ಕಾರವಾರ : ಕಾರ್ಗಿಲ್ ವಿಜಯ ದಿವಸವಾದ 20ನೇ ವರ್ಷಾಚರಣೆಯ ಅಂಗವಾಗಿ, ನೌಕಾಸೇನೆಯ ದೈತ್ಯ ಯುದ್ದನೌಕೆಯಾದ ಐ.ಎನ್.ಎಸ್. ವಿಕ್ರಮಾದಿತ್ಯ ನೌಕೆಯನ್ನು ಸಾರ್ವಜನಿಕರಿಗೆ ನೋಡಲು ಅನುವು ಮಾಡಿಕೊಡಲಾಗಿದೆ.
ಬೆಳಿಗ್ಗೆ 11 ಘಂಟೆಯಿಂದ ಸಾಯಂಕಾಲ 5 ಘಂಟೆವರೆಗೆ ವೀಕ್ಷಣೆಗೆ ಲಭ್ಯವಿರಲಿದೆ. 5 ನೇ ತರಗತಿ ಮೇಲ್ಪಟ್ಟ ಮಕ್ಕಳು ಹಾಗೂ ಸಾರ್ವಜನಿಕರು ವೀಕ್ಷಿಸಬಹುದಾಗಿದೆ.
ಐ.ಎನ್.ಎಸ್. ವಿಕ್ರಮಾದಿತ್ಯ ಹಾಗೂ ಐ.ಎನ್.ಎಸ್. ಸುವರ್ಣ ನೌಕೆ ವೀಕ್ಷಿಸಬಹುದಾಗಿದೆ.
ಅರಗಾ ಮುಖ್ಯದ್ವಾರದ ಮೂಲಕ ಪ್ರವೇಶ ಪಡೆಯಬಹುದು. ವಾಹನ, ಕ್ಯಾಮೆರಾ, ಮೊಬೈಲ್, ರೆಕಾರ್ಡರ್ ಇತ್ಯಾದಿ ಎಲೆಕ್ಟ್ರಾನಿಕ್ಸ್ ವಸ್ತುಗಳ ಪ್ರವೇಶ ನಿಶೇಧಿಸಲಾಗಿದೆ.
ಗುರುತಿನ ಚೀಟಿ (ಆಧಾರ್ ಕಾರ್ಡ, ವೋಟರ್ ಐಡಿ ಇತ್ಯಾಧಿ) ತೋರಿಸಿ ಪ್ರವೇಶಿಸಬಹುದಾಗಿದೆ.