ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಸಿ.ವಿ.ಎಸ್.ಕೆ ಪ್ರೌಢಶಾಲೆಯ ಶಾಲಾ ವಿದ್ಯಾರ್ಥಿ ಸಂಸತ್‍ನ್ನು ಕುಮಟಾ ಡಯಟ್‍ನ ನಿವೃತ್ತ ಉಪನ್ಯಾಸಕರಾದ ಬಿ.ಎಸ್.ಗೌಡ ಅವರು ಉದ್ಘಾಟಿಸಿದರು.
ನಂತರ ಮಾತನಾಡುದ ಅವರು, ವಿದ್ಯಾರ್ಥಿ ದಿಸೆಯಿಂದಲೇ ನೇತಾರತ್ವವನ್ನು ಮೈಗೂಡಿಸಿಕೊಂಡರೆ ಮುಂದೆ ನಿಮ್ಮ ಮುಖಗಳನ್ನು ನಿಜವಾದ ವಿಧಾನಸೌಧ ಪಾರ್ಲಿಮೆಂಟ್‍ಗಳಲ್ಲಿ ಕಾಣಬಹುದು. ನಿಜವಾದ ನೇತಾರ ಈ ದೇಶಕ್ಕೆ ಬೇಕು, ಆ ಕಾರಣಕ್ಕಾಗಿ ವಿದ್ಯಾರ್ಥಿಗಳಿಗೆ ಇದೊಂದು ಮಾದರಿ ಪಾಠ ಎಂದು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯಾಧ್ಯಾಪಕಿ ಸುಮಾ ಪ್ರಭು ಮಾತನಾಡಿ, ವಿದ್ಯಾರ್ಥಿಗಳು ತಮಗೆ ನೀಡಿದ ಹುದ್ದೆಗೆ ಅನುಗುಣವಾಗಿ ಜವಾಬ್ದಾರಿಯನ್ನರಿತು ಕಾರ್ಯನಿರ್ವಹಿಸಿದರೆ ತಾವೂ ಮುಂದಾಳುಗಳಾಗುತ್ತೀರಿ ಎಂದು ಕಿವಿಮಾತು ಹೇಳಿದರು.
ವೇದಿಕೆಯಲ್್ಲ್ಲಿ ಶಿಕ್ಷಕರಾದ ಶಿವಾನಂದ ಭಟ್ಟ, ರಾಜೇಶ ಎಚ್.ಜಿ., ಚಿದಾನಂದ ಭಂಡಾರಿ ಹಾಗೂ ಸಂಸತ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ದೈಹಿಕ ಶಿಕ್ಷಕರಾದ ಜಯರಾಜ ಶೇರುಗಾರ ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾರ್ಥಿ ಪ್ರತಿನಿಧಿಗಳಾದ ಕಾರ್ತಿಕ ನಾಯ್ಕ ಹಾಗೂ ವೈಭವಿ ಶಾನಭಾಗ ಮಾತನಾಡಿದರು. ಚಿದಾನಂದ ಭಂಡಾರಿ ಸ್ವಾಗತಿಸಿದರು. ಪ್ರಕಾಶ ಗಾವಡಿ ನಿರೂಪಿಸಿದರು. ಅನಿತಾ ಪಟಗಾರ ವಂದಿಸಿದರು. ಶಿಲ್ಪಾ ಸಂಗಡಿಗರು ಪ್ರಾರ್ಥಿಸಿದರು.