇಡವಾದ ಕೆಲಸಗಳನ್ನು ನಯವಾಗಿಯೇ ತಿರಸ್ಕರಿಸಿ. ಭಾವನಾ ಲೋಕದಲ್ಲಿನ ವ್ಯವಹಾರಗಳು ತೊಂದರೆ ತರಬಹುದು.
ಅದೃಷ್ಟ ಸಂಖ್ಯೆ : 6
ಮಿಥುನ ರಾಶಿ
ಕೆಲವು ವಿಷಯಗಳಲ್ಲಿ ನಿರ್ಬಂಧ ಹೇರಿಕೊಳ್ಳುವುದು ಉತ್ತಮ, ಇಲ್ಲದಿದ್ದಲ್ಲಿ ದುರುಪಯೋಗ ಮಾಡಿಕೊಳ್ಳುವ ಜನರಿದ್ದಾರೆ. ನಿಮಗೆ ತಿಳಿದಿರುವ ವಿಷಯವನ್ನು ತಿಳಿಯದಂತೆ ಇದ್ದುಬಿಡಿ.
ಅತಿ ಆಸೆಯಿಂದ ದುಸ್ಸಾಹಸಕ್ಕೆ ಕೈ ಹಾಕದಿರಿ. ಪ್ರಾಮಾಣಿಕತೆ ಮತ್ತು ಶ್ರದ್ಧೆಯಿಂದ ಹಣಕಾಸಿನ ಪರಿಸ್ಥಿತಿ ಅಭಿವೃದ್ಧಿಯಾಗುತ್ತದೆ. ನಿಮ್ಮ ವಿಚಾರವನ್ನು ವಿರೋಧಿಸುವವರು ಇರುತ್ತಾರೆ. ಆದರೆ ನಿಮ್ಮ ಯೋಜನೆಯಿಂದ ಹಿಂದಕ್ಕೆ ಸರಿಯಬೇಡಿ.
ಅದೃಷ್ಟ ಸಂಖ್ಯೆ : 4
ಕರ್ಕಾಟಕ ರಾಶಿ
ನಿಮ್ಮ ಕಾರ್ಯದ ವ್ಯಾಪ್ತಿಯನ್ನು ಅರಿತು ಯೋಜನೆಗಳಿಗೆ ಪ್ರವೃತ್ತರಾಗಿ. ಬೇಡದ ವಿಚಾರಗಳಿಂದ ಅವಮಾನ. ಹಣಕಾಸಿನ ವ್ಯವಹಾರದಲ್ಲಿ ಮೋಸದ ವಾತಾವರಣ ಜಾಗ್ರತೆ ಇರಲಿ.
ನಿಮ್ಮ ಜೀವನದ ಕನಸು ಕೆಲವು ಒಪ್ಪಂದಗಳೊಡನೆ ನನಸಾಗುತ್ತದೆ. ಲೇವಾದೇವಿ ವ್ಯವಹಾರ ಇಂದು ಬೇಡ. ಅತ್ಯಂತ ಬುದ್ಧಿ ಶಕ್ತಿ ಇರುವ ನೀವು ನಿಮ್ಮ ಹಠಮಾರಿತನ ಸ್ವಭಾವದಿಂದ ಅವಕಾಶ ವಂಚಿತರಾಗುವಿರಿ. ದೈವಕೃಪೆಯು ನಿಮ್ಮನ್ನು ಸದಾ ಕಾಪಾಡುತ್ತದೆ.
ಅದೃಷ್ಟ ಸಂಖ್ಯೆ : 2
ಸಿಂಹ ರಾಶಿ
ಅತಿ ಸಣ್ಣತನದ ಬುದ್ಧಿಯು ನಿಮ್ಮನ್ನು ಅಪಹಾಸ್ಯಕ್ಕೆ ದಾರಿ ಮಾಡುತ್ತದೆ. ಅನಾವಶ್ಯಕ ಕೆಲಸಗಳಲ್ಲಿ ನಷ್ಟ. ಹಿರಿಯರ ಸೂಕ್ತ ಸಲಹೆಯಿಂದ ಮಕ್ಕಳ ಬೆಳವಣಿಗೆಗೆ ಮಾರ್ಗದರ್ಶಕರಾಗುವಿರಿ.
