ಕುಮಟಾ: ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿಯಲ್ಲಿ 2019-20 ನೇ ಸಾಲಿನ ಶಾಲಾ ಸಂಸತ್ತು ಸದಸ್ಯರನ್ನು ನೈಜ ಚುನಾವಣಾ ಮಾದರಿಯಲ್ಲಿ ಆಯ್ಕೆ ಮಾಡಲಾಯಿತು.
ಮುಖ್ಯ ಚುನಾವಣಧಿಕಾರಿಗಳಾದ ಮುಖ್ಯ ಶಿಕ್ಷಕರಾದ ರೋಹಿದಾಸ ಎಸ್ ಗಾಂವಕರ ಅಧಿಸೂಚನೆಯೊಂದಿಗೆ ಚುನಾವಣಾ ದಿನಾಂಕ ವೇಳಾಪಟ್ಟಿ ಪ್ರಕಟಿಸಲಾಯಿತು.
ವಿದ್ಯಾರ್ಥಿಗಳು ನಾಮಪತ್ರವನ್ನು ಸೂಚಕರ ಸಹಿಯೊಂದಿಗೆ ಚುನಾವಣಾಧಿಕಾರಿ ಶಿಕ್ಷಕ ಮಹಾದೇವ ಗೌಡರಿಗೆ ಸಲ್ಲಿಸಲಾಯಿತು. ನಂತರ ನಾಮಪತ್ರ ಪರಿಶೀಲಿಸಿ ನಾಮಪತ್ರ ಹಿಂಪಡೆಯುವ ಪ್ರಕ್ರಿಯೆಗಳು ಜರುಗಿದವು. ನೈಜ ಚುನಾವಣೆಯಂತೆ ವಿದ್ಯಾರ್ಥಿಗಳಿಗೆ ಚಿಹ್ನೆಗಳ ಪಟ್ಟಿ ನೀಡಿ ಆಯ್ಕೆಗೆ ಅವಕಾಶ ಕಲ್ಪಿಸಲಾಗಿತ್ತು. ಮತ್ತು ವಿದ್ಯಾರ್ಥಿಗಳಿಗೆ ಪ್ರಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು.. ನಂತರ ಚುನಾವಣೆ ನಡೆಸಲಾಯಿತು. ಮತಗಟ್ಟೆ ಅಧಿಕಾರಿ, ಪಿ.ಆರ್.ಓ, ಏ.ಪಿ.ಆರ್.ಓ.ಡಿ ದರ್ಜೆ ಸಹಾಯಕರು ಆರಕ್ಷಕರು ಎಲ್ಲಾ ಇಲ್ಲಿ ಕಂಡುಬಂತು.
ಚಿಹ್ನೆ ಸಹಿತ ಇರುವ ಮುದ್ರಿತ ಮತಪತ್ರ, ಮತದಾರರ ಪಟ್ಟಿ, ವೋಟಿಂಗ್ ಕಂಪಾರ್ಟಮೆಂಟ್ ರಬ್ಬರ್ ಮೊಹರು ಅಳಿಸಿಹಾಕಲಾಗದ ಶಾಹಿ, ಚುನಾವಣ ಸಾಮಗ್ರಿ ಪಡೆಯುವಿಕೆ, ಹಿಂತಿರುಗಿಸುವಿಕೆ ಚುನಾವಣಾ ಏಜೆಂಟರ್ ನೇಮಕಾತಿ, ಹಾಜರಾತಿ ಕರ್ತವ್ಯದ ಪ್ರಮಾಣ ಪತ್ರ ಬಳಸಿ ಮತ ಚಲಾವಣೆ ಇವೆಲ್ಲ ಶಾಲೆಯ ಸಂಸತ್ತಿನ ಚುನಾವಣೆಯಲ್ಲಿ ಕಂಡುಬಂದಿತು. ನೈಜ ಚುನಾವಣೆಯಂತೆ ಮತ ಪತ್ರಗಳನ್ನು 25ರಂತೆ ಬಂಡಲ್ ಮಾಡಿ ಏಣಿಕೆ ಕಾರ್ಯ ನಡೆಯಿತು.
