ಕುಮಟಾ : ತಾಲೂಕಿನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಕುಡಿಯುವ ನೀರಿನ ಟ್ಯಾಂಕ್ ಕಲುಷಿತ ವಾಗಿದ್ದ ಕಾರಣ ಜನತೆ ಮಣ್ಣು ಮಿಶ್ರಿತ ನೀರನ್ನು ಕುಡಿಯುವ ಸ್ಥಿತಿ ಎದುರಾಗಿತ್ತು.
ಈ ವಿಷಯವನ್ನು ಪ್ರಯಾಣಿಕರು ಸಾಮಾಜಿಕ ಜಾಲತಾಣದ ಮೂಲಕ ಹರಿಬಿಟ್ಟಿದ್ದರು.
ಅದನ್ನು ಗಮನಿಸಿದ ಕುಮಟಾದ ರಕ್ತನೀಡಿ ಒಂದು ಜೀವವನ್ನು ಉಳಿಸಿ ವಾಟ್ಸಪ್ ತಂಡದ ಸದಸ್ಯರು ಇಂದು ಬೆಳಿಗ್ಗೆ ಬಸ್ ನಿಲ್ದಾಣಕ್ಕೆ ತೆರಳಿ ನೀರಿನ ಟ್ಯಾಂಕ್ ತೆರೆದು ಕಲುಷಿತ ನೀರನ್ನು ಹೊರತೆಗೆದು ಟ್ಯಾಂಕ್ ಸ್ವಚ್ಚಮಾಡಿ ಗಮನ ಸೆಳೆದರು.
ಕುಮಟಾದ ಈ ವಾಟ್ಸಪ್ ತಂಡದ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ಪ್ರಮುಖರಾದ ಶ್ರೀಧರ ಕುಮಟಾಕರ್ ಹಾಗೂ ಇನ್ನಿತರ ಸದಸ್ಯರು ಹಾಜರಿದ್ದರು.