ಯಲ್ಲಾಪುರ ; ಕುಡಿದ ಮತ್ತಿನಲ್ಲಿ ಹೆಂಡತಿಯ ಚೂಡಿದಾರದ ಮೇಲಿನಿಂದ ಆಕೆಯ ಕುತ್ತಿಗೆಯನ್ನು ಬಿಗಿದು ಕೊಲೆಗೈದ ಘಟನೆ ತಾಲ್ಲೂಕಿನ ಗುಳ್ಳಾಪುರ ಗ್ರಾಮದಲ್ಲಿ ಗುರುವಾರ ಮಧ್ಯರಾತ್ರಿ ನಂತರ ನಡೆದಿದೆ

ನಿರ್ಮಲಾ ಶಂಕರ್ ಉಣಕಲ್ (26) ಕೊಲೆಯಾದ ದುರ್ದೈವಿ ಯಾಗಿದ್ದು , ಆಕೆಯ ಪತಿ ಶಂಕರ್ ಉಣಕಲ (34) ಕುಡಿದು ಬಂದು ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಆಕೆಯ ವೇಲ್ ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ . ಕೂಲ್ಡ್ರಿಂಕ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಹೆಂಡತಿಯ ಮೇಲೆ ಆರೋಪಿ ಸಂಶಯ ಪಟ್ಟರುವುದೇ ಕೊಲೆಗೆ ಕಾರಣ ಎನ್ನಲಾಗಿದೆ . ಘಟನೆ ನಡೆದು ಮೂರು ಗಂಟೆಯೊಳಗೆ ಯಲ್ಲಾಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮೂಲತಃ ಗುಲ್ಬರ್ಗದ ನರಗುಂದ ನಿವಾಸಿಗಳಾದ ಶಂಕರ್ ಉಣಕಲ್ ಮತ್ತು ಆಕೆಯ ಆತನ ಪತ್ನಿ ನಿರ್ಮಲಾ ಕೆಲಸ ಹುಡುಕುತ್ತಾ ಒಂದು ವರ್ಷದ ಹಿಂದೆ ಗುಳ್ಳಾಪುರ ಬಂದಿದ್ದರು. ಎಂಟು ತಿಂಗಳ ಕಾಲ ವೆಂಕಟೇಶ್ ಪೈ ಎನ್ನುವವರು ಮನೆಯಲ್ಲಿ ಬಾಡಿಗೆಗೆ ಇದ್ದ ಈ ದಂಪತಿಗಳು ಹಾಗೂ ಅವರ ಪುತ್ರ ಪ್ರತಿದಿನ ನಡೆಯುವ ಜಗಳದ ಕಾರಣಕ್ಕೆ ವೆಂಕಟೇಶ್ ಪೈ ಮನೆ ಖಾಲಿ ಮಾಡಿಸಿದ್ದರು. ನಂತರ ಜನತಾ ಕಾಲನಿಯಲ್ಲಿ ಉಸ್ಮಾನ್ ಸಾಬ್ ಎನ್ನುವವರು ಮನೆಯಲ್ಲಿ ಕಳೆದೆರಡು ತಿಂಗಳಿಂದ ಬಾಡಿಗೆಗಿದ್ದರು . ಪ್ರತಿದಿನ ಕುಡಿದು ಬಂದು ಶಂಕರ್ ಉಣಕಲ್ ಆತನ ಹೆಂಡತಿಯೊಂದಿಗೆ ಜಗಳ ಮಾಡಿಕೊಂಡಿದ್ದು , ಗುರುವಾರ ಮಧ್ಯರಾತ್ರಿ ಪಾನಮತ್ತನಾಗಿ ಬಂದ ಆತ ಆಕೆಯ ವೇಲನಿಂದ ಕುತ್ತಿಗೆ ಬಿಗಿದು ಬೇರೊಬ್ಬರ ಮನೆಗೆ ತೆರಳಿದ್ದಾನೆ, ಆಕೆ ಸತ್ತಿರುವ ಬಗ್ಗೆ ಆತನಿಗೆ ತಿಳಿದು ಬರಲಿಲ್ಲ ಎನ್ನಲಾಗಿದೆ.

RELATED ARTICLES  ಅಕ್ರಮವಾಗಿ ಜಾನುವಾರು ಸಾಗಾಟ : ಮೂರು ವಾಹನ ಜಪ್ತಿ.

ಮನೆಯ ಅಕ್ಕಪಕ್ಕದವರು ಬಂದು ಮನೆ ಬಾಗಿಲು ತೆಗೆದು ನೋಡಿದಾಗ ಅಸ್ವಸ್ಥ ಸ್ಥಿತಿಯಲ್ಲಿದ್ದ ನಿರ್ಮಲಾ ಉಣಕಲ್ ಕೆಲಸ ಮಾಡುತ್ತಿದ್ದ ಕೂಲ್ಡ್ರಿಂಕ್ಸ್ ಮಾಲೀಕರಿಗೆ ಸ್ಥಳಕ್ಕೆ ಕರೆ ಕೊರೆಯಿಸಿ ಕೊಂಡಿದ್ದಾರೆ. ಆಕೆ ಹೀಗೇಕೆ ಮಲಗಿದ್ದಾಳೆ ಎಂದು ವಿಚಾರಿಸಿದ ಕೂಲ್ಡ್ರಿಂಕ್ಸ್ ಮಾಲೀಕರಿಗೆ ಆಕೆ ನಿದ್ದೆ ಗುಳಿಗೆ ತಿಂದು ಮಲಗಿದ್ದಾಳೆ ಎಂದು ಶಂಕರ ಉಣಕಲ ಸಬುಬು ಹೇಳಿದ್ದಾನೆ. ನಂತರ ಸಂಶಯಗೊಂಡ ಸ್ಥಳೀಯರು ಆತನನ್ನು ಬೇರೊಂದು ಮನೆಯಲ್ಲಿ ಕುಳ್ಳರಿಸಿ ಯಲ್ಲಾಪುರ ಪೊಲೀಸರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಪೊಲೀಸರು ಶಂಕರ್ ಉಣಕಲ್ ನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ಮಾಡಿದಾಗ ಸತ್ಯವನ್ನು ಬಾಯ್ಬಿಟ್ಟಿದ್ದಾನೆ.

RELATED ARTICLES  ಗೋಕರ್ಣ ಪದವಿ ಪೂರ್ವ ಕಾಲೇಜಿನಲ್ಲಿ "ಮೆಮೊರಿ ಟ್ರೈನರ್ ಮಾರುತಿ ಅಂಬಿಗ" ಅವರಿಂದ ಉಪನ್ಯಾಸ .

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಯಲ್ಲಾಪುರ ತಾಲ್ಲೂಕು ಆಸ್ಪತ್ರೆಗೆ ಸೇರಿಸಲಾಗಿದೆ ಯಲ್ಲಾಪುರ ಪೊಲೀಸ್ ನಿರೀಕ್ಷಕ ಮಂಜುನಾಥ ನಾಯಕ ಸ್ಥಳಕ್ಕೆ ಭೇಟಿ ನೀಡಿ ತನಿಖೆಗೆ ಮಾರ್ಗದರ್ಶನ ಮಾಡಿದ್ದಾರೆ. ಪಿಎಸ್ ಐ ಶ್ರೀಧರ್ ಎಸ್.ಆರ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ .