ಬೆಂಗಳೂರು: ರಾಜೀನಾಮೆ ಅಂಗೀಕಾರಕ್ಕೆ ಸಂಬಂಧಿಸಿದಂತೆ ಮಧ್ಯಂತರ ತೀರ್ಪು ಪ್ರಕಟಿಸಿರುವ ಸುಪ್ರೀಂ ಕೋರ್ಟ್, ಅತೃಪ್ತ ಶಾಸಕರ ರಾಜೀನಾಮೆ  ಅಂಗೀಕರಿಸಲು ಸ್ಪೀಕರ್‌ಗೆ ಕಾಲಮಿತಿ ನಿಗಧಿಪಡಿಸುವಂತಿಲ್ಲ. ವಿಶ್ವಾಸ ಮತ ಯಾಚಿಸಿದರೂ ಅತೃಪ್ತ 15 ಶಾಸಕರು ಇದರಲ್ಲಿ ಭಾಗಿಯಾಗಬೇಕೆಂದಿಲ್ಲ, ಅಲ್ಲದೇ ಈಗಾಗಲೇ ಜಾರಿಗೊಳಿಸಿರುವ ವಿಪ್ ಇವರಿಗೆ ಅನ್ವಯಿಸುವುದಿಲ್ಲ ಎಂದು ಆದೇಶಿಸಿದೆ ಎಂದು ತಿಳಿದುಬಂದಿದೆ. 

RELATED ARTICLES  ಶಿವರಾಮ್ ಹೆಬ್ಬಾರ್ ಕಾರು ಅಪಘಾತ...!

ವಿಶ್ವಾಸ ಮತಯಾಚನೆಗೆ ಹಾಜರಾಗುವುದು ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ಪ್ರಕಟಿಸುವ ಮೂಲಕ ಅತೃಪ್ತ ಶಾಸಕರಿಗೆ ಬಿಗ್ ರಿಲೀಫ್ ಸಿಕ್ಕಿದೆ.

ಈ ವೇಳೆ ರಾಜೀನಾಮೆ ಅಂಗೀಕಾರಕ್ಕೆ ದಿನ ನಿಗದಿ ಪಡಿಸದ ಕೋರ್ಟ್ ನಿರ್ದಿಷ್ಟ ಸಮಯದಲ್ಲಿ ಅತೃಪ್ತ ಶಾಸಕರ ರಾಜೀನಾಮೆ ನಿರ್ಧಾರ ಮಾಡಿ ಎಂದು ಸ್ಪೀಕರ್ ಅವರಿಗೆ ಆದೇಶ ನೀಡಿದೆ ಎನ್ನಲಾಗಿದೆ.

RELATED ARTICLES  ಕೋವಿಡ್ ಲಸಿಕೆ ಪಡೆಯಲು ಮುಗಿಬಿದ್ದ ಜನ..!

ನಾಳೆ ವಿಶ್ವಾಸಮತಯಾಚನೆ ಮಾಡಬಹುದು. ಆದ್ರೆ ರಾಜೀನಾಮೆ ನೀಡಿರುವ 15 ಶಾಸಕರು ಭಾಗವಹಿಸುವುದು ಕಡ್ಡಾಯವಲ್ಲ. ಹಾಜರಾಗಬೇಕೋ ಬೇಡವೋ ಎನ್ನುವುದು ಶಾಸಕರ ವಿವೇಚನೆಗೆ ಬಿಟ್ಟ ವಿಚಾರ. ಅತೃಪ್ತ ಶಾಸಕರನ್ನು ಒತ್ತಾಯಪೂರ್ವಕವಾಗಿ ಕರೆತರುವ ಹಾಗಿಲ್ಲ ಎಂದು ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ ಎಂದು ವರದಿಯಾಗಿದೆ.