ಮೇಷ ರಾಶಿ
ನಿಮ್ಮ ವಿಚಾರಧಾರೆಗಳನ್ನು ಮತ್ತೊಬ್ಬರು ನಕಲು ಮಾಡುವ ಸಾಧ್ಯತೆ ಇದೆ. ನಿಮ್ಮ ಯಶಸ್ಸಿಗೆ ಬೇಕಾದ ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳಿ. ಸಣ್ಣ ವಿಷಯಗಳಿಗೂ ಮನೆಯಲ್ಲಿ ಭಿನ್ನಾಭಿಪ್ರಾಯ ತಲೆದೋರಬಹುದು. ನಿಮ್ಮಲ್ಲಿನ ವಿಶ್ವಾಸಸ್ತ ನೌಕರರಿಗೆ ಬೆಂಬಲಿಸುವ ಕಾರ್ಯ ನಡೆಯಲಿದೆ.
ಉದ್ಯೋಗದ ಆದಾಯ ಸೋರಿಕೆ ತಡೆಗಟ್ಟಲು ಕೆಲವು ಬದಲಾವಣೆ ಒಳಿತು. ಹಿರಿಯರ ಮಾತುಗಳನ್ನು ಆಲಿಸಿ ಕಷ್ಟ ದೂರವಾಗುವುದು. ಲೋಕದ ವ್ಯವಹಾರದಲ್ಲಿ ಜವಾಬ್ದಾರಿಯಿಂದ ವರ್ತಿಸಿ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಆಸಕ್ತಿ. ಅವಿಶ್ವಾಸ ಕಾರ್ಯಗಳಿಂದ ದೂರ ಇರುವುದು ಒಳಿತು. ಭವಿಷ್ಯದ ದೃಷ್ಟಿ ಇಟ್ಟುಕೊಂಡು ಹೂಡಿಕೆಯನ್ನು ಮಾಡಿ.
ಅದೃಷ್ಟ ಸಂಖ್ಯೆ : 9
ವೃಷಭ ರಾಶಿ
ಅತ್ಯಮೂಲ್ಯ ವಸ್ತುಗಳ ಮೇಲೆ ನಿಗಾ ವಹಿಸಿ. ತಾಯಿಯ ಆರೋಗ್ಯದ ಕಡೆ ಗಮನ ನೀಡಿ. ಐಷಾರಾಮಿ ಜೀವನಕ್ಕಾಗಿ ಕಷ್ಟದಲ್ಲಿ ಸಿಲುಕಬೇಡಿ. ದುಡ್ಡಿನ ವಿಷಯದಲ್ಲಿ ಸಕಾರಾತ್ಮಕ ಫಲ. ಉಳಿತಾಯವಿದ್ದಲ್ಲಿ ಮಾತ್ರ ಭವಿಷ್ಯದಲ್ಲಿ ಲಾಭ. ವ್ಯವಹಾರದಲ್ಲಿ ಮೋಸ-ಕಪಟಗಳನ್ನು ಪರಿಶೀಲಿಸಿ ಕೈಹಾಕಿ.
ಅಪರಿಚಿತರೊಡನೆ ವ್ಯವಹಾರ ಅಥವಾ ಮಾತು ಬೇಡ. ಮನೆಯಲ್ಲಿನ ಅನುಮಾನ ನಿಮ್ಮನ್ನು ನಾಶಗೊಳಿಸಬಹುದು. ನಿಮ್ಮಲ್ಲಿನ ಉತ್ಸಾಹಕ್ಕೆ ಕ್ರಿಯಾಶೀಲತೆಯನ್ನು ಸೇರಿಸಿ. ಅತಿ ವಿಶ್ವಾಸ ಅಪಾಯಕಾರಿಯಾಗಬಹುದು.
ಅದೃಷ್ಟ ಸಂಖ್ಯೆ : 7
ಮಿಥುನ ರಾಶಿ
ಸರಳವಾದ ಕೆಲಸ ಬಲು ಕಷ್ಟದಾಯಕವಾಗಿ ಪರಿಣಮಿಸುತ್ತದೆ. ನಿಮ್ಮಲ್ಲಿನ ಜಡತ್ವ ಆಲಸ್ಯ ತೆಗೆದುಹಾಕಿ. ವಿದ್ಯೆಯಿಂದ ಎಲ್ಲವನ್ನು ಗೆಲ್ಲಬಹುದು ಉಪಯೋಗಿಸಿಕೊಳ್ಳಿ. ಆರೋಗ್ಯ ಭಾಗ್ಯದಲ್ಲಿ ಉದಾಸೀನತೆ ತರಿಸುತ್ತದೆ. ಅತಿ ಸೂಕ್ಷ್ಮಮತಿಯಾದ ನೀವು ಕೆಲವು ವಿಚಾರಗಳಿಂದ ಬೇಸರವಾಗಬಹುದು.
