ಭಟ್ಕಳ: ಕಳೆದ ಕೆಲ ದಿನಗಳಿಂದ ಸುರಿದ ಭಾರಿ ಮಳೆ ಮತ್ತು ಗಾಳಿಗೆ ಬೈಲೂರ ಗ್ರಾಮದ ತೂದಳ್ಳಿಯಲ್ಲಿ ಮನೆಯ ಮೇಲ್ಛಾವಣಿ ಮುರಿದು ಬಿದ್ದಿದೆ.
ಅವಘಡದಲ್ಲಿಅದೃಷ್ಟವಶಾತ್ ಮನೆಯ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಾದೇವಿ ಜಟ್ಟಾ ನಾಯ್ಕ ಅವರ ವಾಸ್ತವ್ಯದ ಪಕ್ಕದ ಮನೆಯ ಮೇಲ್ಛಾವಣಿ ಹಾನಿಗೊಂಡಿದ್ದು, ಗಾಳಿ- ಮಳೆಗೆ ಕುಸಿದು ಬಿದ್ದಿದೆ. ಸ್ಥಳಕ್ಕೆ ಕಂದಾಯ ನಿರೀಕ್ಷಕ ಚಾಂದ ಭಾಷಾ, ಗ್ರಾಮ ಲೆಕ್ಕಾಧಿಕಾರಿ ಶೇಖರ, ಗ್ರಾಮ ಸಹಾಯಕ ನಾಗಪ್ಪ ನಾಯ್ಕ ಪರಿಶೀಲನೆ ನಡೆಸಿದರು.
1.20 ಲಕ್ಷ ರೂಪಾಯಿ ಹಾನಿ ಅಂದಾಜಿಸಲಾಗಿದೆ ಎಂದು ವರದಿಯಾಗಿದೆ. ಇದರೊಂದಿಗೆ ಮಳೆಯ ಅವಾಂತರದ ಸಂಖ್ತೆ ಇನ್ನೂ ಹೆಚ್ಚುತ್ತಲೇ ಇದೆ.