ಕುಮಟಾ: ತಾಲೂಕಿನ ವಾಲಗಳ್ಳಿ ಯಾಜಿ ಯಕ್ಷಮಿತ್ರ ಮಂಡಳಿಯ 13ನೇ ವರ್ಷದ ಯಾಜಿ ಯಕ್ಷಮಿತ್ರ ಪ್ರಶಸ್ತಿ ಪ್ರದಾನ ಹಾಗೂ ನಿಧಿ ಸಮರ್ಪಣಾ ಕಾರ್ಯಕ್ರಮವು ಜು.21 ಭಾನುವಾರ ಸಂಜೆ 4 ಗಂಟೆಗೆ ಪಟ್ಟಣದ ಹವ್ಯಕ ಸಭಾಭವನದಲ್ಲಿ ಜರುಗಲಿದೆ ಎಂದು ಯಾಜಿ ಯಕ್ಷ ಮಿತ್ರ ಮಂಡಳಿಯ ಮುಖ್ಯಸ್ಥ ಕೃಷ್ಣಯಾಜಿ ಬಳ್ಕೂರು ತಿಳಿಸಿದ್ದಾರೆ.

ಮಣಿಪಾಲ ಅಕಾಡೆಮಿ ಉನ್ನತ ಶಿಕ್ಷಣದ ಚಾನ್ಸಲರ್ ಡಾ.ಎಚ್.ಎಸ್.ಬಲಾಳ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕುಮಟಾ ಯಕ್ಷಗಾನ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಜಿ.ಎಲ್.ಹೆಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಣಿಪಾಲ ಅಕಾಡೆಮಿ ಉನ್ನತ ಶಿಕ್ಷಣದ ರಜಿಸ್ಟಾರ ಡಾ.ನಾರಾಯಣ ಸಭಾಹಿತ, ಕಿಶನಕುಮಾರ ಹೆಗಡೆ ಹಾಗೂ ಉದ್ಯಮಿ ಹುಬ್ಬಳ್ಳಿಯ ಆರ್.ಜಿ.ಭಟ್ಟ, ಕಾರವಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜೇಂದ್ರ ಬೇಕಲ್ ಭಾಗವಹಿಸಲಿದ್ದಾರೆ.

RELATED ARTICLES  ಫೆ 8ಕ್ಕೆ ಹೊಸಾಡದ ಅಮೃತಧಾರಾ ಗೋಶಾಲೆಯಲ್ಲಿ "ಗೋ ಸಂಧ್ಯಾ"

ಈ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದ ನಾಗೇಶ ಭಂಡಾರಿ ಇಡಗುಂಜಿ ಇವರಿಗೆ 25 ಸಾವಿರ ರೂ.ಗಳನ್ನು ನೀಡಿ, ಗೌರವಿಸಿ ಸನ್ಮಾನಿಸಲಾಗುವುದು. ಬಳಿಕ ಉಚಿತ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದ್ದು, ಭೀಷ್ಮ ವಿಜಯ ಮತ್ತು ಭಕ್ತ ಜಾಂಬವ ಆಖ್ಯಾನವನ್ನು ಆಡಿತೋರಿಸಲಿದ್ದಾರೆ. ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಪ್ರಸನ್ನ ಬಾಳಕಲ್, ಪರಮೇಶ್ವರ ಭಂಡಾರಿ, ರಾಮ ಭಂಡಾರಿ ಹಾಗೂ ಮುಮ್ಮೇಳದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಬಳ್ಕೂರು ಕೃಷ್ಣ ಯಾಜಿ, ವಿನಯ ಬೇರುಳ್ಳಿ, ಶ್ರೀಧರ ಚಪ್ಪರಮನೆ, ಅಭಿಷೇಕ ಅಡಿ, ಕುಳಿಮನೆ ಮತ್ತಿತರ ಕಲಾವಿದರುಗಳು ಭಾಗವಹಿಸಲಿದ್ದಾರೆ. 

RELATED ARTICLES  ಕ್ಯಾರ್ ಚಂಡ ಮಾರುತವಾಯ್ತು ಇದೀಗ ಮತ್ತೊಂದು ಚಂಡಮಾರುತದ ಭೀತಿ: ಮತ್ತೆ ಕರಾವಳಿಯಲ್ಲಿ ಮಳೆ?