ಹಳೆಯ ವ್ಯಾಜ್ಯಗಳು ಮಾನಸಿಕ ಅಶಾಂತಿ ತಂದೊಡ್ಡುತ್ತದೆ. ನಿಮ್ಮ ಗುರಿ ಬೃಹತ್ ಮಟ್ಟದಲ್ಲಿದೆ ನೀವು ಖಂಡಿತ ಗುರಿಯೆಡೆಗೆ ತಲುಪುತ್ತೀರಿ ಚಿಂತೆ ಬೇಡ. ಮನೆಗೆ ನೂತನ ಸದಸ್ಯರಿಂದ ಮನಸ್ಸಿಗೆ ಸಂತೋಷ. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಹಿರಿಯರೊಂದಿಗೆ ಚರ್ಚಿಸಿ. ಸಂಗಾತಿಯೊಡನೆ ಮುನಿಸಿಕೊಳ್ಳುವುದು ಚೆನ್ನಾಗಿ ಕಾಣುವುದಿಲ್ಲ.
ಅದೃಷ್ಟ ಸಂಖ್ಯೆ : 6
ಕರ್ಕಾಟಕ ರಾಶಿ
ನಿಮ್ಮ ಮನಸ್ಸಿನ ಇಚ್ಛೆ ಇಂದು ಪೂರ್ಣಗೊಳ್ಳುವ ದಿನ. ಮೇಲಾಧಿಕಾರಿಗಳು ನಿಮ್ಮ ಮೇಲೆ ನಿರೀಕ್ಷೆ ಇಟ್ಟಿರುತ್ತಾರೆ. ಬಂಧುಗಳಿಂದ ಅಪಹಾಸ್ಯ ಅಥವಾ ಕಿರಿಕಿರಿ ಅನುಭವಿಸಬೇಕಾಗುತ್ತದೆ. ಮಾಡದಿರುವ ತಪ್ಪಿಗೆ ವ್ಯಥೆ ಬೇಡ. ರಾಜಕೀಯ ಕ್ಷೇತ್ರದಲ್ಲಿ ಲಾಭದಾಯಕವಾಗಲಿದೆ.
ನಿಮ್ಮ ಚಟುವಟಿಕೆ, ಲವಲವಿಕೆ ನಿಮ್ಮ ಕಾರ್ಯ ಪೂರ್ಣಗೊಳಿಸುತ್ತದೆ. ಮಕ್ಕಳೊಂದಿಗೆ ಅನವಶ್ಯಕ ಜಗಳ ಬೇಡ. ಹಿತಶತ್ರುಗಳಿಂದ ತೊಂದರೆಗೆ ಸಿಲುಕುವುದರಿಂದ ಜಾಗ್ರತೆ ವಹಿಸಿ. ಕೃಷಿಕರಿಗೆ ಭೂಮಿಯ ಸಂಬಂಧಿತ ಚಟುವಟಿಕೆ ನಡೆಯಲಿದೆ, ಜಮೀನು-ಆಸ್ತಿ ಖರೀದಿಗೆ ಮುಂದಾಗಬಹುದು.
ಅದೃಷ್ಟ ಸಂಖ್ಯೆ : 4
ಸಿಂಹ ರಾಶಿ
ಇಂದು ಉತ್ತಮ ಅಭಿಲಾಷೆಯೊಂದಿಗೆ ಜೀವನದ ಪಯಣ. ಮಹತ್ವಾಕಾಂಕ್ಷೆ ಯೋಜನೆಗಳಿಗೆ ಇಂದು ಮುಹೂರ್ತ ಇಡಲಿದ್ದೀರಿ. ಬಂಧುಗಳ ಆಗಮನದಿಂದ ಹಣಕಾಸಿನಲ್ಲಿ ವೆಚ್ಚ ಕಾಣಬಹುದು. ಆರೋಗ್ಯದಲ್ಲಿ ಚೇತರಿಕೆ. ವಸ್ತುಗಳ ಮೇಲಿನ ವ್ಯಾಮೋಹಕ್ಕಿಂತಲೂ ಮನುಷ್ಯರ ಪ್ರೀತಿ-ವಿಶ್ವಾಸವನ್ನು ಕಾಪಾಡಿಕೊಳ್ಳಿ.
