ಕುಮಟಾ :- “ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಪಠ್ಯಪೂರಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ವಿವಿಧ ವಿಷಯ ಸಂಘಗಳ ರಚನೆ ಅತೀ ಅವಶ್ಯಕ” ಎಂದು ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಮುಖ್ಯಾಧ್ಯಾಪಕರಾದ ರೋಹಿದಾಸ ಎಸ್ ಗಾಂವಕರ ನುಡಿದರು.
ಅವರು ಹಿರೇಗುತ್ತಿಯ ಸೆಕೆಂಡರಿ ಹೈಸ್ಕೂಲಿನಲ್ಲಿ ವಿವಿಧ ವಿಷಯ ಸಂಘಗಳನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. “ವಿದ್ಯಾರ್ಥಿಗಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಹೊರಹಾಕಲು ಶಾಲಾ ವಿಷಯ ಸಂಘಗಳು ವಿದ್ಯಾರ್ಥಿಗಳಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಡುತ್ತದೆ” ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಡಿ.ಡಿ.ಭಟ್ಟ್ ಹಿರಿಯ ಉಪನ್ಯಾಸಕರು ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯ ಕುಮಟಾ “ಶಾಲೆಯಲ್ಲಿರುವ ವಿವಿಧ ಸಂಘಗಳ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನವಾಗುತ್ತದೆ ಸೃಜನಶೀಲತೆ ಬೆಳೆಯುತ್ತದೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಿಕೆಯ ಮನೋಭಾವನೆ ಬೆಳೆಯುತ್ತದೆ”. ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಎನ್ ರಾಮು ಹಿರೇಗುತ್ತಿ “ನಮ್ಮ ಶಾಲೆಯಲ್ಲಿ ಸಾಹಿತ್ಯ ಸಂಘ, ವಿಜ್ಞಾನ ಸಂಘ, ಪ್ರಕೃತಿ ಇಕೋ ಕ್ಲಬ್, ಆರೋಗ್ಯ ಕೂಟ, ಗಣಿತ ಸಂಘ, ಕಾನೂನು ಮತ್ತು ಸಾಕ್ಷರತಾ ಸಂಘ, ಕ್ರೀಡಾ ಸಂಘ, ಇತಿಹಾಸ ಸಂಘÀ, ಇಂಗ್ಲೀಷ್ ಸಂಘ, ಹಿಂದಿ ಮತ್ತು ಸಂಸ್ಕøತ ವಿಷಯ ಸಂಘಗಳು ಉದ್ಘಾಟನೆಗೊಂಡು ಕಾರ್ಯಕ್ರಮಗಳಿಗೆ ಸಿದ್ದವಾಗಿದೆ. ವಿದ್ಯಾರ್ಥಿಗಳು ಎಲ್ಲ ಸಂಘಗಳಲ್ಲೂ ಭಾಗವಹಿಸಿ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕೆಂದರು”.
ವರಕವಿ ಬೇಂದ್ರೆ ಸಾಹಿತ್ಯ ಸಂಘ ಹಾಗೂ ದಿನಕರ ದೇಸಾಯಿ ಸಾಂಸ್ಕøತಿಕ ಸಂಘದ ಧ್ಯೇಯೋದ್ಧೇಶಗಳ ಕುರಿತು ಮಾರ್ಗದರ್ಶಕರಾದ ಶ್ರೀಮತಿ ಶಿಲ್ಪಾ ವೆಂಕಟ್ರಮಣ ನಾಯಕ ಕ್ರೀಡಾ ಸಂಘದ ಕುರಿತು ರ್ಮಾದರ್ಶಕರಾದ ದೈಹಿಕ ಶಿಕ್ಷಕ ಶ್ರೀ ನಾಗರಾಜ ಜಿ ನಾಯಕ, ಆರೋಗ್ಯ ಕೂಟದ ಉದ್ದೇಶ ಕೈಗೊಳ್ಳುವ ಕಾರ್ಯಕ್ರಮ ಮತ್ತು ಪ್ರಕೃತಿ ಇಕೋಕ್ಲಬ್‍ನ ಕುರಿತು ವಿಜ್ಞಾನ ಸಂಘದ ಮಾರ್ಗದರ್ಶಕರಾದ ಶ್ರೀ ಮಹಾದೇವ ಗೌಡ, ಗಣಿತ ಸಂಘದ ಕುರಿತು ವಿದ್ಯಾರ್ಥಿ ಶಿವರಾಜ ನಾಯಕ ಇಂಗ್ಲೀಷ್ ಕ್ಲಬ್ ಕುರಿತು ವಿದ್ಯಾರ್ಥಿನಿ ಚಿತ್ರ ಹರಿಕಂತ್ರ, ಹಿಂದಿ ಸಂಘದ ಕುರಿತು ಶಿಕ್ಷಕಿ ಶ್ರೀಮತಿ ಇಂದಿರಾ ನಾಯಕ, ಸಂಸ್ಕøತ ಸಂಘದ ಕುರಿತು ಶ್ರೀದೇವಿ ಹಳ್ಳೇರ ,ಇತಿಹಾಸ ಸಂಘ ಮತ್ತು ಕಾನೂನು ಸಾಕ್ಷರತಾ ಸಂಘದ ಕುರಿತು ಮಾರ್ಗದರ್ಶಕ ಶಿಕ್ಷಕರಾದ ಜಾನಕಿ ಗೊಂಡ ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ವಿಶ್ವನಾಥ ಬೇವಿನಕಟ್ಟಿ, ಶ್ರೀ ಬಾಲಚಂದ್ರ ಹೆಗಡೇಕರ್, ಕವಿತಾ ಅಂಬಿಗ ಮತ್ತು ಬಿ.ಎಡ್ ಪ್ರಶಿಕ್ಷಣಾರ್ಥಿಗಳಾದ ಗೀತಾ ಸಂದಿಗೋಡಮಠ, ಶ್ವೇತಾ ಹರಿಕಂತ್ರ, ಅಶ್ವಿನಿ ಆಚಾರಿ, ಮೇಘಾ ನಾಯಕ, ಪೂರ್ಣಿಮಾ, ಪೂಜಾ, ಶ್ವೇತಾ, ಅಕ್ಷತಾ, ಸಂಗೀತಾ ಶೆಟ್ಟಿ, ಎಚ್ ಸುಹಾಸಿನಿ, ಸವಿತಾ, ರಾಜಶ್ರೀ, ನಿವೇದಿತಾ, ಮಹಾಲಕ್ಷ್ಮೀ ಭಾಗವಹಿಸಿದ್ದರು.
ಪ್ರಾರಂಭದಲ್ಲಿ ಶ್ವೇತಾ ಸಂಗಡಿಗರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ವಿದ್ಯಾರ್ಥಿ ಪ್ರತಿನಿಧಿ ಶಿವರಾಜ ನಾಯಕ ಸರ್ವರನ್ನು ಸ್ವಾಗತಿಸಿದನು. ವಿದ್ಯಾರ್ಥಿ ಪ್ರತಿನಿಧಿ ಸಹನಾ ಗಾಂವಕರ ಕಾರ್ಯಕ್ರಮ ನಿರ್ವಹಿಸಿದಳು. ಶ್ರೀದೇವಿ ಹಳ್ಳೇರ ವಂದಿಸಿದಳು.
ವರದಿ: ಎನ್ ರಾಮು ಹಿರೇಗುತ್ತಿ