ಭಟ್ಕಳ- ಗುರು ಪರಂಪರೆಗೆ ಮಹತ್ವ ನೀಡುವ, ಶೃದ್ದೆ, ಶಿಸ್ತಿಗೆ ಹೆಸರಾದ ಚಿತ್ರಾಪುರ ಮಠದ ಅಡಿಯಲ್ಲಿ ನಡೆಯುತ್ತಿರುವ ಶ್ರೀವಲ್ಲಿ ಪ್ರೌಢಶಾಲೆಯಲ್ಲಿ ಇಲ್ಲಿನ ಸಾಹಿತ್ಯ ಸಂಘದ ನೇತೃತ್ವದಲ್ಲಿ ಗುರುಪೂರ್ಣಿಮೆ ಉತ್ಸವ ಕಾರ್ಯಕ್ರಮ ಮಂಗಳವಾರ ನಡೆಯಿತು.
ಕಾರ್ಯಕ್ರಮದಲ್ಲಿ ಮೊದಲಿಗೆ ಶಾಲೆಯ ಆಯ್ದ ವಿದ್ಯಾರ್ಥಿಗಳಿಂದ ಗುರುಗಳ ಬಗ್ಗೆ ಕಾವ್ಯ ವಾಚನ ನಡೆಯಿತು. ನಂತರ ಸಾಹಿತ್ಯ ಸಂಘದ ವಿದ್ಯಾರ್ಥಿ ಸದಸ್ಯರುಗಳು ಸಾಂಕೇತಿಕವಾಗಿ ಎಲ್ಲ ಗುರುಗಳ ಪಾದಕ್ಕೆ ನಮಿಸಿ ಗುರುವಂದನೆ ಸಲ್ಲಿಸಿದರು.
ಶಿಕ್ಷಣದಲ್ಲಿ ನೈತಿಕತೆ ಇಲ್ಲದಿರೆ ಅಂತಹ ಶಿಕ್ಷಣ ಜೀವನ ಮಾರ್ಗವನ್ನು ಕಂಡುಕೊಳ್ಳುವಲ್ಲಿ ಸಹಕಾರಿಯಾಗದೆ ಹೋಗಬಹುದು.ಹಾಗಾಗಿ ಪ್ರತಿಯೊಂದು ಶಾಲೆಯಲ್ಲಿಯೂ ನೈತಿಕ ಶಿಕ್ಷಣಕ್ಕೆ ಆಧ್ಯತೆ ನೀಡಬೇಕಾದ ಅನಿವಾರ್ಯತೆ ಇದೆ ಎಂದು ಸಾಹಿತ್ಯ ಸಂಘದ ಮಾರ್ಗದರ್ಶಿ ಶಿಕ್ಷಕಿಯಾದ ರೇಷ್ಮಾ ನಾಯಕ ನುಡಿದರು. ಕೇವಲ ಶಾಲೆಯಲ್ಲಿ ಬೋದಿಸಿದ ಮಾತ್ರಕ್ಕೆ ಗುರುವಾಗಲಾರ ಜೀವನವೆಂಬ ಪಯಣದಲ್ಲಿ ಒಂದು ಅಕ್ಷರ ಕಲಿಸಿದವರು ಗುರು ಎನಿದಿಕೊಳ್ಳುತ್ತಾರೆ. ಅಂತವರನ್ನು ಗೌರವದಿಂದ ಕಾಣುವ ಹಿಂದಿನ ಪರಂಪರೆ ಮತ್ತೆ ಬರಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸುತ್ತಾ ಗುರುಪೂರ್ಣಿಮೆಯ ಮಹತ್ವದ ಬಗ್ಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯಿನಿ ಮಮತಾ ಭಟ್ಕಳ ನಮ್ಮಲ್ಲಿನ ಪ್ರತಿ ಆಚರಣೆಯು ಒಂದು ಅರ್ಥಪೂರ್ಣ. ಅವುಗಳ ಆಚರಣೆ ಮತ್ತು ಅನುಕರಣೆಯಿಂದ ಜೀವನದಲ್ಲಿ ಯಶಸ್ಸು ಕಾಣಬಹುದೇ ಹೊರತು ಸೋಲಾಗಲು ಸಾಧ್ಯವಿಲ್ಲ ಹಾಗಾಗಿ ವಿದ್ಯಾರ್ಥಿ ಜೀವನದಲ್ಲಿ ಅವುಗಳನ್ನು ನಮ್ಮ ಜೀವನ ಕ್ರಮದಲ್ಲಿ ಅನುಸರಿಸುವಂತಾಗಬೇಕು ಎಂದರು.
ಸಹಶಿಕ್ಷಕ ಸಂಜಯ ಗುಡಿಗಾರ ಪ್ರಸ್ಥಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಪ್ರೀಯಾಂಕ ನಾಯ್ಕ ಸ್ವಾಗತಿಸಿದರೆ, ಸಂಜನಾ ನಾಯ್ಕ ವಂದಿಸಿದರು. ಐಶ್ವರ್ಯ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.
ವೇದಿಕೆಯಲ್ಲಿ ಶಾಲೆಯ ಎಲ್ಲ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.