ಬೆಂಗಳೂರು:  ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಗುರುವಾರ ಬೆಳಿಗ್ಗೆ 11 ಗಂಟೆಗೆ ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆಗೆ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಇಂದು ನಡೆದ ಸದನ ಕಲಾಪ ಸಮಿತಿ ಸಭೆ ಬಳಿಕ ಸ್ಪೀಕರ್ ಭೇಟಿ ಮಾಡಿದ ಸಿಎಂ, ಗುರುವಾರ ಬೆಳಿಗ್ಗೆ 11 ಗಂಟೆಗೆ ವಿಶ್ವಾಸ ಮತಯಾಚನೆಗೆ ಲಿಖಿತ ರೂಪದಲ್ಲಿ ನೋಟಿಸ್ ಸಲ್ಲಿಸಿದ್ದಾರೆ.

RELATED ARTICLES  ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಗೆ ಚಾಲನೆ ನೀಡಿದ ಇನ್ಫೋಸಿಸ್‌ ಪ್ರತಿಷ್ಠಾನದ ಮುಖ್ಯಸ್ಥೆ ಹಾಗೂ ಖ್ಯಾತ ಬರಹಗಾರ್ತಿ ಸುಧಾ ಮೂರ್ತಿ

ಅತೃಪ್ತ ಶಾಸಕರ ಅರ್ಜಿ, ಸ್ಪೀಕರ್‌ ಸಲ್ಲಿಸಿದ ಅರ್ಜಿ ಮತ್ತು ರಾಜ್ಯ ಸರಕಾರದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಇತ್ಯರ್ಥಪಡಿಸಿದ ಬಳಿಕವೇ ವಿಶ್ವಾಸ ಮತ ಯಾಚಿಸಲು ನಿರ್ಧರಿಸಲಾಗಿದೆ ಎಂದು ಮಾಜಿ ಸಿಎಂ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ ಎನ್ನಲಾಗಿದೆ.

RELATED ARTICLES  ಮನೆಯಲ್ಲಿ ಒಂಟಿಯಾಗಿದ್ದ ಬಾಲಕಿ 10ನೇ ಮಹಡಿಯಿಂದ ಬಿದ್ದು ಸಾವು.

ಈ ವೇಳೆ ಸ್ಪೀಕರ್ ಅವರು, ನಾಳೆ ಸುಪ್ರೀಂ ತೀರ್ಪು ಬರಲಿದೆ. ಅಲ್ಲಿಯವರೆಗೂ ತಾಳ್ಮೆಯಿಂದ ಕಾಯಿರಿ. ತೀರ್ಪಿನ ಬಳಿಕ ದಿನಾಂಕ ನಿಗದಿ ಮಾಡೋಣ ಎಂದು ಸಲಹೆ ನೀಡಿದರು ಎಂದು ವರದಿಯಾಗಿದೆ.