ಹೊನ್ನಾವರ : ಸಾಗದಿಂದದಿಂದ ಭಟ್ಕಳ ಕಡೆ ಅಕ್ರಮವಾಗಿ ಕಂಟೇನರ್ ವಾಹನದಲ್ಲಿ ಸಾಗಿಸಲಾಗುತ್ತಿದ್ದ 19 ಗೋವುಗಳನ್ನು ತುಂಬಿಕೊಂಡ ಹೊರಟ ವಾಹನವನ್ನು ಪೋಲಿಸರು ಖಚಿತ ಮಾಹಿತಿ ಮೇರೆಗೆ ತಡೆದು ತಪಾಸಣೆ ನಡೆಸಿದ ಘಟನೆ ನಡೆದಿದೆ.
ಕಂಟೇನರ್ ಅನ್ನು ಗೇರುಸೊಪ್ಪ ಬಳಿ ಪೋಲೀಸರು ವಾಹನ ತಡೆದು ತಪಾಸಣೆಗೆ ಒಳಪಡಿಸಿದಾಗ ಅಕ್ರಮ ಗೋವುಗಳು ಇರುವುದು ಖಚಿತವಾಗಿದೆ ಅದೇ ಸಂದರ್ಭದಲ್ಲಿ ಆರೋಪಿಗಳನ್ನು ಬಂಧಿಸಿ ಗೋವುಗಳನ್ನು ಬಂಗಾರಮಕ್ಕಿ ಗೋ ಶಾಲೆಗೆ ಕಳುಹಿಸಲಾಗಿದೆ.
ಈ ಬಗ್ಗೆ ಹೊನ್ನಾವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.