ಸಾರ್ವಜನಿಕ ಕ್ಷೇತ್ರದಲ್ಲಿ ತಾಳ್ಮೆಯಿಂದ ವರ್ತಿಸಿ. ಧೈರ್ಯ ಕಳೆದುಕೊಳ್ಳಬೇಡಿ. ಕಾಲಗರ್ಭದಲ್ಲಿ ಹುದುಗಿರುವ ರಹಸ್ಯಗಳು ತಿಳಿಯಲಿದೆ. ನಿಮ್ಮಲ್ಲಿ ಇರುವ ವೈಶಿಷ್ಟತೆಯಿಂದ ವಿರೋಧಿಗಳ ನಡುವೆಯೂ ಗೆಲುವಿನ ದಡ ಮುಟ್ಟುವಿರಿ.
ಅದೃಷ್ಟ ಸಂಖ್ಯೆ : 9
ಕನ್ಯಾ ರಾಶಿ
ಹೊಸ ಪರಿಸರ ಹಾಗೂ ಹೊಸ ಜನರ ಪರಿಚಯವಾಗಲಿದೆ. ವ್ಯಾಜ್ಯಗಳಿದ್ದರೂ ಗೊಂದಲ ಬೇಡ ಸಮಯದಲ್ಲಿ ಗೆಲುವು ನಿಮ್ಮಂತೆ. ಮೊಮ್ಮಕ್ಕಳ ಆಗಮನ ಮಂದಹಾಸ ಮೂಡಿಸುತ್ತದೆ. ಕೆಲಸದ ಒತ್ತಡದಿಂದ ಅನಾವಶ್ಯಕ ವಾದಗಳನ್ನು ಮಾಡದಿರಿ.
ಗುರುವಿನ ಆಶೀರ್ವಾದದಿಂದ ಕಾರ್ಯದಲ್ಲಿ ಯಶಸ್ಸು. ನಿಮ್ಮ ಮುಂದಿನ ಯೋಜನೆಗಳಿಗೆ ಇಂದು ಪೂರ್ವಭಾವಿ ಮಾತುಕತೆಗೆ ಸಕಾಲವಾಗಿದೆ. ನೆರೆ-ಹೊರೆಯವರಲ್ಲಿ ಬಂಧುಗಳಲ್ಲಿ ಮಿತ್ರರಲ್ಲಿ ಮಾತು ಸೌಜನ್ಯವಾಗಿರಲಿ. ಸಂಗಾತಿಯ ತುಂಟತನದ ನೋಟವು ನಿಮ್ಮನ್ನು ಉತ್ಸಾಹದಿಂದ ಇರಿಸುತ್ತದೆ.
ಅದೃಷ್ಟ ಸಂಖ್ಯೆ : 7
ತುಲಾ ರಾಶಿ
ನಿಮ್ಮ ಚತುರತೆಯನ್ನು ಇಂದು ಗಮನಿಸಿ ಹಲವಾರು ಕಾರ್ಯ ಯೋಜನೆಗಳಿಗೆ ನಿಮ್ಮ ಬೆಂಬಲವನ್ನು ಉದ್ಯೋಗ ಸ್ಥಳಗಳಲ್ಲಿ ಕೇಳುವರು. ಮನೋಲ್ಲಾಸದ ಘಟನೆ ಹೆಚ್ಚಿನ ಉತ್ಸಾಹ, ಶಕ್ತಿ ಸಾಮರ್ಥ್ಯ ನೀಡುತ್ತದೆ. ದೂರದ ಪ್ರಯಾಣವನ್ನು ಮುಂದೂಡುವುದು ಒಳ್ಳೆಯದು.
