ಶಿರಸಿ: ಮಳೆಗಾಲದ ಅವಾಂತರ ಎಂಬಂತೆ ತಂತಿಗೆ ಒಣಗಿಸಿದ ಬಟ್ಟೆಗಳನ್ನು ತೆಗೆಯುವಾಗ ಆಕಸ್ಮಿಕವಾಗಿ ವಿದ್ಯುತ್ ಹರಿದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಶಿರಸಿ ತಾಲೂಕಿನ ಹೆಗಡೆಕಟ್ಟಾದಲ್ಲಿ ನಡೆದಿದೆ.
ಹೆಗಡೆಕಟ್ಟಾದ ಕೊಡೆಮನೆಯ ಕಮಲಾಕರ ಹೆಗಡೆ ಮೃತಪಟ್ಟ ವ್ಯಕ್ತಿ.
ಮನೆಯಲ್ಲಿ ತಂತಿಯ ಮೇಲೆ ಬಟ್ಟೆ ತೆಗೆಯಲು ಹೋದಾಗ ವಿದ್ಯುತ್ ಹರಿದು ಕೆಳಗಡೆ ಬೀಳುವಾಗ ಇಟ್ಟಗೆಗೆ ತಲೆ ಹೊಡೆದು ರಕ್ತಸ್ರಾವ ಉಂಟಾಗಿ ಮೃತಪಟ್ಟಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಶಿರಸಿ ಗ್ರಾಮೀಣ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮಳೆ ಇದ್ದ ಕಾರಣ ವಿದ್ಯುತ್ ಹರಿವು ಹೆಚ್ಚಿದ್ದು ಅವಘಡ ನಡೆದಿದೆ ಎನ್ನಲಾಗಿದೆ.