ಗೋಕರ್ಣ: ಭಾರತತ್ವದ ಹಸಿವು ಇಂದು ದೇಶಲ್ಲಿ ಕಂಡುಬರುತ್ತಿದೆ. ಆದರೆ ಅದಕ್ಕೆ ಜ್ಞಾನದ ಕೊರತೆ ಇದೆ. ಜ್ಞಾನಪರಂಪರೆಯಿಂದ ಬಂದ ವ್ಯಕ್ತಿಗಳಿಂದ ಮಾತ್ರವೇ ದೇಶಕ್ಕೆ ಉತ್ತಮ ಮಾರ್ಗದರ್ಶನ ನೀಡಬಲ್ಲ. ಗೋಕರ್ಣವೆಂಬ ಜ್ಞಾನಸಾಗರದಲ್ಲಿ ಇಂಥ ವಿದ್ಯಾಕಾಶಿಯನ್ನು ರೂಪಿಸುವ ಮೂಲಕ ಗತವೈಭವ ಮರಳುವಂತೆ ಮಾಡುವುದು ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಉದ್ದೇಶ ಎಂದು ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.


ಅಶೋಕೆಯ ಶ್ರೀರಾಮಚಂದ್ರಾಪುರ ಮಠದ ಮೂಲಮಠದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಮಾರ್ಗದರ್ಶನ ಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ಧರ್ಮನಿಷ್ಠ, ದೇಶಭಕ್ತ ಯೋಧರನ್ನು ನಿರ್ಮಿಸುವುದೇ ಇದರ ಉದ್ದೇಶ. ಜ್ಞಾನದಾನವೇ ಎಲ್ಲ ಮಠಗಳ ಪ್ರಮುಖ ಕರ್ತವ್ಯ. ಅದನ್ನು ಮಾಡದಿದ್ದರೆ ಅದು ದೊಡ್ಡ ಲೋಪವಾಗುತ್ತದೆ ಎಂಬ ಕಾರಣದಿಂದಲೇ ಇದನ್ನು ಆರಂಭಿಸಲಾಗುತ್ತಿದೆ ಎಂದು ಹೇಳಿದರು.


ಇದಕ್ಕೆ ಪ್ರೇರಣೆ ಶ್ರೀಶಂಕರರು; ಇದು ಸಮರ್ಪಣೆಯಾಗುವುದು ಶಂಕರಾಚಾರ್ಯರಿಗೆ. ಮೂರು ಬಾರಿ ಶಂಕರರು ಆಗಮಿಸಿ ಸಂಚರಿಸಿದ ಕ್ಷೇತ್ರ ಇದು. ಇದೀಗ ವಿಶ್ವವಿದ್ಯಾಪೀಠದ ಮೂಲಕ ನಾಲ್ಕನೇ ಬಾರಿಗೆ ಈ ಪುಣ್ಯಭೂಮಿಗೆ ಶಂಕರರು ಆಗಮಿಸುತ್ತಿದ್ದಾರೆ ಎಂದು ಬಣ್ಣಿಸಿದ್ದರು.

RELATED ARTICLES  ಗ್ರಾಮೀಣ ಶಾಲೆಗೆ ಸ್ಮಾರ್ಟ ಕ್ಲಾಸ್ ಕೊಡುಗೆ : ಶಾಲೆಯ ಅಭಿವೃದ್ಧಿ ಸಂತಸ ತಂದಿದೆ - ರಾಜೇಂದ್ರ ಭಟ್ಟ.


ಪ್ರತಿ ಆಚಾರ್ಯರಿಗೂ ವಿಷ್ಣುಗುಪ್ತನಂಥಾಗಬೇಕು ಎಂಬ ಪ್ರೇರಣೆ ಬರಬೇಕು; ಪ್ರತಿ ವಿದ್ಯಾರ್ಥಿಗೆ ಚಂದ್ರಗುಪ್ತನಾಗಬೇಕು ಎಂಬ ಸ್ಫೂರ್ತಿ ತುಂಬುವ ಉದ್ದೇಶದಿಂದ ಅದೇ ನಾಮಧೇಯದಲ್ಲಿ ವಿಶ್ವವಿದ್ಯಾಪೀಠ ಆರಂಭವಾಗುತ್ತಿದೆ ಎಂದರು.