ನಿಮ್ಮ ಮನೆ ಬಾಗಿಲಿಗೆ ಅದೃಷ್ಟ ಬರಲಿದೆ. ಬರುವ ಕೆಲಸವನ್ನು ನಿಷ್ಠೆಯಿಂದ ಪಡೆದುಕೊಳ್ಳಿ ಹೆಚ್ಚಿನ ಲಾಭ ನಿಶ್ಚಿತ. ಧನಾಗಮನದ ಜೊತೆಗೆ ಖರ್ಚು ಅದಕ್ಕಿಂತ ಹೆಚ್ಚಿದೆ. ಸದ್ಯದ ಸ್ಥಿತಿಯು ಏಕಾಂತತೆಯನ್ನು ಬಯಸುತ್ತಿದೆ. ಯೋಗ್ಯವಾದದ್ದನ್ನು ಕ್ರಿಯಾಶೀಲತೆಯಿಂದ ಮಾಡಿ ಮುಗಿಸುವಿರಿ.
ಅದೃಷ್ಟ ಸಂಖ್ಯೆ : 8
ವೃಶ್ಚಿಕ ರಾಶಿ
ಹಣ ಗಳಿಕೆಯ ಆದಾಯದ ಮೂಲವೂ ಇಂದು ಶೀಘ್ರವಾಗಿ ಲಭಿಸಲಿದೆ. ಬುದ್ಧಿವಂತ ಹೂಡಿಕೆಗಳು ನಿಮ್ಮನ್ನು ಲಾಭದತ್ತ ಕೊಂಡೊಯ್ಯಲಿದೆ. ಕುಟುಂಬದವರೊಡನೆ ಲಘು ಪ್ರವಾಸ ಚಟುವಟಿಕೆಗಳಲ್ಲಿ ಆಸಕ್ತಿ. ಮಕ್ಕಳಿಂದ ಜೀವನದಲ್ಲಿ ಸುಧಾರಣೆಗಾಗಿ ಹಲವು ಬದಲಾವಣೆ.
ಇಂದು ದುಷ್ಟ ಚಟಗಳಿಂದ ದೂರವಿರುವುದಕ್ಕೆ ಪ್ರೇರಣೆ ತೆಗೆದುಕೊಳ್ಳಲಿದ್ದಿರಿ. ದೇಗುಲಗಳ ಪ್ರವಾಸವು ನಿಮ್ಮನ್ನು ಶಾಂತತೆಯಿಂದ ಇರಿಸುತ್ತದೆ. ಕಷ್ಟದಲ್ಲಿದ್ದ ಜನರಿಗೆ ಉಪಕಾರ ಮಾಡಲು ಇಂದು ಬಯಸುವಿರಿ.
ಅದೃಷ್ಟ ಸಂಖ್ಯೆ : 5
ಧನಸ್ಸು ರಾಶಿ
ಸಮಾಜ ಸಂಘಟನೆ ಕಲೆಯು ನಿಮ್ಮಲ್ಲಿ ಕರಗತವಾಗಿದೆ. ನಿಮ್ಮ ಸಾಮರ್ಥ್ಯದಿಂದ ಪ್ರಶಂಸೆಗೆ ಪಾತ್ರರಾಗುವಿರಿ. ನಿಮ್ಮ ರಾಜಕೀಯ ಭವಿಷ್ಯ ಉಜ್ವಲವಾಗಿದೆ. ನಿಮ್ಮ ಆತುರತೆಯಿಂದ ಹಲವು ಸಂದರ್ಭಗಳಲ್ಲಿ ಅವಕಾಶ ಮತ್ತು ಹೆಸರು ಕಳೆದುಕೊಳ್ಳಲಿದ್ದೀರಿ.
ನಿಮ್ಮ ಕೆಲಸದಲ್ಲಿನ ಪ್ರೀತಿಯು ನಿಮಗೆ ಹೆಮ್ಮೆ ಎನಿಸುತ್ತದೆ. ವಿಮೆ, ತೆರಿಗೆ ಸಂಬಂಧಪಟ್ಟ ವಿಷಯದಲ್ಲಿ ಕಾರ್ಯ ಪೂರ್ಣವಾಗುತ್ತದೆ. ಉದ್ಯೋಗದಲ್ಲಿ ಸ್ಥಾನ ಬದಲಾವಣೆ ಆಗುವ ನಿರೀಕ್ಷೆಯಿದೆ. ಮಿತ್ರರ ಸಂತೋಷ ಕೂಟಗಳಿಂದ ದೂರವಿರಿ.