ನಿಮ್ಮ ಉತ್ತಮ ಆಲೋಚನೆಯಿಂದ ಸಂಗಾತಿಯನ್ನು ಸಂತೃಪ್ತಿಗೊಳಿಸುತ್ತಿರಿ. ಕಿರಾಣಿ ಅಂಗಡಿಗಳಿಗೆ ಲಾಭದಾಯಕ ದಿನ. ಚಿನ್ನದ ಖರೀದಿಯಲ್ಲಿ ಉತ್ಸಾಹ. ನಿಮ್ಮ ದಾರಿ ಕಲ್ಲು-ಮುಳ್ಳಿನಿಂದ ಕೂಡಿದ್ದರೂ ಮುಂದಿನ ದಾರಿ ಯಶಸ್ಸಿಗೆ ಸಾಕ್ಷಿಯಾಗಲಿದೆ.
ಅದೃಷ್ಟ ಸಂಖ್ಯೆ : 1
ಕನ್ಯಾ ರಾಶಿ
ನಿಮ್ಮ ಅಸ್ತಿತ್ವಕ್ಕಾಗಿ ಹೋರಾಟ ನಡೆಸಲಿದ್ದೀರಿ. ಉದ್ಯೋಗ ಸ್ಥಳದಲ್ಲಿನ ಮೇಲಾಧಿಕಾರಿಗಳ ಕಿರಿಕಿರಿ ಇದ್ದರೂ ನಿಮ್ಮ ಆತ್ಮ ಸ್ಥೈರ್ಯ ಮತ್ತು ನಿಮ್ಮ ಕ್ರಿಯಾಶೀಲತೆ ಸಮಸ್ಯೆಗಳ ಶಮನಕ್ಕೆ ಪ್ರಯತ್ನಿಸುತ್ತದೆ. ಆರ್ಥಿಕ ಚಟುವಟಿಕೆಗಳಲ್ಲಿ ನಿರುತ್ಸಾಹ ಇದ್ದರೂ ಸಂಜೆ ವೇಳೆಗೆ ಸರಿ ದಾರಿಗೆ ಬರಲಿದೆ.
ಋಣಾತ್ಮಕ ಆಲೋಚನೆ ಬಿಟ್ಟುಬಿಡಿ. ಸಂಗೀತ, ಕಲೆ, ಉತ್ತಮ ಪುಸ್ತಕ ಒಡನಾಟದಿಂದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಕೆಲವೊಂದು ಹೇಳಲಾರದ ಸಂಗತಿಗಳನ್ನು ಮನಸ್ಸಿನಲ್ಲಿ ಕೊರಗುತ್ತಾ ಕೂರದೆ ಸಂಗಾತಿಯೊಡನೆ ಚರ್ಚಿಸಿ ಪರಿಹಾರವನ್ನು ಹುಡುಕಿಕೊಳ್ಳಿ.
ಅದೃಷ್ಟ ಸಂಖ್ಯೆ : 3
ತುಲಾ ರಾಶಿ
ಸಮಸ್ಯೆಗಳನ್ನು ಎದುರಿಸುವ ಛಲ ನಿಮ್ಮಲ್ಲಿ ಇದೆ. ನಿಮ್ಮ ಪ್ರಾಮಾಣಿಕತೆ ನಿಮ್ಮನ್ನು ಕಾಪಾಡುವುದು. ಧನ ಸಂಪಾದನೆಯ ವಿಸ್ತರಣೆ ಲಭ್ಯವಿದೆ. ಕೆಲಸದಲ್ಲಿ ಆಯಾಸ ನಿಮಗೆ ಮಾನಸಿಕ ಕ್ಲೇಶಗಳನ್ನು ಕೊಡುತ್ತದೆ. ಅಧಿಕಪ್ರಸಂಗಿಗಳಿಂದ ದೂರ ನಿಲ್ಲಿ.