ವಿದ್ಯಾರ್ಥಿಗಳಲ್ಲಿ ಶಿಸ್ತುಬದ್ಧ ಚುನಾವಣೆ ನಡೆಸಲು ಕಾರಣವಾದ ಶಿಕ್ಷಕರಾದ ಬಾಲಚಂದ್ರ ಹೆಗಡೆಕರ್, ವಿಶ್ವನಾಥ ಬೇವಿನಕಟ್ಟಿ, ನಾಗರಾಜ ನಾಯಕ, ಇಂದಿರಾ ನಾಯಕ, ಜಾನಕಿ ಗೊಂಡ, ಎನ್ ರಾಮು ಹಿರೇಗುತ್ತಿ, ಶಿಲ್ಪಾ ನಾಯಕ, ಕವಿತಾ ಅಂಬಿಗ, ಗೋಪಾಲಕೃಷ್ಣ ಗುನಗಾ ಹಾಗೂ ಬಿ.ಎಡ್ ಪ್ರಶಿಕ್ಷಾಣಾರ್ಥಿಗಳಾದ ಗೀತಾ ಸಂದಿಗೋಡಮಠ, ಶ್ವೇತಾ ಹರಿಕಂತ್ರ, ಅಶ್ವಿನಿ ಆಚಾರಿ ಸಹಕಾರದಿಂದ ಇಂತಹ ಮಾದರಿ ಚುನಾವಣೆ ನಡೆಸಲು ಸಾಧ್ಯವಾಯಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಮುಖ್ಯಾಧ್ಯಾಪಕ ರೋಹಿದಾಸ ಎಸ್ ಗಾಂವಕರ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಶಾಲಾ ಗಂಡು ಮಕ್ಕಳ ವಿದ್ಯಾರ್ಥಿ ಪ್ರತಿನಿಧಿಯಾಗಿ ಶಿವರಾಜ ಯೋಗೇಶ ನಾಯಕ ಹೆಣ್ಣು ಮಕ್ಕಳ ವಿದ್ಯಾರ್ಥಿ ಪ್ರತಿನಿಧಿಯಾಗಿ ಸಹನಾ ಗಾಂವಕರÀ ಆಯ್ಕೆಯಾದರು. ಕೊನೆಯಲ್ಲಿ ಎಲ್ಲ ವರ್ಗದ ಪ್ರತಿನಿಧಿಗಳನ್ನು ಆಯ್ಕೆಮಾಡಲಾಯಿತು. ಹಾಗೂ ಸಾಂಸ್ಕøತಿಕ ಅಧ್ಯಕ್ಷರಾಗಿ ದೀಕ್ಷಿತ್ ಗುನಗಾ ಮತ್ತು ಶ್ರೀದೇವಿ ಹಳ್ಳೇರ , ಕ್ರೀಡಾ ಮಂತ್ರಿ ಶಿವರಂಜಿನಿ ಗೌಡ ಮತ್ತು ಶಿವರಾಜ ಹಳ್ಳೇರ, ಸ್ವಚ್ಚತಾ ಮಂತ್ರಿ ನಾಗಶ್ರೀ ಪಟಗಾರ ಮತ್ತು ಸನಿದ ನಾಯಕ, ಆಹಾರ ಮತ್ತು ಆರೋಗ್ಯ ಮಂತ್ರಿ ಸಹನಾ ಗಾಂವಕರ ಮತ್ತು ದಿಕ್ಷೀತ್ ಶಾನಭಾಗ, ಪ್ರವಾಸದ ಮಂತ್ರಿ ಶ್ರೀಯಾ ನಾಯಕ ಮತ್ತು ಅಮೋಘ ನಾಯಕ, ಹಣಕಾಸು ಮಂತ್ರಿ ಸಿಂಚನಾ ನಾಯಕ ಮತ್ತು ಗಿರೀಶ ಗೌಡ, ಪ್ರಾರ್ಥನಾ ಮಂತ್ರಿ ಶಿವರಾಜ ನಾಯಕ ಮತ್ತು ಸಹನಾ ಗಾಂವಕರರವರಿಗೆ ಮಂತ್ರಿಮಂಡಲ ಹಂಚಿಕೆ ಮಾಡಲಾಯಿತು.
ವರದಿ:ಎನ್ ರಾಮು ಹಿರೇಗುತ್ತಿ