ಭಟ್ಕಳ : ವಿಶ್ವಕಮ೯ ಗೆಳೆಯರ ಬಳಗ(ರಿ) ಭಟ್ಕಳ ಇದರ ಆಶ್ರಯದಲ್ಲಿ ” ಮನೆಗೊಂದು ಗಿಡ” ಅಭಿಯಾನದ 3ನೇ ಹಂತದ ಕಾಯ೯ಕ್ರಮವನ್ನು ಭಟ್ಕಳದ ಶಹರ ಪೋಲಿಸ್ ಠಾಣಿಯ ಆವರಣದಲ್ಲಿ ಗಿಡ ನೆಡುವುದರ ಮೂಲಕ ಉದ್ಘಾಟಿಸಲಾಯಿತು.
ಈ ಅಭಿಯಾನದಂತೆ ಸಂಘವು ಪ್ರತಿವರ್ಷ 250 ಗಿಡಗಳನ್ನು 250 ಮನೆಗಳಿಗೆ ನೀಡಿ ಅದರ ಸಂಪೂರ್ಣ ಜವಾಬ್ದಾರಿಯನ್ನು ಮನೆಯವರಿಗೆ ನೀಡುವುದು ಸಂಘವು ಅನೇಕ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುವುದರ ಜೊತೆಗೆ ಸಮಾಜ ಸೇವೆಗಳನ್ನು ಮಾಡುತ್ತಾ ಬಂದಿರುತ್ತದೆ. ಭಟ್ಕಳದ ವಲಯ ಅರಣ್ಯಾಧಿಕಾರಿ ಶ್ರೀ ಶಂಕರ ಗೌಡ ಗಿಡ ನೆಡುವುದರ ಮೂಲಕ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ಅರಣ್ಯಾಧಿಕಾರಿ ಮಲ್ಲಿಕಾರ್ಜುನ, ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ಭಾಸ್ಕರ ಬಿ ಆಚಾರ್ಯ, ಭಟ್ಕಳ ಅಬ೯ನ್ ಕೊ ಆಪರೇಟಿವ್ ಬ್ಯಾಂಕಿನ ಜನರಲ್ ಮ್ಯಾನೇಜರ್ ಶ್ರೀ ಸುಭಾಸ ಶೆಟ್ಟಿ , ವಿಶ್ವಕರ್ಮ ಸಮಾಜದ ಹಿರಿಯ ಮುಖಂಡ ಶ್ರೀ ಗಜಾನನ ಎಸ್ ಆಚಾರ್ಯ, ಭಟ್ಕಳ ತಾಲೂಕ ಕ್ರೀಡಾಧಿಕಾರಿ ನಾಗರಾಜ ಪಟಗಾರ, ವಿಶ್ವಕರ್ಮ ನೌಕರರ ಸಂಘದ ಅಧ್ಯಕ್ಷ ಮಾರುತಿ ಆಚಾರ್ಯ ಹಾಗೆಯೇ ಶಹರ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ಕುಸುಮಾಧರ ಮತ್ತು ರೂರಲ್ ಪೊಲೀಸ್ ಠಾಣೆಯ ಪಿಎಸ್ಐ ಶ್ರೀ ಎಲ್.ಎಮ್.ನಾಯ್ಕ್ ಉಪಸ್ಥಿತರಿದ್ದು ಮಾತನಾಡಿದರು.
ಸಂಘದ ಅಧ್ಯಕ್ಷ ರವಿ. ಆರ್.ಆಚಾಯ೯ ಮಾತನಾಡಿ ಸಂಘದ ಎಲ್ಲಾ ಸದಸ್ಯರು ಸಹಕಾರ ನೀಡಿದರೆ ಮಾತ್ರ ಸಂಘದಲ್ಲಿ ಅನೇಕ ಉತ್ತಮ ಕೆಲಸಗಳನ್ನು ಮಾಡಲು ಸಾಧ್ಯ.ಸದಸ್ಯರೆಲ್ಲರೂ ಒಗ್ಗಟ್ಟಾಗಿ ಶ್ರಮಿಸುತ್ತಿದ್ದೇವೆ.ಈ ಮನೆಗೊಂದು ಗಿಡ ಅಭಿಯಾನ ಪ್ರತಿವರ್ಷ ಕೂಡ ನಡೆಸುತ್ತೇವೆ ಎಂಬುದಾಗಿ ನುಡಿದರು, ಶಿಕ್ಷಕ ಸುರೇಶ್ .ಎನ್.ಆಚಾಯ೯ ನಿರೂಪಿಸಿ ವಂದಿಸಿದರು