ಗೋಕರ್ಣ ಜ್ಞಾನದ ಸಾಗರವೂ ಆಗಿತ್ತು. ನಾಲ್ಕು ವೇದಗಳನ್ನು ಕಲಿಯುವ ಅವಕಾಶ ಇಲ್ಲಿತ್ತು. ಆದರೆ ಇದೀಗ ಗತವೈಭವ ಕ್ಷೀಣಿಸಿದೆ. ವೇದ, ಸಂಸ್ಕøತ, ಶಾಸ್ತ್ರ ಅಧ್ಯಯನಕ್ಕೆ ಅವಕಾಶವಿತ್ತು. ಇದೀಗ ಭಾರತ ಸಂಸ್ಕøತಿಯ ಎಲ್ಲ ಶಾಸ್ತ್ರೀಯ ವಿದ್ಯೆಗಳನ್ನು ಕಲಿಯುವ ಸರ್ವವಿದ್ಯಾಕೇಂದ್ರವನ್ನು ಗೋಕರ್ಣದಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಹೆಸರಿನಲ್ಲಿ ಸ್ಥಾಪಿಸಲಾಗುತ್ತಿದೆ ಎಂದು ವಿವರಿಸಿದರು.


ಭಾರತದ ಅಪರೂಪದ ವಿದ್ಯೆ ಹಾಗೂ ಕಲೆಗಳು ನಾಶವಾಗುತ್ತಿದೆ. ಉದಾಹರಣೆಗೆ ಸಾಮವೇದವನ್ನೇ ತೆಗೆದುಕೊಂಡರೆ ಸಾವಿರ ಶಾಖೆಗಳು ಇದೀಗ ಮೂರಕ್ಕೆ ಇಳಿದಿವೆ. ಇಂಥ ವಿನಾಶದ ಅಂಚಿನಲ್ಲಿರುವ ವಿದ್ಯೆಗಳನ್ನು ಗುರುಶಿಷ್ಯ ಪರಂಪರೆ ಮೂಲಕ ಉಳಿಸಿ ಬೆಳೆಸುವುದು ಉದ್ದೇಶಿತ ಪೀಠದ ಉದ್ದೇಶ ಎಂದರು.
ಇದು ಗುರುಮುಖವನ್ನು ಹುಡುಕಿಕೊಳ್ಳುವ ಕೇಂದ್ರವಾಗಲಿದೆ. ಎಲ್ಲ ಭಾರತೀಯ ವಿದ್ಯೆಯ ಪರಿಣತಿಯ ಜತೆಗೆ ಉಳಿದೆಲ್ಲ ವಿದ್ಯೆಗಳ ಪರಿಚಯ ಮಾಡಿಕೊಡುವ ಮೂಲಕ ಪರಿಪೂರ್ಣ ವ್ಯಕ್ತಿತ್ವ ರೂಪಿಸಲಾಗುವುದು ಎಂದು ಶ್ರೀಗಳು ಹೇಳಿದರು.

RELATED ARTICLES  ಸಮುದ್ರದಲ್ಲಿ ಬಿದ್ದು ನಾಪತ್ತೆಯಾದ ಯುವಕನ ಶವ ಪತ್ತೆ.


ಡಾ.ಗಜಾನನ ಶರ್ಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಹವ್ಯಕ ಮಹಾಮಂಡಲ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಪೆರಿಯಾಪ್ಪು, ನಿಯೋಜಿತ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ದೇವಶ್ರವ ಶರ್ಮಾ, ಡಾ.ವೈ.ವಿ.ಕೃಷ್ಣಮೂರ್ತಿ, ಸುಬ್ರಾಯ ಭಟ್ ಮುರೂರು, ಪಡೀಲು ಮಹಾಬಲ ಭಟ್ ಮತ್ತಿತರರು ಉಪಸ್ಥಿತರಿದ್ದರು.