ಭಟ್ಕಳ : ಕಳೆದ ಮೇ ತಿಂಗಳಲ್ಲಿ ಜರುಗಿದ ನಾಲ್ಕನೆ ಸೆಮಿಸ್ಟರ್ ಬಿ. ಕಾಂ ಪರೀಕ್ಶೆಯಲ್ಲಿ ನಗರದ ಶ್ರೀ ಗುರು ಸುಧೀಂದ್ರ ಪದವಿ ಕಾಲೇಜಿಗೆ ಶೇಕಡಾ 96.07 ಫಲಿತಾಂಶ ಲಭಿಸಿರುತ್ತದೆ. ಸೇವಂತಿ ದೇವಾಡಿಗ ಶೇ 93.38 ಅಂಕದೊಂದಿಗೆ ಪ್ರಥಮ ಸ್ಥಾನವನ್ನು, ಮಮತಾ ಎಮ್ ಗೊಂಡ ಶೇ 91.38 ಅಂಕದೊಂದಿಗೆ ದ್ವಿತೀಯ ಸ್ಥಾನವನ್ನು ಮತ್ತು ಮನೋಜ ಈರಪ್ಪ ನಾಯ್ಕ ಶೇ 91.25 ಅಂಕದೊಂದಿಗೆ ತ್ರತೀಯ ಸ್ಥಾನವನ್ನು ಪಡೆದಿರುತ್ತಾರೆ.
ಇದರೊಂದಿಗೆ ಐ.ಎಫ್.ಎಸ್, ಕಾರ್ಪೊರೇಟ್ ಎಕೌಂಟಿಂಗ್, ಎಲ್.ಪಿ.ಬಿ, ಎಫ್.ಎಫ್.ಎಮ್, ಬಿಸಿನೆಸ್ ಸ್ಟೆಟಿಸ್ಟಿಕ್ಸ್ ವಿಷಯಗಳಲ್ಲಿ ತಲಾ 15 ವಿಧ್ಯಾರ್ಥಿಗಳು ನೂರಕ್ಕೆ ನೂರು ಅಂಕ ಗಳಿಸಿರುತ್ತಾರೆ.
ವಿಧ್ಯಾರ್ಥಿಗಳ ಈ ಸಾಧನೆಗೆ ಭಟ್ಕಳ ಎಜುಕೇಷನ್ ಟ್ರಸ್ಟ್‍ನ ಆಡಳಿತ ಮಂಡಳಿ, ಪ್ರಾಂಶುಪಾಲರು, ಭೋಧಕ-ಭೋಧಕೇತರ ವೃಂದದವರು ಹರ್ಷ ವ್ಯಕ್ತಪಡಿಸಿರುತ್ತಾರೆ.