ಸ್ನೇಹಿತರ ಸಹಾಯ ಹಸ್ತ ನಿಮಗೆ ದೊರೆಯಲಿದೆ. ಪರಿಚಯವಿಲ್ಲದವರಿಗೆ ದೇಣಿಗೆ ನೀಡಲು ಮುಂದಾಗಬೇಡಿ. ನಿಮ್ಮ ಪೂರ್ವ ಪುಣ್ಯದ ಶ್ರೀರಕ್ಷೆಯಿಂದ ಕನಸು ನನಸಾಗಲಿದೆ.
ಅದೃಷ್ಟ ಸಂಖ್ಯೆ : 8
ವೃಶ್ಚಿಕ ರಾಶಿ
ಏಕಕಾಲದಲ್ಲಿ ಹಲವು ಹುದ್ದೆಗಳನ್ನು ನಿರ್ವಹಿಸುವ ತಂತ್ರಗಾರಿಕೆ ನಿಮ್ಮಲ್ಲಿದೆ. ಉಲ್ಲಾಸದ ಘಟನೆಗಳು ಉತ್ಸಾಹ ತುಂಬುತ್ತದೆ. ಹಣಕಾಸಿನ ಮೂಲಗಳು ಸಕಾರಾತ್ಮಕ ಫಲಿತಾಂಶ ನೀಡಲಿದೆ. ದೂರದ ಪ್ರವಾಸವನ್ನು ಇವತ್ತಿನ ಮಟ್ಟಿಗೆ ಮುಂದೂಡಿ. ಅದೃಷ್ಟದ ಬಾಗಿಲು ತೆರೆದಿದೆ ತಿರಸ್ಕರಿಸುವುದು ಉಚಿತವಲ್ಲ.
ಖರ್ಚು – ವೆಚ್ಚದ ಪರಿಣಾಮ ಅನುಭವಿಸಬೇಕಾಗುತ್ತದೆ. ಮನೋ ಕಾಮನೆಗಳು ನಿಯಂತ್ರಣದಲ್ಲಿದ್ದರೆ ಸೂಕ್ತ. ಕ್ರಿಯಾಶೀಲತೆಯಿಂದ ಇಂದು ಹಲವು ಮೊದಲುಗಳನ್ನು ಸಾಧಿಸುತ್ತೀರಿ. ಆದಷ್ಟು ಸಾಲ ಮಾಡದಂತೆ ಎಚ್ಚರ ವಹಿಸಿ. ಪ್ರೇಮದಲ್ಲಿ ಸಂಶಯವಿದ್ದರೆ ಅದು ಜೀವನಕ್ಕೆ ಮಾರಕವಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ.
ಅದೃಷ್ಟ ಸಂಖ್ಯೆ : 2
ಧನಸ್ಸು ರಾಶಿ
ರಾತ್ರಿ ಕಂಡ ಬಾವಿಗೆ ಹಗಲು ಬೀಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಚ್ಚರದ ನಡೆ ಸೂಕ್ತ. ಕೆಲವು ವ್ಯವಹಾರದಲ್ಲಿ ಮೋಸದ ಜಾಲ ಇರಲಿದೆ. ಆದಷ್ಟು ದೂರವಿರಿ. ನಿಮ್ಮ ಪ್ರಯತ್ನ ಫಲ ಮತ್ತೊಬ್ಬರ ಪಾಲಾಗದಂತೆ ನೋಡಿಕೊಳ್ಳಿ.
ನಿಮ್ಮ ಬುದ್ಧಿ ಶಕ್ತಿಯನ್ನು ಉಪಯೋಗಿಸಿ ಸಾಮರ್ಥ್ಯ ತಾನಾಗಿಯೇ ಬರುತ್ತದೆ. ಮೋಜು-ಮಸ್ತಿಗಳಲ್ಲಿ ಕಾಲಹರಣ ಬೇಡ. ಕೌಟುಂಬಿಕ ಆಂತರಿಕ ಕಲಹಗಳಿಗೆ ಪರಿಹಾರ ಹುಡುಕಿ. ಹಣಕಾಸಿನ ನಿರೀಕ್ಷೆಯು ನಷ್ಟತೆ ಪರಿಹಾರಗೊಳಿಸುತ್ತದೆ. ಆರೋಗ್ಯದ ದೃಷ್ಟಿಯಿಂದ ಆಹಾರ ಸೇವನೆ ಒಳಿತು.