ಅದೃಷ್ಟ ಸಂಖ್ಯೆ : 1
ಮಕರ ರಾಶಿ
ನಿಮ್ಮ ಆತುರತೆಯ ಸಾಹಸದ ಪ್ರವೃತ್ತಿಯಿಂದ ಕಷ್ಟಗಳಲ್ಲಿ ಬೀಳಬೇಡಿ. ನಕಾರಾತ್ಮಕ ಯೋಜನೆಗಳಿಗೆ ಅವಕಾಶ ನೀಡದಿರಿ. ಉತ್ತಮ ಜನರ ಸಹವಾಸವೂ ಸಾಧನೆಗೆ ಪ್ರೇರಣೆ ನೀಡಲಿದೆ.
ಉದ್ಯೋಗದಲ್ಲಿನ ಪ್ರಶಂಸೆಯೂ ನಿಮ್ಮನ್ನು ಮತ್ತಷ್ಟು ಸದೃಢ ವ್ಯಕ್ತಿಯನ್ನಾಗಿ ಮಾಡುತ್ತದೆ. ಕೋಪ-ಆವೇಶದ ಮೇಲೆ ಹತೋಟಿ ಇರುವುದು ಒಳ್ಳೆಯದು. ಆರೋಗ್ಯವೇ ಜೀವನದ ಭಾಗ್ಯ ಎಂಬುದನ್ನು ಮರೆಯದಿರಿ.
ಅದೃಷ್ಟ ಸಂಖ್ಯೆ : 3
ಕುಂಭ ರಾಶಿ
ಆಧ್ಯಾತ್ಮ ದೃಷ್ಟಿಕೋನವು ನಿಮ್ಮನ್ನು ಸಮಚಿತ್ತದಿಂದ ಇರಿಸುತ್ತದೆ. ಕೌಟುಂಬಿಕ ಕಲಹವು ನಿಮ್ಮಲ್ಲಿ ಅಸಮಾಧಾನಕ್ಕೆ ಕಾರಣವಾಗುತ್ತದೆ. ಸಹೋದರ ಮಾವನವರಿಂದ ಅವಮಾನ.
ಸಂಗಾತಿಯೊಡನೆ ವಾದ-ವಿವಾದಗಳು ತೀವ್ರ ಸ್ವರೂಪ ಚರ್ಚೆ. ಪ್ರತಿಷ್ಠೆ, ಸನ್ಮಾನಕ್ಕಾಗಿ ಹೋರಾಟದ ದಿನ. ಸಭೆಗಳಲ್ಲಿ ನಿಮ್ಮ ಮಾತಿನ ಮೇಲೆ ಹಿಡಿತವಿರಲಿ.
ಅದೃಷ್ಟ ಸಂಖ್ಯೆ : 8
ಮೀನ ರಾಶಿ
ಇಂದು ನಿಮಗೆ ತುಂಬಾ ಕುತೂಹಲಕಾರಿ ಹಾಗೂ ಸಂಶೋಧನೆಕಾರಿಯಾಗಿ ಕಾಲ ಕಳೆಯುವಿರಿ. ಬಂಧು-ಮಿತ್ರರ ಆಗಮನ ಸಂತೋಷಕ್ಕೆ ಕಾರಣವಾಗುತ್ತದೆ. ಕುಟುಂಬದಲ್ಲಿನ ಸಮಸ್ಯೆಗಳು ಹಾಗೂ ವಾದಗಳನ್ನು ನಿವಾರಣೆ ಮಾಡಲು ಹೋರಾಡುವಿರಿ.
ವಿದ್ಯಾರ್ಥಿಗಳಿಗೆ ನಿರುತ್ಸಾಹ. ಉದ್ಯೋಗಾಂಕ್ಷಿಗಳಿಗೆ ಲಾಭದಾಯಕ. ಮಕ್ಕಳಿಗಾಗಿ ಅಧಿಕ ಹಣ ಖರ್ಚು ಮಾಡಲಿದ್ದಿರಿ.
ಅದೃಷ್ಟ ಸಂಖ್ಯೆ : 4