ಕುಮಟಾ : ತಾಲೂಕಿನ ಪ್ರಸಿದ್ಧ ಸ್ಥಳ ಗೋಕರ್ಣದ ಜಟಾಯು ತೀರ್ಥದ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು ಕೆಲ ಕಾಲ ಆತಂಕಕ್ಕೆ ಕಾರಣವಾಗಿತ್ತು.
ಸುಮಾರು 200 ಅಡಿಗಳಷ್ಟು ಆಳದಲ್ಲಿ ಶವ ಬಿದ್ದಿದ್ದು ಪೋಲಿಸರು ಹರಸಾಹಸ ಮಾಡಿ ಶವ ಮೇಲೆತ್ತಿದ್ದಾರೆ.
ಇದು ಪುರುಷನ ಮೃತದೇಹ ವಾಗಿದ್ದು ಮುಖದ ಭಾಗ ಸಂಪೂರ್ಣ ಕೊಳೆತು ಹೋಗಿದ್ದರಿಂದ ಗುರುತು ಪತ್ತೆ ಕಷ್ಟವಾಗಿದೆ.
ಈ ಸಂಬಂಧ ಗೋಕರ್ಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆಯ ನಂತರ ಪೂರ್ಣ ಮಾಹಿತಿ ಹೊರ ಬರಬೇಕಿದೆ.