ಕುಮಟಾ : ತಾಲೂಕಿನ ಹೊಲನಗದ್ದೆ ಭಾಗದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿದ್ದು ಮತ್ತೆ ಕಳ್ಳತನದ ಪ್ರಕರಣ ಕಂಡ ಜನತೆ ಬೆಚ್ಚಿ ಬೀಳುವಂತೆ ಮಾಡಿದ್ದಾರೆ.
ತಾಲೂಕಿನ ಹೊಲನಗದ್ದೆ ಗ್ರಾ.ಪಂ ವ್ಯಾಪ್ತಿಯ ಕಡ್ಲೆ ಗಾಂಧಿವನ ಮೈದಾನದ ಹಿಂಭಾಗದಲ್ಲಿರುವ ಮೂರು ಮನೆಗಳಿಗೆ ನುಗ್ಗಿದ ಕಳ್ಳರು ನಗದು ಹಾಗೂ ಮೊಬೈಲ್‌ಗಳನ್ನು ಕದ್ದೊಯ್ದಿದ್ದಾರೆ.
ಹೊಲನಗದ್ದೆ ಗ್ರಾ.ಪಂ ಸದಸ್ಯ ರಾಮ ಮಡಿವಾಳ ಮನೆ ಸೇರಿದಂತೆ ಅಲ್ಲೆ ಪಕ್ಕದಲ್ಲಿರುವ ಅವರ ಸಹೋದರ ನಾರಾಯಣ ಮಡಿವಾಳ ಹಾಗೂ ಹನುಮಂತ ನಾಯ್ಕ ಅವರ ಮನೆಯಲ್ಲಿ ಸರಣಿ ಕಳ್ಳತನ ನಡೆದಿದೆ.
ರಾಮ ಮಡಿವಾಳ ಅವರ ಮನೆಯ ಕಿಟಕಿಯ ಜಾಲರಿಯನ್ನು ತೆರೆದ ಕಳ್ಳರು ಗೋಡ್ರೇಜ್ ಕಪಟಿನ ಹ್ಯಾಂಡಲ್‌ಗೆ ತೂಗಿಟ್ಟ ಪ್ಯಾಂಟ್‌ನಲ್ಲಿದ್ದ ೩.೭೦೦ರೂ ನಗದು, ನಾರಾಯಣ ಮಡಿವಾಳ ಶ್ರೀಕಾಂತ ಮಡಿವಾಳ ಅವರ ಪ್ಯಾಂಟ್‌ನಲ್ಲಿದ್ದ ೯.೫೦೦ರೂ ನಗದು ಹಾಗೂ ಹನುಮಂತ ನಾಯ್ಕ ಅವರ ಮನೆಯಲ್ಲಿದ್ದ ೨ ಮೊಬೈಲ್‌ಗಳನ್ನು ದೋಚಿ ಪರಾರಿಯಾಗಿದ್ದಾರೆ.
ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.