ಇಂದು ಕೇತುಗ್ರಸ್ತ ಚಂದ್ರಗ್ರಹಣ ಇದೆ. ಇದು ದೀರ್ಘಾವಧಿಯ ಚಂದ್ರಗ್ರಹಣವಾಗಿದೆ. ಈ ಗ್ರಹಣ ಭಾರತದಲ್ಲಿ ಗೋಚರಿಸುತ್ತಿದೆ. ಹೀಗಾಗಿ ನಮ್ಮಲ್ಲಿ ಆಚರಣೆ ಸ್ವಲ್ಪ ಹೆಚ್ಚಾಗಿಯೇ ಇದೆ. ಕೇತುಗ್ರಸ್ತ ಚಂದ್ರಗ್ರಹಣವು ಉತ್ತರಾಷಾಢದ ನಕ್ಷತ್ರದಲ್ಲಿ ಜರುತ್ತಿದೆ. ಹಾಗಾಗಿ ಕೆಲವು ರಾಶಿಗಳ ಮೇಲೆ ಇದರ ಪರಿಣಾಮ ತುಸು ಇದೆ.
ಪ್ರಮುಖವಾಗಿ ಧನಸ್ಸು ಮತ್ತು ಮಕರ ರಾಶಿಯವರಿಗೆ ಹೆಚ್ಚು ಪರಿಣಾಮ ಬೀರುವುದು. ಈ ರಾಶಿಯವರು ಗ್ರಹ ಶಾಂತಿಯನ್ನು ಮಾಡಿಸಿಕೊಳ್ಳುವುದು ಉತ್ತಮ.
ಕೇತುಗ್ರಸ್ತ ಚಂದ್ರಗ್ರಹಣದಿಂದ ಯಾವ ಯಾವ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಇದು ಸಾಮಾನ್ಯ ಕೂಡ.
ಚಂದ್ರಗ್ರಹಣದ ಸಂದರ್ಭದಲ್ಲಿ ಏನು ಏನು ಮಾಡಬೇಕು, ಯಾವ ಯಾವ ರಾಶಿಯವರಿಗೆ ಯಾವ ಪರಿಣಾಮ ಬೀರುತ್ತದೆ ಎಂಬ ವಿವರ ಇಲ್ಲಿದೆ. ಕೇವಲ ಒಂದೊಂದೇ ಶಬ್ಧಗಳಲ್ಲಿ ಗ್ರಹಣದ ಪರಿಣಾಮವನ್ನು ಇಲ್ಲಿ ವಿವರಿಸಲಾಗಿದೆ.
ಮೇಷ ರಾಶಿ: ಕೋಪ ಹೆಚ್ಚು
ವೃಷಭ: ಸ್ತ್ರೀಯರಿಂದ ಅಥವಾ ಪುರುಷರಿಂದ ನಷ್ಟ
ಮಿಥುನ: ಸೌಖ್ಯ
ಕಟಕ: ಸುಖ
ಸಿಂಹ: ರೋಗನಾಶ
ಕನ್ಯಾ: ಮಾನ ಹಾನಿ
ತುಲಾ: ಸುಖಿ
ವೃಶ್ಚಿಕ: ಲಾಭ
ಧನಸ್ಸು: ನಷ್ಟ
ಮಕರ: ಮನಸ್ಸಿಗೆ ಅಶಾಂತಿ
ಕುಂಭ: ಆರೋಗ್ಯ ಚೇತರಿಕೆ
ಮೀನ: ಧನ ಪ್ರಾಪ್ತಿ
ಗ್ರಹಣದ ದಿನ ಆಹಾರ ಸೇವಿಸುವ ಬಗ್ಗೆಯೂ ಕೆಲವು ನಿಯಮ ಪಾಲಿಸಬೇಕು. ಗ್ರಹಣ ಆರಂಭಕ್ಕೆ ಮೂರು ಗಂಟೆಗಳಿಗೂ ಮುನ್ನವೇ ಭೋಜನ ಸೇವಿಸುವುದು ಒಳಿತು. ಚಿಣ್ಣರು, ವೃದ್ಧರು, ರೋಗಿಗಳು, ಅಶಕ್ತರಿಗೆ ವಿನಾಯಿತಿ ಇರುತ್ತದೆ.
ತೀರಾ ಹಸಿವು ತಡೆಯದೇ ಇರುವವರು ಬೇಕಿದ್ದರೆ ದ್ರವಾಹಾರ ಮಾತ್ರ ಸೇವಿಸಬಹುದು.
ಗ್ರಹಣ ದಿನಾಂಕ : 16-7-2019 (ಮಂಗಳವಾರ)
ಗ್ರಹಣ ಸ್ಪರ್ಶ ಕಾಲ: ರಾತ್ರಿ 1.30
ಮಧ್ಯಕಾಲ: ರಾತ್ರಿ 3.00
ಮೋಕ್ಷಕಾಲ: ಬೆಳಗಿನ ಜಾವ 4.3
ಗ್ರಹಣದ ಅವಧಿ: 2 ಗಂಟೆ 59 ನಿಮಿಷ