ಕುಮಟಾ : ಜೀವನೋಪಾಯಕ್ಕಾಗಿ ಆಯ್ಕೆ ಮಾಡಿಕೊಂಡ ನೌಕರಿಯಲ್ಲಿನ ದೈನಂದಿನ ಕರ್ತವ್ಯದಲ್ಲಿ ನಿಷ್ಠೆ, ಕಾಳಜಿ, ಕಳಕಳಿ, ಪ್ರೀತಿ, ಗೌರವ , ಪ್ರಾಮಾಣಿಕತೆ ಈ ಗುಣಗಳನ್ನು ಅಳವಡಿಸಿಕೊಂಡಾಗ ಆ ಕೆಲಸವೂ ಸೇವೆ ಎಂತಲೇ ಕರೆಸಿಕೊಳ್ಳುತ್ತದೆ. ಸಮಾಜವು ಸದಾ ಸ್ಮರಿಸುವಂತಹ ಇಂತಹ ಸೇವಾ ಗುಣಗಳಿಂದ ಸೇವಾ ಸಂತೃಪ್ತಿ ಪಡೆಯುವಂತಹ ಕಾರ್ಯ ನಮ್ಮ ನಿಮ್ಮೆಲ್ಲರದ್ದಾಗಿರಲಿ ಎಂದು ಕುಮಟಾದ ಲಾಯನ್ಸ್ ರೇವಣಕರ ಚೆರಿಟೇಬಲ್ ಕಣ್ಣಿನ ಆಸ್ಪತ್ರೆಯ ಆಡಳಿತಾಧಿಕಾರಿ ಜಯದೇವ ಬಳಗಂಡಿ ಅಭಿಪ್ರಾಯಿಸಿದರು.ಅವರಿಂದು ಮೂಲತಃ ದಾವಣಗೆರೆಯವರಾದ, ಕೇರಳ, ಬೆಂಗಳೂರುಗಳಲ್ಲಿ ಕೆಲವರ್ಷ ಸೇವೆ ಸಲ್ಲಿಸಿದ ಅನುಭವಿ ನೇತ್ರತಜ್ಞ ಡಾ.ಮಲ್ಲಿಕಾರ್ಜುನ್.ಸಿ.ಎಸ್.  ಅವರನ್ನು ಸ್ವಾಗತಿಸುವ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

RELATED ARTICLES  ರಂಗಮಹೊತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಂಪನ್ನ

        ಲಾಯನ್ಸ್ ಹ್ಯುಮನಿಟೇರಿಯನ್ ಸರ್ವಿಸ್ ಟ್ರಸ್ಟ್‍ನ ಅಧ್ಯಕ್ಷ ದೇವಿದಾಸ ಡಿ.ಶೇಟ್ ಅವರು ಟ್ರಸ್ಟ್ ಪರವಾಗಿ ಹೂಗುಚ್ಚ ನೀಡಿ ಸ್ವಾಗತಿಸುತ್ತ, ಡಾ.ಮಲ್ಲಿಕಾರ್ಜುನ್ ಅವರ ಆಗಮನದಿಂದ ನಮ್ಮ ಆಸ್ಪತ್ರೆಯಲ್ಲಿ ಇನ್ನೋರ್ವ ನುರಿತ ನೇತ್ರತಜÐರ ಅವಶ್ಯಕತೆ ಪೂರೈಕೆಯಾದಂತಾಗಿದೆ. ಕುಮಟಾ ಹಾಗೂ ಸುತ್ತಮುತ್ತಲಿನ ಜನತೆಗೆ ಇವರಿಂದ ಹೆಚ್ಚಿನ ವೈದ್ಯಕೀಯ ಸೇವೆ ಲಭಿಸಲಿ ಎಂದು ಶುಭಕೋರಿದರು.

RELATED ARTICLES  ಯಶಸ್ವಿಯಾಗಿ ಮಿರ್ಜಾನಿನಲ್ಲಿ ಜರುಗಿದ ನಾಮಧಾರಿ ಕಬಡ್ಡಿ ಪಂದ್ಯಾವಳಿ

        ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಟ್ರಸ್ಟ್‍ನ ಖಜಾಂಚಿ ಹೆಚ್. ಎನ್.ನಾಯ್ಕ , ಸೆಕ್ರೆಟರಿ ಪ್ರೊ.ರೇವತಿ ರಾವ್ , ಟ್ರಸ್ಟಿಗಳಾದ ಡಾ.ಸತೀಶ ಪ್ರಭು , ಡಾ.ಸುರೇಶ ಹೆಗಡೆ ಹಾಗೂ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳು , ಕೆಲ ನಾಗರಿಕರು  ಡಾ.ಮಲ್ಲಿಕಾರ್ಜುನ್ ಅವರನ್ನು ಗೌರವಪೂರ್ವಕವಾಗಿ ಶುಭಕೋರಿ ಬರಮಾಡಿಕೊಂಡರು .