ಅದೃಷ್ಟ ಸಂಖ್ಯೆ : 9
ಮಕರ ರಾಶಿ
ಕೆಲವು ಆಸಕ್ತಿಕರ ವಿಷಯದಲ್ಲಿ ಪತ್ತೇದಾರಿಯಂತೆ ಕೆಲಸ ನಿರ್ವಹಣೆ ಮಾಡಲಿದ್ದೀರಿ. ತಡರಾತ್ರಿಯ ಮೋಜುಗಳು ಮನೆಯಲ್ಲಿ ಸಮಸ್ಯೆ ಉದ್ಭವಿಸುತ್ತದೆ. ಸಹೋದರರ ಆಸ್ತಿ ಜಗಳಗಳಿಗೆ ರಾಜಿ ಸಂಧಾನ ಇತ್ಯರ್ಥ ಸಾಧ್ಯತೆ.
ಕೆಲವು ಬಣ್ಣ ಬಣ್ಣದ ಜಾಹೀರಾತಿಗೆ ಮೋಸ ಹೋಗದಿರಿ. ಆಧ್ಯಾತ್ಮಿಕ ಚಿಂತನೆಯಿಂದ ತುಸು ಮನಃಶಾಂತಿ. ವ್ಯಾಯಾಮ, ಕಾಲ್ನಡಿಗೆ, ವಿಹಾರಗಳು ನಿಮ್ಮ ಮನಸ್ಸನ್ನು ಪ್ರಫುಲ್ಲಗೊಳಿಸುತ್ತದೆ.
ಅದೃಷ್ಟ ಸಂಖ್ಯೆ : 1
ಕುಂಭ ರಾಶಿ
ಎಲ್ಲವೂ ತಿಳಿದಿದೆ ಎಂಬುದು ಬೇಡ, ಎಲ್ಲವನ್ನೂ ತಿಳಿದುಕೊಳ್ಳಲು ಪ್ರಯತ್ನಿಸಿ. ಮಾತುಗಾರಿಕೆಯಲ್ಲಿ ಒಂದು ಪಕ್ಷದ ಪರವಾಗಿ ಇದ್ದೀನಿ ಎಂಬುವಂತೆ ವರ್ತಿಸುವುದು ಬೇಡ. ವಿಚಾರಗೋಷ್ಠಿಗಳಲ್ಲಿ ನಿಮ್ಮದೇ ನಡೆಯಬೇಕೆಂಬುದು ಏನು ಇಲ್ಲ.
ಆದಷ್ಟು ಕುಟುಂಬದವರ ಆಸೆಯನ್ನು ತೀರಿಸಲು ಪ್ರಯತ್ನಿಸಿ. ಬಿಟ್ಟು ಹೋದ ಪ್ರೇಮಿಗಳು ಮರಳಿ ಬರುವ ಸಾಧ್ಯತೆ. ಮಕ್ಕಳಿರಲಿ, ಸಂಗಾತಿಯಿರಲಿ ಓಡುವ ಕುದುರೆಯಂತೆ ಲಗಾಮು ಹಾಕಿ ನಿಯಂತ್ರಿಸಿ. ವಿವೇಚನೆಯಿಂದ ವರ್ತಿಸುವುದು ಸಭ್ಯತೆಯ ಲಕ್ಷಣ.
ಅದೃಷ್ಟ ಸಂಖ್ಯೆ : 5
ಮೀನ ರಾಶಿ
ಯಾವುದೋ ಉಸಾಬರಿಯಲ್ಲಿ ಸಿಲುಕಿ ವ್ಯಥೆ ಪಡುವುದು ಬೇಡ. ನಿಮ್ಮ ವರ್ತನೆ ಸಹವರ್ತಿಗಳು ಸೂಕ್ಷ್ಮ ರೀತಿಯಲ್ಲಿ ಗಮನಿಸುತ್ತಿರುತ್ತಾರೆ. ಅಧಿಕಾರದ ದುರುಪಯೋಗ ಮುಂದೊಂದು ದಿನ ಭಾರಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.
ತೈಲ ವ್ಯಾಪಾರಕ್ಕೆ ಲಾಭದ ವಾತಾವರಣ. ಉದ್ಯಮಿಗಳಿಗೆ ಬೇಡಿಕೆ ಕುಂಠಿತಗೊಳ್ಳುವ ಭಯ. ಕೆಲವು ಸ್ಪರ್ಧೆಗಳು ನಿಮ್ಮನ್ನು ಚಟುವಟಿಕೆಯಿಂದ ಇರಲು ಸಹಕಾರಿಯಾಗುತ್ತದೆ.
ಅದೃಷ್ಟ ಸಂಖ್ಯೆ : 4